newsfirstkannada.com

×

ಬೌಲಿಂಗ್​​ನಲ್ಲಿ ಶಮಿ ಕಮಾಲ್​​.. ಕಿವೀಸ್​ ವಿರುದ್ಧ ಗೆದ್ದು ವಿಶ್ವಕಪ್​​ ಫೈನಲ್​ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ!

Share :

Published November 15, 2023 at 10:34pm

Update November 15, 2023 at 10:37pm

    ಮಹಾ ಸಮರದಲ್ಲಿ ಕಿವೀಸ್​ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ

    ನ್ಯೂಜಿಲೆಂಡ್​ ತಂಡದ ವಿರುದ್ಧ ಹಳೇ ಸೇಡು ತೀರಿಸಿಕೊಂಡ ಭಾರತ

    ಮೊಹಮ್ಮದ್​ ಶಮಿ ಕಮಾಲ್​​, ಭಾರತ ತಂಡಕ್ಕೆ 70 ರನ್​ಗಳ ಜಯ!

ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್​​ ಮಹಾ ಸಮರದಲ್ಲಿ ನ್ಯೂಜಿಲೆಂಡ್​​ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ.

ಟೀಂ ಇಂಡಿಯಾ ನೀಡಿದ 398 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ನ್ಯೂಜಿಲೆಂಡ್​​ ತಂಡ ಆರಂಭದಲ್ಲೇ 2 ವಿಕೆಟ್​ಗಳನ್ನು ಕಳೆದುಕೊಂಡಿತು. ಡಿವೋನ್​​ ಕಾನ್ವೇ ಮತ್ತು ರಚಿನ್​​​ ರವೀಂದ್ರ ತಲಾ 13 ರನ್​ ಗಳಿಸಿ ವಿಕೆಟ್​​ ಒಪ್ಪಿಸಿದರು.

ಬಳಿಕ ಕ್ರೀಸ್​ಗೆ ಬಂದ ಕ್ಯಾಪ್ಟನ್​ ಕೇನ್​​ ವಿಲಿಯಮ್ಸನ್​​​ 1 ಸಿಕ್ಸರ್​​, 9 ಫೋರ್​ ಸಮೇತ 69 ರನ್​​ ಸಿಡಿಸಿದರು. ಕೊನೆವರೆಗೂ ಕ್ರೀಸ್​ನಲ್ಲಿದ್ದ ಮಿಚೆಲ್​​ ಕೇವಲ 119 ಬಾಲ್​ನಲ್ಲಿ 7 ಸಿಕ್ಸರ್​​, 9 ಫೋರ್​​ ಸಮೇತ 134 ರನ್​​ ಚಚ್ಚಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು.

ಇನ್ನು, ಮಿಚೆಲ್​ ಸಾಥ್​ ಕೊಟ್ಟ ಗ್ಲೆನ್​ ಫಿಲಿಪ್ಸ್​​ 2 ಸಿಕ್ಸರ್​​, 4 ಫೋರ್​ ಸಮೇತ 42 ರನ್​ ಸಿಡಿಸಿದ್ರೂ ಬುಮ್ರಾಗೆ ಬೌಲಿಂಗ್​ನಲ್ಲಿ ರವೀಂದ್ರ ಜಡೇಜಾಗೆ ಕ್ಯಾಚ್​ ನೀಡಿ ಹೊರ ನಡೆದರು.

ಟೀಂ ಇಂಡಿಯಾದ ಪರ ಮೊಹಮ್ಮದ್​ ಶಮಿ ಕಮಾಲ್​ ಮಾಡಿದ್ರು. ಬರೋಬ್ಬರಿ 7 ವಿಕೆಟ್​ ತೆಗದರು. ಇದರ ಪರಿಣಾಮ ನ್ಯೂಜಿಲೆಂಡ್​ 48.5 ಓವರ್​​ನಲ್ಲಿ 327 ರನ್​ಗೆ ಆಲೌಟ್​ ಆಗಿದೆ. ಈ ಮೂಲಕ ಸೋಲು ಕಂಡಿದೆ. ಹೀಗಾಗಿ ಟೀಂ ಇಂಡಿಯಾ ಸೆಮಿ ಫೈನಲ್​ ಗೆದ್ದು ವಿಶ್ವಕಪ್​​ ಫೈನಲ್​​ ಪ್ರವೇಶಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೌಲಿಂಗ್​​ನಲ್ಲಿ ಶಮಿ ಕಮಾಲ್​​.. ಕಿವೀಸ್​ ವಿರುದ್ಧ ಗೆದ್ದು ವಿಶ್ವಕಪ್​​ ಫೈನಲ್​ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ!

https://newsfirstlive.com/wp-content/uploads/2023/11/Shami.jpg

Load More