newsfirstkannada.com

ಅಭಿಮಾನಿಗಳಿಗೆ ಟೀಮ್​ ಇಂಡಿಯಾದಿಂದ ಸ್ಪೆಷಲ್​ ಗಿಫ್ಟ್.. ಬೆಲೆ ಕಟ್ಟಲಾಗದ ಐದು ಉಡುಗೊರೆ..!

Share :

Published July 5, 2024 at 11:57am

  ಭಾರತೀಯ ಕ್ರಿಕೆಟ್​ನ ಗೋಲ್ಡನ್​ ಮೂಮೆಂಟ್ಸ್​

  ಮರೆಯಲಾಗದ 5 ಅವಿಸ್ಮರಣೀಯ ಕ್ಷಣಗಳಿವು

  ಒಂದೊಂದು ಗೆಲುವಿನ ಕತೆಯೂ ರೋಚಕ

ಟೀಮ್​ ಇಂಡಿಯಾ ಫ್ಯಾನ್ಸ್​ ಹಾಗೂ ಆಟಗಾರರ ನಡುವೆ ವಿಶೇಷವಾದ ಬಂಧವಿದೆ. ಗೆದ್ದಾಗ ಸಂಭ್ರಮಿಸೋ ಭಾರತೀಯ ಫ್ಯಾನ್ಸ್, ಸೋತಾಗ ತಂಡ ಹಾಗೂ ಆಟಗಾರರ ಜೊತೆ ನಿಲ್ತಾರೆ. ಸದಾ ಬೆಂಬಲಿಸೋ ಫ್ಯಾನ್ಸ್​​ ಟೀಮ್​ ಇಂಡಿಯಾ ಆಟಗಾರರು ಐದು ಸ್ಪೆಷಲ್​ ಗಿಫ್ಟ್​ ಕೊಟ್ಟಿದ್ದಾರೆ.

ಭಾರತದಲ್ಲಿ ಜಂಟಲ್​ಮನ್​ ಗೇಮ್​ ಕ್ರಿಕೆಟ್​​ಗೆ ವಿಶೇಷವಾದ ಸ್ಥಾನವಿದೆ. ಇಲ್ಲಿ ಕ್ರಿಕೆಟ್ ಅನ್ನೋ ಗೇಮ್​​ ಧರ್ಮದ ಸ್ಥಾನ ಪಡೆದಿದೆ. ಆಟಗಾರರನ್ನ ಅಕ್ಷರಶಃ ದೇವರಂತೆ ಅಭಿಮಾನಿಗಳು ಆರಾಧಿಸ್ತಾರೆ. ಇದು ಇಂದು-ನಿನ್ನೆಯ ಕತೆಯಲ್ಲ. ಭಾರತ ತಂಡವಾಗಿ ಯಾವಾಗ ಕ್ರಿಕೆಟ್​ ಆಡಲು ಆರಂಭಿಸ್ತೋ ಅಂದಿನಿಂದ ನಡೆದು ಬಂದಿರೋದು. ಇಂತಹ ಅಭಿಮಾನಿಗಳಿಗೆ ಟೀಮ್​ ಇಂಡಿಯಾ ಆಟಗಾರರು ಐದು ಅವಿಸ್ಮರಣೀಯ ಗಿಫ್ಟ್​ ನೀಡಿದ್ದಾರೆ. ಎಂದೆಂದಿಗೂ ಬೆಲೆ ಕಟ್ಟಲಾಗದ ಉಡುಗೊರೆಗಳವು.

ಇದನ್ನೂ ಓದಿ:ಮುಡಾ ಹಗರಣ ಬಯಲು ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ವರ್ಗಾವಣೆ

ನಂ.1: 25, ಜೂನ್​ 1983
ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೂ ಎಂದಿಗೂ ಮರೆಯಾಗದ ಕ್ಷಣವಿದು. ಆಗ ಕ್ರಿಕೆಟ್​ ಲೋಕದಲ್ಲಿ ಬಲಾಢ್ಯ ತಂಡಗಳ ಪಾರುಪತ್ಯ ನಡೆಯುತ್ತಿತ್ತು. ಆ ಬಲಿಷ್ಠ ತಂಡಗಳಿಗೆ ಭಾರತ ತಂಡ ಲೆಕ್ಕಕ್ಕೇ ಇರಲಿಲ್ಲ. 1983 ವಿಶ್ವಕಪ್​ಗೆ ಆಡಲು ಇಂಗ್ಲೆಂಡ್​ಗೆ ಭಾರತ ತಂಡ ತೆರಳಿದಾಗ ಕಪಿಲ್​ ದೇವ್​ ಪಡೆ ಕಪ್​ ಗೆಲ್ಲುತ್ತೆ ಎಂದು ಯಾರೊಬ್ಬರೂ ಕೂಡ ಊಹಿಸಿಯೂ ಇರಲಿಲ್ಲ. ಫೈನಲ್​​ ಫೈಟ್​ನಲ್ಲಿ ಬಲಾಢ್ಯ ವೆಸ್ಟ್​ಇಂಡೀಸ್​ಗೆ ಸೋಲಿನ ರುಚಿ ತೋರಿಸಿದ ಟೀಮ್​ ಇಂಡಿಯಾ ಚೊಚ್ಚಲ ವಿಶ್ವಕಪ್​ ಗೆದ್ದು ಬೀಗಿತ್ತು.

ನಂ.2:  24, ಸೆಪ್ಟೆಂಬರ್​ 2007
2007 ಏಕದಿನ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಹೀನಾಯವಾಗಿ ಸೋತಿತ್ತು. ದ್ರಾವಿಡ್​, ಸಚಿನ್​, ಲಕ್ಷ್ಮಣ್​, ಗಂಗೂಲಿ ಸೇರಿದಂತೆ ಸೀನಿಯರ್​ ಆಟಗಾರರ ಮೇಲೆ ಜ್ವಾಲೆ ಹೊತ್ತಿ ಉರಿದಿತ್ತು. ಬೆನ್ನಲ್ಲೇ, ಚೊಚ್ಚಲ ಟಿ20 ವಿಶ್ವಕಪ್​ ವೇದಿಕೆ ಸಜ್ಜಾಗಿತ್ತು. ಸೀನಿಯರ್ಸ್​ ಬಿಟ್ಟು MS ಧೋನಿ ನೇತೃತ್ವದ ಯಂಗ್​ ಇಂಡಿಯಾ ಸೌತ್​ ಆಫ್ರಿಕಾಗೆ ತೆರಳಿತ್ತು. ಆಗಲೂ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಭಾರತ ಗೆಲ್ಲುತ್ತೆ ಎಂದು. ಫೈನಲ್​ನಲ್ಲಿ ಬದ್ಧವೈರಿ ಪಾಕ್​ ವಿರುದ್ಧ ರಣರೋಚಕ ಜಯ ಸಾಧಿಸಿದ ಧೋನಿ ಪಡೆ ಟ್ರೋಫಿ ಗೆದ್ದು ಬೀಗಿತ್ತು.

ಇದನ್ನೂ ಓದಿ:ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ.. ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ನಂ.3: 02, ಎಪ್ರಿಲ್​ 2011
ಧೋನಿಯ ಸಿಕ್ಸರ್​, ರವಿ ಶಾಸ್ತ್ರಿಯ ಈ ಕಾಮೆಂಟರಿಯನ್ನ ಭಾರತೀಯ ಕ್ರಿಕೆಟ್​ ಫ್ಯಾನ್ಸ್​ ಮರೆಯೋಕೆ ಸಾಧ್ಯವೇ ಇಲ್ಲ. 28 ವರ್ಷಗಳ ಕೊರಗಿಗೆ ಫುಲ್​ಸ್ಟಾಫ್​ ಬಿದ್ದ ದಿನ ಅದು. 1983ರ ಬಳಿಕ ಟೀಮ್​ ಇಂಡಿಯಾ ಬಲಿಷ್ಠ ತಂಡವಾಗಿ ರೂಪುಗೊಂಡರೂ ಏಕದಿನ ವಿಶ್ವಕಪ್​ ಗೆಲುವು ಮರೀಚಿಕೆ ಆಗಿತ್ತು. ಕೊನೆಗೂ ತವರಿನಲ್ಲಿ ನಡೆದ 2011ರ ಏಕದಿನ ವಿಶ್ವಕಪ್​ನಲ್ಲಿ ಕೋಟ್ಯಾನುಕೋಟಿ ಅಭಿಮಾನಿಗಳ ಕನಸು ನನಸಾಯ್ತು.

ನಂ.4: 23, ಜೂನ್​​​​​ 2013
2013 ಇಂಗ್ಲೆಂಡ್​ನಲ್ಲಿ ನಡೆದ ಚಾಂಪಿಯನ್ಸ್​ ಟ್ರೋಫಿ ಟೂರ್ನಿ ಟೀಮ್​ ಇಂಡಿಯಾ ಪ್ರತಿಷ್ಠೆಯ ಫೈಟ್​ ಆಗಿತ್ತು. ಏಕದಿನ ವಿಶ್ವ ಚಾಂಪಿಯನ್​ ಆಗಿ ಕಣಕ್ಕಿಳಿದಿದ್ದ ಭಾರತಕ್ಕೆ ಚಾಂಪಿಯನ್ಸ್​ ಟ್ರೋಫಿ ಗೆಲ್ಲೋ ಚಾಲೆಂಜ್​ ಇತ್ತು. ಈ ಸವಾಲನ್ನು ಧೋನಿ ಪಡೆ ಸೋಲಿಲ್ಲದ ಸರದಾರನಂತೆ ಗೆದ್ದು ಬೀಗ್ತು. ರಣ ರೋಚಕ ಫೈನಲ್​ನಲ್ಲಿ ಇಂಗ್ಲೆಂಡ್​ ಸೋಲಿಸಿ ಟೀಮ್​ ಇಂಡಿಯಾ ದಿಗ್ವಿಜಯ ಸಾಧಿಸಿತು.

ನಂ.5: 29, ಜೂನ್​ 2024
2013ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಟೀಮ್​ ಇಂಡಿಯಾ ಅನುಭವಿಸಿದ್ದು ಬರಿ ನಿರಾಸೆಯನ್ನ. 11 ವರ್ಷಗಳ ಕಾಲ ಟ್ರೋಫಿ ಗೆಲ್ಲಲಾಗದ ನೋವು ಭಾರತೀಯ ಅಭಿಮಾನಿಗಳನ್ನ ಕಾಡಿತ್ತು. ಆ ನೋವು, ಹತಾಶೆ, ಬೇಸರದ ಯಾತ್ರೆಗೆ ಈ ವರ್ಷ ಫುಲ್​ಸ್ಟಾಫ್​ ಬಿತ್ತು. ಬಾರ್ಬಡೋಸ್​ನಲ್ಲಿ ನಡೆದ ಫೈನಲ್ಸ್​ನಲ್ಲಿ ಸೌತ್​ ಆಫ್ರಿಕಾವನ್ನ ಸೋಲಿಸಿ ಭಾರತದ ತ್ರಿವರ್ಣ ಧ್ವಜವನ್ನ ಹೆಮ್ಮೆಯಿಂದ ರೋಹಿತ್​ ಪಡೆ ಹಾರಿಸಿತು. ಸೋಲಿಲ್ಲದ ಸರದಾರನಾಗಿ ಚಾಂಪಿಯನ್​ ಪಟ್ಟ ಅಲಂಕರಿಸಿತು.

ಇದನ್ನೂ ಓದಿ:ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!

ಹಿಂದಿದ್ದ ಅವಿಸ್ಮರಣೀಯ ಕ್ಷಣಗಳ ಪಟ್ಟಿಗೆ ಈ ಬಾರಿಯ ಟಿ20 ವಿಶ್ವಕಪ್​ ಕೂಡ ಸೇರಿಕೊಂಡಿದೆ. ಈ ಗೆಲುವಿನ ಯಾತ್ರೆ ಮುಂದೆಯೂ ಮುಂದುವರೆಯಲಿ. ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಭಾರತ ಗೆದ್ದು ಬೀಗಿ ಮತ್ತಷ್ಟು ಟ್ರೋಫಿಗಳನ್ನು ಗೆಲ್ಲಲಿ ಅನ್ನೋದು ಫ್ಯಾನ್ಸ್​ ಆಶಯವಾಗಿದೆ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಭಿಮಾನಿಗಳಿಗೆ ಟೀಮ್​ ಇಂಡಿಯಾದಿಂದ ಸ್ಪೆಷಲ್​ ಗಿಫ್ಟ್.. ಬೆಲೆ ಕಟ್ಟಲಾಗದ ಐದು ಉಡುಗೊರೆ..!

https://newsfirstlive.com/wp-content/uploads/2024/07/Team-India-18.jpg

Load More