Advertisment

ಬಾಂಗ್ಲಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಸ್ಟಾರ್​ ಆಟಗಾರರೇ ಔಟ್​

author-image
Ganesh Nachikethu
Updated On
ಬಾಂಗ್ಲಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಸ್ಟಾರ್​ ಆಟಗಾರರೇ ಔಟ್​
Advertisment
  • ಟೀಮ್​ ಇಂಡಿಯಾ, ಬಾಂಗ್ಲಾ ನಡುವಿನ 2 ಪಂದ್ಯಗಳ ಟೆಸ್ಟ್​​​ ಸರಣಿ ಮುಕ್ತಾಯ
  • ಮುಂದಿನ ವಾರದಿಂದ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಶುರು!
  • ಬಿಸಿಸಿಐನಿಂದ ಅಳೆದು ತೂಗಿ ಟೀಮ್​ ಇಂಡಿಯಾ ಬಲಿಷ್ಠ ಟಿ20 ತಂಡ ಪ್ರಕಟ

ಟೀಮ್​ ಇಂಡಿಯಾ, ಬಾಂಗ್ಲಾದೇಶದ ನಡುವಿನ 2 ಪಂದ್ಯಗಳ ಟೆಸ್ಟ್​​​ ಸರಣಿ ಮುಗಿದಿದೆ. ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ ಮುಂದಿನ ವಾರದಿಂದ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಶುರುವಾಗಲಿದೆ. ಹೀಗಾಗಿ ಅಳೆದು ತೂಗಿ ಟೀಮ್​ ಇಂಡಿಯಾ ಬಲಿಷ್ಠ ಟಿ20 ತಂಡವನ್ನು ಪ್ರಕಟ ಮಾಡಲಾಗಿದೆ.

Advertisment

ಕ್ಯಾಪ್ಟನ್​ ಸೂರ್ಯಕುಮಾರ್ ಯಾದವ್ ನೇತೃತ್ವದ 15 ಸದಸ್ಯರ ಭಾರತ ತಂಡವನ್ನು ಆಯ್ಕೆಗಾರರು ಪ್ರಕಟಿಸಿದ್ದಾರೆ. ವಿಕೆಟ್ ಕೀಪರ್ ರಿಷಬ್ ಪಂತ್ ವಿಶ್ರಾಂತಿ ನೀಡಿದ್ದು, ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ವಿಕೆಟ್ ಕೀಪರ್‌ಗಳಾಗಿ ಆಯ್ಕೆ ಮಾಡಲಾಗಿದೆ.

ಇನ್ನು, ಇರಾನಿ ಕಪ್‌ನಲ್ಲಿ ನಿರತರಾಗಿರೋ ಋತುರಾಜ್ ಗಾಯಕ್ವಾಡ್​​, ಇಶಾನ್​ ಕಿಶನ್​ಗೂ ಅವಕಾಶ ನೀಡಿಲ್ಲ. ಟೆಸ್ಟ್ ಸರಣಿಯಾಡಿರೋ ಶುಭ್ಮನ್​​ ಗಿಲ್​ಗೆ ವಿಶ್ರಾಂತಿ ನೀಡಲಾಗಿದೆ. ಯಶಸ್ವಿ ಜೈಸ್ವಾಲ್ ಬದಲಿಗೆ ಅಭಿಷೇಕ್​ ಶರ್ಮಾ ಅವರನ್ನು ಸೆಲೆಕ್ಟ್​ ಮಾಡಲಾಗಿದೆ.

ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದುಕೊಂಡಿದ್ದಾರೆ. ಕೆಕೆಆರ್ ವೇಗಿ ಹರ್ಷಿತ್ ರಾಣಾ ಕೂಡ ಸ್ಥಾನ ಬಾಂಗ್ಲಾ ಸರಣಿಯಲ್ಲಿ ಅವಕಾಶ ಪಡೆದಿದ್ದಾರೆ. ಹರ್ಷಿತ್ ಜತೆಗೆ ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ಜವಾಬ್ದಾರಿ ಹೊರಲಿದ್ದಾರೆ. ಭಾರತ ಅಕ್ಟೋಬರ್ 6 ರಿಂದ ಬಾಂಗ್ಲಾದೇಶ ವಿರುದ್ಧ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

Advertisment

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಟೀಮ್​ ಇಂಡಿಯಾ ಹೀಗಿದೆ!

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಯಾನ್ ಪರಾಗ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಾಷಿಂಗ್ಟನ್​ ಸುಂದರ್​​, ಹರ್ಷಿತ್ ರಾಣಾ, ನಿತೀಶ್ ಶರ್ಮಾ ಕುಮಾರ್ ರೆಡ್ಡಿ, ಜಿತೇಶ್ ಶರ್ಮಾ, ಮಯಾಂಕ್​ ಯಾದವ್​​, ವರುಣ್​​ ಚಕ್ರವರ್ತಿ.

ಇದನ್ನೂ ಓದಿ:ರೀಟೈನ್​ ಪಾಲಿಸಿಯಲ್ಲಿ ಭಾರೀ ಬದಲಾವಣೆ; ಮುಂಬೈ ಉಳಿಸಿಕೊಳ್ಳೋ ಆಟಗಾರರು ಇವರೇ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment