newsfirstkannada.com

ಡಿವೋರ್ಸ್ ವದಂತಿ ಬೆನ್ನಲ್ಲೇ.. ವಿಶ್ವಕಪ್​​ಗೆ ವಿಮಾನ ಹತ್ತದ ಹಾರ್ದಿಕ್ ಪಾಂಡ್ಯ.. ಕೈಕೊಟ್ರಾ..?

Share :

Published May 28, 2024 at 7:30am

    T20 ವಿಶ್ವಕಪ್ 2024 ಜೂನ್ 2 ರಿಂದ ಪ್ರಾರಂಭವಾಗಲಿದೆ

    ಟೀಂ ಇಂಡಿಯಾದ ಮೊದಲ ಬ್ಯಾಚ್ ಯುಎಸ್ಎಗೆ ತೆರಳಿದೆ

    ಒಟ್ಟು 12 ಆಟಗಾರರು ವಿಶ್ವಕಪ್ ಆಡಲು USಗೆ ಹೋಗಿದೆ

T20 ವಿಶ್ವಕಪ್ 2024 ಜೂನ್ 2 ರಿಂದ ಪ್ರಾರಂಭವಾಗಲಿದೆ. ಮೇ 25 ರಂದು ಟೀಂ ಇಂಡಿಯಾದ ಮೊದಲ ಬ್ಯಾಚ್ ಯುಎಸ್ಎಗೆ ತೆರಳಿದೆ. ಇವರಲ್ಲಿ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಸೇರಿದಂತೆ 12 ಆಟಗಾರರು ಹೋಗಿದ್ದಾರೆ.

ರಿಸರ್ವ್ ಆಟಗಾರರಾದ ಶುಭಮನ್ ಗಿಲ್ ಮತ್ತು ಖಲೀಲ್ ಅಹ್ಮದ್ ಕೂಡ ಅಮೆರಿಕ ತಲುಪಿದ್ದಾರೆ. ಹಾರ್ದಿಕ್ ಪಾಂಡ್ಯ ಈ ಗುಂಪಿನಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್​ ಐಪಿಎಲ್​​-2024ರಲ್ಲಿ ಹೊರಬಿದ್ದ ಮೊದಲ ಟೀಂ ಆಗಿದೆ. ಜೊತೆಗೆ ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿಯ ನಡುವೆ, ಹಾರ್ದಿಕ್ ಅಮೆರಿಕಗೆ ತಲುಪದಿರುವುದು ಅಭಿಮಾನಿಗಳಿಗೆ ಆತಂಕದ ವಿಷಯವಾಗಿದೆ.

ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?

ವಿಚ್ಛೇದನದ ಸುದ್ದಿಯ ನಡುವೆಯೂ ಪಾಂಡ್ಯ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆ ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನದ ನಂತರ ಪಾಂಡ್ಯ ವಿದೇಶಕ್ಕೆ ಹಾರಿದ್ದಾರೆ. 2024ರ ಟಿ 20 ವಿಶ್ವಕಪ್‌ನಲ್ಲಿ ಉಪನಾಯಕರಾಗಿರುವ ಹಾರ್ದಿಕ್ ನೇರವಾಗಿ ನ್ಯೂಯಾರ್ಕ್‌ನಲ್ಲಿರುವ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

ಯಾರೆಲ್ಲ USA ತಲುಪಿಲ್ಲ?
ಹಾರ್ದಿಕ್ ಯಾವಾಗ ನ್ಯೂಯಾರ್ಕ್ ತಲುಪುತ್ತಾರೆ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಅವರ ವಿಚ್ಛೇದನದ ಸುದ್ದಿ ವಿಶ್ವಕಪ್ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ನಂಬಲಾಗಿದೆ. ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್, ರಿಂಕು ಸಿಂಗ್ ಐಪಿಎಲ್ 2024ರ ಪ್ಲೇಆಫ್‌ನಲ್ಲಿ ಆಡಿದ್ದಾರೆ. ಈ ಆಟಗಾರರು ಇನ್ನೂ ಅಮೆರಿಕಕ್ಕೆ ಹೋಗಿಲ್ಲ. ಪ್ಲೇಆಫ್‌ನಿಂದ ಆರ್‌ಸಿಬಿ ಹೊರಬಿದ್ದ ನಂತ ವಿರಾಟ್ ಕೊಹ್ಲಿ ಬಿಸಿಸಿಐನಿಂದ ಹೆಚ್ಚಿನ ವಿರಾಮ ಕೋರಿದ್ದರು. ಹೀಗಾಗಿ ಕೊಹ್ಲಿ ಸಹ ಅಮೆರಿಕಗೆ ಹೋಗಿಲ್ಲ.

ಇದನ್ನೂ ಓದಿ:ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್​ಗೆ ಬಿಗ್ ಟ್ವಿಸ್ಟ್..!

ಟಿ20 ವಿಶ್ವಕಪ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಮೀಸಲು ಆಟಗಾರರು – ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

ಇದನ್ನೂ ಓದಿ:ನಿಂದನೆ, ಅವಮಾನ.. ಕುಸಿದು ಹೋದ ಪಾಂಡ್ಯ.. ಒಂದೂವರೆ ತಿಂಗಳು ಟೂರ್ನಿಯ ಅವಧಿಯಲ್ಲಿ ನತಾಶಾ ಮಾಡಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಡಿವೋರ್ಸ್ ವದಂತಿ ಬೆನ್ನಲ್ಲೇ.. ವಿಶ್ವಕಪ್​​ಗೆ ವಿಮಾನ ಹತ್ತದ ಹಾರ್ದಿಕ್ ಪಾಂಡ್ಯ.. ಕೈಕೊಟ್ರಾ..?

https://newsfirstlive.com/wp-content/uploads/2024/05/HARDIK-PANDYA-5.jpg

Load More