18 ವರ್ಷಕ್ಕೇ ಟೀಮ್ ಇಂಡಿಯಾಗೆ ಪದಾರ್ಪಣೆ
ಕೇವಲ ಮೂರೇ ವರ್ಷಕ್ಕೆ ತಂಡದಿಂದ ಹೊರಗೆ
ಫಾರ್ಮ್ ಕಥೆ ಬಿಡಿ, ಫಿಟ್ನೆಸ್ ಕೂಡ ಇಲ್ಲ
ಟೀಮ್ ಇಂಡಿಯಾಗೆ ಕ್ರಿಕೆಟ್ ಆಡಬೇಕು ಅನ್ನೋ ಒಂದೇ ಒಂದು ಉದ್ದೇಶದಿಂದ ಎಲ್ಲವನ್ನೂ ತ್ಯಾಗ ಮಾಡಿದವರ ಸ್ಪೂರ್ತಿಯ ಕಥೆಗಳನ್ನ ಕೇಳಿರ್ತಿರಿ. ಈತನ ಕಥೆ ಸಿಕ್ಕಾಪಟ್ಟೆ ಡಿಫರೆಂಟ್. ಟೀಮ್ ಇಂಡಿಯಾಗೆ ಆಡೋಕೆ ಏನು ಮಾಡಬಾರದೋ ಅದನ್ನೆಲ್ಲಾ ಈತ ಮಾಡ್ತಿದ್ದಾರೆ.
ಇಂಟರ್ ನ್ಯಾಷನಲ್ ಲೆವೆಲ್ನಲ್ಲಿ ದೇಶವನ್ನ ಪ್ರತಿನಿಧಿಸಬೇಕು ಅನ್ನೋದು ಪ್ರತಿಯೊಬ್ಬ ಯುವ ಕ್ರಿಕೆಟಿಗನ ಕನಸು. ಇದಕ್ಕಾಗಿ ಪಡೋ ಕಷ್ಟ ಅಷ್ಟಿಷ್ಟಲ್ಲ. ಅಕ್ಷರಶಃ ತಪಸ್ಸು ಮಾಡಿರ್ತಾರೆ. ಸಾಲು ಸಾಲು ಸೆಟ್ಬ್ಯಾಕ್ಗಳಾದ್ರೂ, ಟೀಕೆಗಳನ್ನ ಎದುರಿಸಿದ್ರೂ, ಬಿಡದೇ ಛಲದಿಂದ ಹೋರಾಡಿದ ಆಟಗಾರರಿದ್ದಾರೆ. 30 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯೂ ಮಾಡಿದ ಮೈಕಲ್ ಹಸ್ಸಿ, ಡೇವಿಡ್ ಹಸ್ಸಿ. 30 ವರ್ಷ 6 ತಿಂಗಳಿಗೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಈ ಕ್ರಿಕೆಟಿಗನ ಕಥೆ ವಿಭಿನ್ನ. ಟೀಮ್ ಇಂಡಿಯಾದಲ್ಲಿ ಸ್ಥಾನಕ್ಕೆ ಯಾವ ಮಟ್ಟಿಗೆ ಪೈಪೋಟಿಯಿದೆ ಅನ್ನೋದು ನಿಮಗೆ ಗೊತ್ತೆಯಿದೆ. ಆ ಪೈಪೋಟಿಯ ನಡುವೆಯೂ ಈ ಯಂಗ್ಸ್ಟರ್ಗೆ 18 ವರ್ಷಕ್ಕೇ ಅವಕಾಶ ಬಾಗಿಲು ತೆರೆಯಿತು. ಆರಂಭದಲ್ಲಿ ಎಲ್ಲರೂ ಈತನನ್ನ ದಿಗ್ಗಜ ಸಚಿನ್ ತೆಂಡುಲ್ಕರ್ಗೆ ಹೋಲಿಸಿದ್ರು. ಆದ್ರೀಗ ಈತ ತನ್ನ ಕರಿಯರ್ನ ತನ್ನ ಕೈಯಾರೆ ಹಾಳು ಮಾಡಿಕೊಳ್ತಿದ್ದಾನೆ. ಆ ಆಟಗಾರನೇ ಪೃಥ್ವಿ ಷಾ.
18 ವರ್ಷಕ್ಕೇ ಟೀಮ್ ಇಂಡಿಯಾಗೆ ಪದಾರ್ಪಣೆ
ಪೃಥ್ವಿ ಷಾ ಟೀಮ್ ಇಂಡಿಯಾಗೆ ಡೆಬ್ಯೂ ಮಾಡಿದ್ದು 18ನೇ ವಯಸ್ಸಿಗೆ. ಡೆಬ್ಯೂ ಮ್ಯಾಚ್ನಲ್ಲೇ ಸೆಂಚುರಿ ಚಚ್ಚಿದ್ದ ಪೃಥ್ವಿಯನ್ನ ಎಲ್ಲರೂ ಸಚಿನ್ ತೆಂಡುಲ್ಕರ್ಗೆ ಹೋಲಿಸಿದ್ರು. ಅತ್ಯದ್ಭುತವಾಗಿ ಕರಿಯರ್ನ ಕಿಕ್ ಸ್ಟಾರ್ಟ್ ಮಾಡಿದ ಈತನಿಗೆ ಇದೀಗ ಟೀಮ್ ಇಂಡಿಯಾದಿಂದಲೇ ಹೊರ ಬಿದ್ದಿದ್ದಾನೆ. ಲೆಜೆಂಡ್ ಆಗ್ತಾನೆ ಅಂದು ಕೊಂಡಿದ್ದ ಎಲ್ಲರ ಭವಿಷ್ಯ ಸುಳ್ಳಾಗಿದೆ. ಸದ್ಯದ ಪರಿಸ್ಥಿತಿ ನೋಡಿದ್ರೆ, ಈತನ ಕರಿಯರ್ ಮುಗಿದೆ ಹೊದಂತೆ ಭಾಸವಾಗ್ತಿದೆ.
ಫಾರ್ಮ್ ಕಥೆ ಬಿಡಿ, ಫಿಟ್ನೆಸ್ ಕೂಡ ಇಲ್ಲ..!
ಫಾರ್ಮ್ ಸಮಸ್ಯೆ ಎದುರಿಸಿ ಟೀಮ್ ಇಂಡಿಯಾದಿಂದ ಕಮ್ಬ್ಯಾಕ್ಗೆ ಪಡಲಾರದ ಕಷ್ಟ ಪಡ್ತಾರೆ. ಪೃಥ್ವಿ ಷಾ ವಿರುದ್ಧ ದಿಕ್ಕಿನಲ್ಲಿ ಸಾಗ್ತಿದ್ದಾರೆ. ನಿಜ ಹೇಳಬೇಕಂದ್ರೆ, ಏನನ್ನ ಮಾಡಬಾರದೋ ಅದನ್ನೆ ಮಾಡ್ತಿದ್ದಾರೆ. ಫಾರ್ಮ್ ಕಥೆಯನ್ನ ಬಿಡಿ.. ಪೃಥ್ವಿಯ ಫಿಟ್ನೆಸ್ ನೋಡಿದ್ರೆ, ನೀವು ಶಾಕ್ ಆಗ್ತಿರಾ. ಸದ್ಯಕ್ಕಿರೋ ಮಾಹಿತಿ ಪ್ರಕಾರ ಫಿಟ್ ಐ ಫೈನ್ ಆಗಿದ್ದ ಪೃಥ್ವಿ ಷಾ, ಇದೀಗ ಕಂಪ್ಲೀಟ್ ಅನ್ಫಿಟ್ ಆಗಿದ್ದಾರೆ. ಹತ್ತಿರ ಹತ್ತಿರ ನೂರು ಕೆಜಿಯಷ್ಟು ದಪ್ಪ ಆಗಿರುವ ಪೃಥ್ವಿಗೆ ರನ್ನಿಂಗ್ ಕೂಡ ಕಷ್ಟದ ವಿಚಾರವಾಗಿದ್ಯಂತೆ.
ಸ್ವಯಂಕೃತ ಅಪರಾಧದಿಂದ ಕರಿಯರ್ ಅಂತ್ಯ?
2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ದ ಪೃಥ್ವಿ ಷಾಗೆ ಇಂಜುರಿ ಭಾರೀ ಪೆಟ್ಟನ್ನೇ ನೀಡ್ತು. ಆ ಬಳಿಕ ಡೋಪಿಂಗ್ ಟೆಸ್ಟ್ನಲ್ಲಿ ಸಿಕ್ಕಿ ಬಿದ್ದು 1 ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ರು. ಆ ಬಳಿಕ ಗೆಸ್ಟ್ ಅಪಿರಿಯನ್ಸ್ ನೀಡಿದ್ದ ಪೃಥ್ವಿ, 5 ಟೆಸ್ಟ್, 6 ಏಕದಿನ, 1 ಟಿ20 ಪಂದ್ಯವನ್ನ ಮಾತ್ರ ಆಡಿದ್ದಾರೆ. 2021ರಲ್ಲಿ ಕೊನೆಯ ದಾಗಿ ಭಾರತವನ್ನ ಪ್ರತಿನಿಧಿಸಿದ ಪೃಥ್ವಿ, ಮುಂದೆ ವಾಪಾಸ್ಸಾಗೋ ಯಾವ ಲಕ್ಷಣವೂ ಕಾಣಿಸ್ತಿಲ್ಲ.
ಆಫ್ ಫೀಲ್ಡ್ನಲ್ಲಿ ಕಾಂಟ್ರವರ್ಸಿಗಳ ಕಿಂಗ್.!
ಆನ್ಫೀಲ್ಡ್ ಆಟದ ಹೊರತಾಗಿ ಸದ್ಯ ಕಾಂಟ್ರವರ್ಸಿಗಳಿಂದಲೇ ಪೃಥ್ವಿ ಷಾ ಹೆಚ್ಚು ಸದ್ದು ಮಾಡ್ತಿದ್ದಾರೆ. ಕಮ್ಬ್ಯಾಕ್ ಮಾಡಲು ಕಠಿಣ ಪರಿಶ್ರಮ ಪಡಬೇಕಾಗಿದ್ದ ಪೃಥ್ವಿ, ಎಂಜಾಯ್ಮೆಂಟ್ಗೆ ಹೆಚ್ಚು ಒತ್ತು ಕೊಡ್ತಿದ್ದಾರೆ. ಗರ್ಲ್ಫ್ರೆಂಡ್ಸ್, ಪಾರ್ಟಿ, ಪಬ್ ಅಂತಾ ಸುತ್ತಾಡ್ತಿರೋ ಪೃಥ್ವಿ, ಸ್ವಪ್ನಾ ಗಿಲ್ ಜೊತೆಗಿನ ಹೊಡೆದಾಟದಿಂದಲೂ ಸುದ್ದಿಯಾಗಿದ್ರು. ಪೃಥ್ವಿ ಷಾ ಟ್ಯಾಲೆಂಟೆಡ್ ಕ್ರಿಕೆಟಿಗ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಸದ್ಯದ ಫಿಟ್ನೆಸ್, ಫಾರ್ಮ್, ಲೈಫ್ ಸ್ಟೈಲ್ ನೋಡಿದ್ರೆ, ತನ್ನ ಕರಿಯರ್ ಅನ್ನ ತಾನೇ ಕೈಯಾರೆ ಹಾಳು ಮಾಡಿಕೊಳ್ತಿದ್ದಾರೆ ಅನ್ನಿಸ್ತಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ರೆ, ಕರಿಯರ್ ಶೀಘ್ರದಲ್ಲೇ ಅಂತ್ಯವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್