/newsfirstlive-kannada/media/media_files/2025/12/24/isro-bluebird-block-2-2025-12-24-10-26-17.jpg)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ BlueBird Block-2 ಎಂಬ ಉಪಗ್ರಹವನ್ನು ಯಶಸ್ವಿಯಾಗಿದೆ. ಅಮೆರಿಕದ ಕಂಪನಿ ‘ಎಎಸ್‌ಟಿ ಸ್ಪೇಸ್ ಮೊಬೈಲ್’ನ ಪ್ರಮುಖ ಉಪಗ್ರಹ (AST SpaceMobile) BlueBird Block-2 ಆಗಿದೆ.
ಬಾಹುಬಲಿ ರಾಕೆಟ್ LVM3-M6 ಕಾರ್ಯಾಚರಣೆ ಮೂಲಕ ಸಂವಹನ ಉಪಗ್ರಹ ಬ್ಲೂಬರ್ಡ್ ಬ್ಲಾಕ್-2 ಅನ್ನು ಭೂಮಿಯ ಕೆಳ ಕಕ್ಷೆಯಲ್ಲಿ ಇರಿಸಲಾಗಿದೆ. ಇಂದು ಬೆಳಗ್ಗೆ 8:55:30 ಕ್ಕೆ ಯಶಸ್ವಿಯಾಗಿ ಉಡಾವಣೆಯಾಗಿದೆ.
/filters:format(webp)/newsfirstlive-kannada/media/media_files/2025/12/24/isro-bluebird-block-2-1-2025-12-24-10-29-16.jpg)
BlueBird ವಿಶೇಷತೆ ಏನು..?
ಈ ಸಂವಹನ ಉಪಗ್ರಹವು ಸುಮಾರು 6100 ಕೆಜಿ ತೂಕ ಹೊಂದಿದೆ. ಈ ಕಾರ್ಯಾಚರಣೆಯ ಅಡಿಯಲ್ಲಿ, ಇಸ್ರೋ ತನ್ನ ಹೆವಿ-ಲಿಫ್ಟ್ ರಾಕೆಟ್ LVM3 ಮೂಲಕ ಭೂಮಿಯ ಕೆಳ ಕಕ್ಷೆಯಲ್ಲಿ ಉಪಗ್ರಹ ಇರಿಸಿದೆ. ಇಸ್ರೋ ಪ್ರಕಾರ, 6100 ಕೆಜಿ ತೂಕದ ಈ ಉಪಗ್ರಹವು LVM-3 ಉಡಾವಣಾ ಇತಿಹಾಸದಲ್ಲೇ ಭೂಮಿಯ ಅತ್ಯಂತ ಕೆಳ ಕಕ್ಷೆಯಲ್ಲಿ (LEO) ಇರಿಸಲಾದ ಭಾರವಾದ ಪೇಲೋಡ್ ಆಗಿದೆ.
ಬ್ಲೂ ಬರ್ಡ್ ಬ್ಲಾಕ್ 2 ಉಪಗ್ರಹ ಉಡಾವಣೆಯು 4G ಮತ್ತು 5G ಸ್ಮಾರ್ಟ್‌ಫೋನ್‌ಗಳಿಗೆ ನೇರ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುತ್ತದೆ. ಇದು ಟವರ್​ಗಳ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ.
ಈ ಕಾರ್ಯಾಚರಣೆಯ ಗುರಿ ಏನು?
ಇದು ಸಂಪೂರ್ಣ ವಾಣಿಜ್ಯಿಕ ಉಡಾವಣೆ. ಸಂವಹನ ಉಪಗ್ರಹ ಉಡಾವಣಾ ವಲಯದಲ್ಲಿ ಭಾರತವು ಇಡೀ ಜಗತ್ತಿಗೆ ಮಹತ್ವದ ಅವಕಾಶವನ್ನು ನೀಡುತ್ತಿದೆ. ಭಾರತದ ನೆಲೆಯನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಬಲಪಡಿಸೋದು ಇದರ ಗುರಿಯಾಗಿದೆ. ಈ ಉಪಗ್ರಹದ ಯಶಸ್ವಿ ಉಡಾವಣೆ ನಂತರ.. ಮೊಬೈಲ್ ಬಳಕೆದಾರರು 4G ಮತ್ತು 5G ಸೇವೆಗಳನ್ನು ಪ್ರವೇಶಿಸಲು ಸಹಾಯ ಆಗಲಿದೆ. ವಿಶೇಷವಾಗಿ ದೂರದ ಪ್ರದೇಶಗಳು ಮತ್ತು ಸೀಮಿತ ನೆಟ್‌ವರ್ಕ್ ವ್ಯಾಪ್ತಿಯನ್ನು ಹೊಂದಿರುವ ಸ್ಥಳಗಳಲ್ಲಿಯೂ ಇಂಟರ್ನೆಟ್ ಬ್ರೌಸ್ ಮಾಡಲು ಸಾಧ್ಯವಾಗುತ್ತದೆ. ಇದರರ್ಥ 4G ಮತ್ತು 5G ಧ್ವನಿ ಕರೆಗಳು, ವೀಡಿಯೊ ಕರೆಗಳು, ಸಂದೇಶ ಕಳುಹಿಸುವಿಕೆ ಮತ್ತು ಡೇಟಾ ಸೇವೆಗಳು ಜಗತ್ತಿನ ಎಲ್ಲಿಯಾದರೂ ಲಭ್ಯವಿರುತ್ತದೆ.
ಅಂದರೆ ಕಳಪೆ ನೆಟ್‌ವರ್ಕ್ ಇರುವ ಜಾಗದಲ್ಲೂ ಜನ ವೀಡಿಯೊ ಕರೆಗಳನ್ನು ಮಾಡಬಹುದು. ಉಪಗ್ರಹದ ಮೂಲಕ ನೇರವಾಗಿ ಮೊಬೈಲ್ ನೆಟ್‌ವರ್ಕ್ ಸಾಧಿಸಬಹುದು. ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಸಂಪರ್ಕವು ಉಪಗ್ರಹದಿಂದ 4G ಮತ್ತು 5G ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಸಿಗೋದ್ರಿಂದ ಟವರ್ಗಳ ಅಗತ್ಯತೆಯನ್ನೂ ಕಡಿಮೆ ಮಾಡುತ್ತದೆ.
ಅಮೆರಿಕನ್ ಕಂಪನಿ AST ಸ್ಪೇಸ್‌ಮೊಬೈಲ್, ಸೆಪ್ಟೆಂಬರ್ 2024 ರಲ್ಲಿ ಬ್ಲೂಬರ್ಡ್ -1 ಸೇರಿದಂತೆ 5 ಉಪಗ್ರಹಗಳನ್ನು ಉಡಾಯಿಸಿದೆ. ಈ ಕಂಪನಿಯು ವಿಶ್ವಾದ್ಯಂತ 50ಕ್ಕೂ ಹೆಚ್ಚು ಮೊಬೈಲ್ ಆಪರೇಟರ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಭವಿಷ್ಯದಲ್ಲಿ ಇದೇ ರೀತಿಯ ಉಪಗ್ರಹ ಉಡಾವಣೆ ಮಾಡಲು ಪ್ಲಾನ್ ಮಾಡಿದೆ. ಸಾಂಪ್ರದಾಯಿಕ ನೆಟ್‌ವರ್ಕ್‌ಗಳು ಪ್ರವೇಶಿಸಲಾಗದ ಪ್ರದೇಶಗಳಿಗೆ ಮೊಬೈಲ್ ಸಂಪರ್ಕ ತರುವ ಗುರಿಯನ್ನು ಈ ಕಂಪನಿ ಹೊಂದಿದೆ.
ಈ ಸೇವೆ ಪಡೆಯಲು ಬಳಕೆದಾರರು ‘ಸೇವಾ ಪೂರೈಕೆ’ದಾರರನ್ನು ಬದಲಾಯಿಸುವ ಅಗತ್ಯವಿಲ್ಲ. ಕಂಪನಿಯು ಪ್ರಪಂಚದಾದ್ಯಂತ ಮೊಬೈಲ್ ಆಪರೇಟರ್‌ಗಳೊಂದಿಗೆ ಕೆಲಸ ಮಾಡ್ತಿರೋದ್ರಿಂದ ಜನರಿಗೆ ಸುಲಭವಾಗಿ ಸಿಗಲಿದೆ.
ಇಸ್ರೋ ಮತ್ತು ಎಎಸ್‌ಟಿ ಸ್ಪೇಸ್‌ಮೊಬೈಲ್ ನಡುವಿನ ಒಪ್ಪಂದದ ಅಡಿಯಲ್ಲಿ ಉಪಗ್ರಹ ಉಡಾವಣೆ ಆಗಿದೆ.
ಇದು ಮೀಸಲಾದ ವಾಣಿಜ್ಯ ಉಡಾವಣೆಯಾಗಿದೆ. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮತ್ತು ಬೆಂಗಳೂರು ಮೂಲದ ಇಸ್ರೋ ವಾಣಿಜ್ಯ ವಿಭಾಗವಾದ AST ಸ್ಪೇಸ್‌ಮೊಬೈಲ್ ನಡುವಿನ ಒಪ್ಪಂದದ ಅಡಿಯಲ್ಲಿ ಇದನ್ನು ನಡೆಸಲಾಗಿದೆ -ಇಸ್ರೋ
ಇದನ್ನೂ ಓದಿ: ದೇವರ ದರ್ಶನ ಮುಗಿಸಿ ಬರ್ತಿದ್ದಾಗ ಭೀಕರ ಅಪಘಾತ; ಒಂದೇ ಕುಟುಂಬದ ಮೂವರು ನಿಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us