/newsfirstlive-kannada/media/post_attachments/wp-content/uploads/2024/07/BSNL-1.jpg)
ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ರೀಚಾರ್ಜ್ ಪ್ಲಾನ್ ಬೆಲೆ ಭಾರೀ ಹೆಚ್ಚಾಗಿದೆ. ಇದೀಗ BSNL ಗ್ರಾಹಕರಿಗೆ ಒಳ್ಳೆಯ ದಿನಗಳು ಬಂದಿವೆ. ಈ ಕಂಪನಿಗಳು ಪ್ಲಾನ್ಗಳ ಬೆಲೆ ಹೆಚ್ಚಿಸಿದ್ದರೂ BSNL ಒಂದು ರೂಪಾಯಿಯನ್ನೂ ಹೆಚ್ಚಿಸಿಲ್ಲ.
ಇದರಿಂದ ಅನೇಕ ಬಳಕೆದಾರರು BSNL ಕಡೆಗೆ ಮುಖ ಮಾಡ್ತಿದ್ದಾರೆ. ಲಕ್ಷಾಂತರ ಹೊಸ ಬಳಕೆದಾರರು BSNLಗೆ ಸೇರಿದ್ದಾರೆ. ಇದೀಗ ಬಿಎಸ್ಎನ್ಎಲ್ ಮತ್ತೊಂದು ಆಕರ್ಷಕ ರೀಚಾರ್ಜ್ ಪ್ಲಾನ್ ರೂಪಿಸಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಬಳಕೆದಾರರಿಗಾಗಿ ಅತ್ಯಂತ ಅಗ್ಗದ ಯೋಜನೆ ಬಿಡುಗಡೆ ಮಾಡಿದೆ. ಕಡಿಮೆ ಬಜೆಟ್‌ನಲ್ಲಿ ಇಡೀ ತಿಂಗಳು ಮಾತನಾಡಲು ಮತ್ತು SMS ಕಳುಹಿಸಲು ಅವಕಾಶ ಕಲ್ಪಿಸಿದೆ. ರೀಚಾರ್ಜ್ನ ಮೊತ್ತ 147 ರೂಪಾಯಿ. 147 ಪ್ಲಾನ್ 30 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್‌ನ ಒಂದು ದಿನದ ಬೆಲೆ ಕೇವಲ 5 ರೂಪಾಯಿ ಆಗಿದೆ.
ಕಡಿಮೆ ಬಜೆಟ್‌ನಲ್ಲಿ ಉತ್ತಮ ರೀಚಾರ್ಜ್ ಪ್ಲಾನ್ ಹುಡುಕುತ್ತಿದ್ದರೆ, ಇದು ಉತ್ತಮ ಆಯ್ಕೆ. 30 ದಿನಗಳ ಮಾನ್ಯತೆಯೊಂದಿಗೆ, ಬಳಕೆದಾರರು ಅನಿಯಮಿತ ಧ್ವನಿ ಕರೆ ಸೇವೆ ಪಡೆಯುತ್ತಾರೆ. 10GB ಡೇಟಾ ಸಿಗಲಿದೆ. 10GB ಡೇಟಾ ಖಾಲಿಯಾದ ನಂತರ ಇಂಟರ್ನೆಟ್ ವೇಗವು 40 Kbps ಗೆ ಕಡಿಮೆಯಾಗುತ್ತದೆ.
ಇದನ್ನೂ ಓದಿ:WhatsApp ಬಳಸುವವರೇ.. ಕೇಂದ್ರ ಸರ್ಕಾರದಿಂದ ರೆಡ್ ಅಲರ್ಟ್, ಎಚ್ಚೆತ್ತುಕೊಳ್ಳಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ