5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು
ಭಾರತ ತಂಡದ ವಿರುದ್ಧ ಜಿಂಬಾಬ್ವೆಗೆ ಸತತ ನಾಲ್ಕನೇ ಸೋಲು!
4-1 ಮುನ್ನಡೆ ಸಾಧಿಸುವ ಮೂಲಕ ಸರಣಿ ಗೆದ್ದ ಭಾರತ ತಂಡ
ಇಂದು ಹರಾರೆ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡದ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಟೀಮ್ ಇಂಡಿಯಾ 4-1 ಮುನ್ನಡೆ ಸಾಧಿಸುವ ಮೂಲಕ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಟೀಮ್ ಇಂಡಿಯಾ ನೀಡಿದ 168 ರನ್ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 18.3 ಓವರ್ನಲ್ಲಿ 125 ರನ್ಗಳಿಗೆ ಆಲೌಟ್ ಆಗಿದೆ. ಜಿಂಬಾಬ್ವೆ ತಂಡದ ಪರ ತಡಿವಾನಾಶೆ ಮರುಮಣಿ 27, ಡಿಯೋನ್ ಮೈಯರ್ಸ್ 34, ಫರಾಜ್ ಅಕ್ರಂ 27 ರನ್ ಮಾತ್ರ ಗಳಿಸಿದ್ದರು.
ಇನ್ನು, ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾದ ಪರ ಯಶಸ್ವಿ ಜೈಸ್ವಾಲ್ 12, ಶುಭ್ಮನ್ ಗಿಲ್ 13, ಅಭಿಷೇಕ್ ಶರ್ಮಾ 14 ರನ್ಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಕ್ರೀಸ್ನಲ್ಲೇ ನಿಂತು ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ 45 ಬಾಲ್ನಲ್ಲಿ 4 ಸಿಕ್ಸರ್, 1 ಫೋರ್ ಸಮೇತ 58 ರನ್ ಚಚ್ಚಿದ್ರು.
ರಿಯಾನ್ ಪರಾಗ್ 22, ಶಿವಂ ದುಬೆ 26 ಮತ್ತು ರಿಂಕು ಸಿಂಗ್ 11 ರನ್ ಸಿಡಿಸಿದ್ರು. ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ 42 ರನ್ಗಳಿಂದ ಗೆದ್ದು ಬೀಗಿದೆ. ಟೀಮ್ ಇಂಡಿಯಾ ಪರ ಮುಖೇಶ್ ಕುಮಾರ್ 4 ವಿಕೆಟ್ ತೆಗೆದಿದ್ದಾರೆ. ಹಾಗೆಯೇ ದುಬೆ 2 ವಿಕೆಟ್ ಕಿತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ