ದಶಕಗಳ ಹಿಂದೆ ಕಳೆದು ಹೋಗಿದ್ದ KINETIC DX ರೀ-ಲಾಂಚ್​.. ಆದ್ರೆ ಈಗ ಹೊಸ ಸ್ಟೈಲ್, ಹೊಸ ರೂಪ!

1990ರ ದಶಕದಲ್ಲಿ ಈ ಗಾಡಿ ಎಲ್ಲೆಲ್ಲೂ ಓಡಾಡ್ತಾ ಇತ್ತು. ಹಾಗೇ ಯಾವುದೇ ಫಿಲಂನಲ್ಲಿ ಹೀರೋಸ್​​ ಒಡಾಡ್ತಾ ಇದ್ದದ್ದೇ ಹಾಗೂ ಪ್ರತಿ ಮನೆಯಲ್ಲೂ ಆಲ್ಮೋಸ್ಟ್​ ಈ ಗಾಡಿ ಇರುತ್ತಿತ್ತು. ಆ ಪರಿ ಫೇಮಸ್​ ಆಗಿತ್ತು ಕೈನೆಟಿಕ್​ ಡಿಎಕ್ಸ್. ಆದ್ರೆ ಅದ್ಯಾಕೋ ಏನೋ ದಿಢೀರ್​ ಅಂತ ಈ ಗಾಡಿ ರೋಡ್​ನಿಂದ ಮಾಯ ಆಯ್ತು.

author-image
Bhimappa
KINETIC_DX_EV
Advertisment

1990ರ ದಶಕದಲ್ಲಿ ಈ ಗಾಡಿ ಎಲ್ಲೆಲ್ಲೂ ಓಡಾಡ್ತಾ ಇತ್ತು. ಹಾಗೇ ಯಾವುದೇ ಫಿಲಂನಲ್ಲಿ ಹೀರೋಸ್​​ ಒಡಾಡ್ತಾ ಇದ್ದದ್ದೇ ಹಾಗೂ ಪ್ರತಿ ಮನೆಯಲ್ಲೂ ಆಲ್ಮೋಸ್ಟ್​ ಈ ಗಾಡಿ ಇರುತ್ತಿತ್ತು. ಆ ಪರಿ ಫೇಮಸ್​ ಆಗಿತ್ತು ಕೈನೆಟಿಕ್​ ಡಿಎಕ್ಸ್. ಆದ್ರೆ ಅದ್ಯಾಕೋ ಏನೋ ದಿಢೀರ್​ ಅಂತ ಈ ಗಾಡಿ ರೋಡ್​ನಿಂದ ಮಾಯ ಆಯ್ತು. ಎಷ್ಟೋ ಜನ ಈ ಹಳೇ ಲವರ್​ ಫೀಲಿಂಗ್​ ಥರಾ.. ಈ ಗಾಡಿ ಬಿಟ್ಹೋತಲ್ಲಾ ಅಂತ ಕೊರಗಿ, ಅದೇ ಹಳೆ ಗಾಡೀನ ಓಡ್ಸಿ ಓಡ್ಸಿ, ಇನ್ನು ಈ ಗಾಡಿ ಮೂಮದಕ್ ಹೋಗಲ್ಲ ಅಂತ ಗೊತ್ತಾದ್​ ಮೇಲೆ ಈ ಗಾಡಿನಾ ಮೂಲೇಲಿ ಸ್ಟ್ಯಾಂಡ್​ ಹಾಕೋರು. ಆದ್ರೀಗ ಆ ಎಲ್ಲಾ ಭಗ್ನ ಕೈನೆಟಿಕ್​ ಪ್ರೇಮಿಗಳಿಗೆ ಒಂದು ಸಿಹಿ ಸುದ್ದಿ ಇದೆ.

ON A SERIOUS NOTE, ಜನ ಸ್ನೇಹಿ, ಪಾಕೆಟ್​ ಸ್ನೇಹಿ ಎಲ್ಲಕ್ಕಿಂತ ಮುಖ್ಯವಾಗಿ ಕುಟುಂಬ ಸ್ನೇಹಿಯಾಗಿದ್ದ ಈ KINETIC DX ಮತ್ತೊಮ್ಮೆ ರೀಲಾಂಚ್ ಆಗ್ತಾ ಇದೆ. ಸೋ ಹೊಸ ಲುಕ್​, ಫೀಲ್​ ಹಾಗೂ ಟೆಕ್ನಲಜಿಯೊಂದಿಗೆ KINETIC DX ಅಲ್ಲ, ಬದಲಾಗಿ KINETIC DX EV ಆಗಿ ಮಾರುಕಟ್ಟೆಗೆ ಲಗ್ಗೆ ಇಡ್ತಾ ಇದೆ. ಅಂದ್ರೆ ದಶಕಗಳಿಂದ ಕಳೆದು ಹೋಗಿದ್ದ ಪೆಟ್ರೋಲ್​ ಗಾಡಿ, ಈಗ ಎಲೆಟ್ರಿಕ್ ಗಾಡಿ ಆಗಿ ನಿಮ್ಮ ಮುಂದೆ ಬರುತ್ತಿದೆ. 

KINETIC_DX

ಫಸ್ಟ್​ ಆಫ್ ಆಲ್ ಈ ಗಾಡಿ ವಾಪಸ್​ ಮಾರುಕಟ್ಟೆಗೆ ಬರುತ್ತಿರೋದೆ ಖುಷಿ. ಆದ್ರೆ, ಹೊಸ EV ಗಾಡಿಯಾಗಿ ರೀ ಎಂಟ್ರಿ ಕೊಡ್ತಾ ಇರೋದೆ ಮತ್ತೊಂದು ವಿಷ್ಯ. ಈಗ ನಿಮ್ಮ ತಲೇಲಿ ಬೇಜಾನ್​ ವಿಷ್ಯಗಳು ಓಡಾಡ್ತಾ ಇರುತ್ತೆ ಅಲ್ವಾ?. ಈ ಗಾಡಿ ಹೆಂಗಿದೆ, ಎಷ್ಟಯ ಮೈಲೇಜ್​ ಕೊಡುತ್ತೆ, ಇದರ ಬೆಲೆ ಎಷ್ಟು ಅಂತ. ನಿಮ್ ಎಲ್ಲಾ ಡೌಟ್​ಗಳಿಗೆ, ಪ್ರಶ್ನೆಗಳಿಗೆ ಈ ಸ್ಟೋರೀಲಿ ಖಂಡಿತಾ ಉತ್ತರ ಸಿಗುತ್ತೆ. 

ವಿಶೇಷತೆಗಳೇನು?

SO AFTER A LONG GAP​, ಮಾರ್ಕೆಟ್​ನ ಕಬ್ಜ ಮಾಡೋಕೆ ಹೊರಟಿರೋ ಕೈನೆಟಿಕ್ ಗಾಡೀ ಬಗ್ಗೆ ಈಗಾಗ್ಲೇ ಸಾಕಷ್ಟು ಕ್ರೇಝ್​ ಹೆಚ್ಚಿದೆ. VISUALLY, DX ಮೂಲ ಮಾದರಿಯ ಸಿಗ್ನೇಚರ್ BOXY SILOUTTE ಅನ್ನು ಉಳಿಸಿಕೊಂಡಿದೆ. ಆದರೆ ಪೂರ್ಣ -LED ಲೈಟಿಂಗ್, ದಪ್ಪವಾದ 12-ಇಂಚಿನ ಚಕ್ರಗಳು, ಪ್ರಕಾಶಿತ ಕೈನೆಟಿಕ್ ಲೋಗೋ ಹೊಂದಿರುವ ಫ್ಲೈಸ್ಕ್ರೀನ್ ಮತ್ತು ಕೆಲವು ಮೆಟಲ್ ಬಾಡಿ ಪ್ಯಾನೆಲ್‌ಗಳೊಂದಿಗೆ ಅದನ್ನು MODERNIZE ಮಾಡಲಾಗಿದೆ .

ಆಧುನಿಕ 8.8 ಇಂಚಿನ ಬಣ್ಣದ LCD ಡಿಸ್ಪ್ಲೇ ಕೂಡ ಇದೆ. ಹೊಸ DX ಕೆಂಪು 'READY' ಸ್ಟಾರ್ಟರ್ ಬಟನ್ ಅನ್ನು ಸಹ ಹೊಂದಿದೆ, ಇದು ಮೂಲ ಕೈನೆಟಿಕ್ ಹೋಂಡಾದ ಸ್ವಿಚ್‌ಗೇರ್ ಸ್ಟೈಲ್​ ಆಗಿದೆ. ಸ್ಕೂಟರ್​ನಲ್ಲಿ 704mm ಉದ್ದದ ಸೀಟ್, 165mm ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,314mm ವೀಲ್‌ಬೇಸ್ ಅನ್ನು ಹೊಂದಿದೆ. ಜೊತೆಗೆ 220mm ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. 

ಇದನ್ನೂ ಓದಿ:25 ನಿಮಿಷಕ್ಕೆ 1 ಮೆಟ್ರೋ ಟ್ರೈನ್​​.. ಹಳದಿ ಮಾರ್ಗ ಪರಿಶೀಲಿಸಿದ DCM ಡಿ.ಕೆ ಶಿವಕುಮಾರ್​, ಏನ್ ಹೇಳಿದರು?

KINETIC_DX_New

ಕಂಪ್ಲೀಟ್​ ಚಾರ್ಜ್​ ಆಗೋಕೆ 4 ಗಂಟೆ

ಇನ್ನು ಪರ್ಫಾಮೆನ್ಸ್​ ವಿಷ್ಯಕ್ಕೆ ಬಂದ್ರೆ, 0-50ಕ್ಕೆ ಚಾರ್ಜ್​ ಆಗೋಕೆ 2 ಗಂಟೆ ಹಾಗೂ 0-80ಕ್ಕೆ 3 ಗಂಟೆ ಮತ್ತು ಕಂಪ್ಲೀಟ್​ ಚಾರ್ಜ್​ ಆಗೋಕೆ 4 ಗಂಟೆಗಳು ಬೇಕಾಗುತ್ತೆ. ಹಾಗೂ ಒಂದು ಕಂಪ್ಲೀಟ್​ ಚಾರ್ಜ್​ನಿಂದ ಸುಮಾರು 150 ಕಿಮೀ. ವರೆಗೂ ಓಡಿಸಬಹುದಾಗಿದೆ. 

ಇನ್ನೂ ಕಾಸ್ಟ್​ ವಿಷ್ಯಕ್ಕೆ ಬಂದ್ರೆ KINETIC DX 1.11 ಲಕ್ಷ ರೂಪಾಯಿಗಳಿಂದ ಶುರುವಾಗಿ KINETIC DX+ ಬೆಲೆ 1.17 ಲಕ್ಷ ರೂಪಾಯಿವರೆಗೆ ಲಭ್ಯ ಇದೆ. ಇದರ ಜೊತೆಗೆ 9 ವರ್ಷದ ಮತ್ತು 1 ಲಕ್ಷ ಕಿ.ಮೀ.ನ ವಾರೆಂಟಿ ಕೂಡ ನೀಡಲಾಗ್ತಾ ಇದೆ. ಸೋ ಇಷ್ಟೆಲ್ಲಾ ರಿವ್ಯೂ ಹೊಂದಿರೋ KINETIC DX ಈಗಾಗ್ಲೇ ಬಿಡುಗಡೆ ಆಗಿದೆ. ಹಾಗಿದ್ರೆ ಹಳೇ KINETIC DX ಫ್ಯಾನ್​.. ASSEMBLE!

ವಿಶೇಷ ವರದಿ:ರಾಹುಲ್ ದಯಾನ್, ನ್ಯೂಸ್​ ಫಸ್ಟ್​  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

New Kinetic DX
Advertisment