/newsfirstlive-kannada/media/media_files/2025/08/17/whatsapp-2025-08-17-09-00-22.jpg)
ಬಹುತೇಕ ಮಂದಿ ಬಳಸುವ ಅಪ್ಲಿಕೇಷನ್ಗಳಲ್ಲಿ WhatsApp ಕೂಡ ಒಂದು. ಅದರಲ್ಲೂ ವಾಟ್ಸ್ಆ್ಯಪ್ ವೆಬ್ ಎಂಟ್ರಿ ವ್ಯಾಪಾರ ವಲಯದಲ್ಲಿ ಸಕ್ರಿಯವಾಗಿದೆ. ಇದೀಗ ಕೇಂದ್ರ ಸರ್ಕಾರ WhatsApp ವೆಬ್ ಬಳಸೋರಿಗೆ ಕೆಲವು ಭದ್ರತಾ ಎಚ್ಚರಿಕೆಗಳನ್ನು ನೀಡಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಪ್ರಕಾರ.. WhatsApp ವೆಬ್ ಡೇಟಾ ಸೋರಿಕೆಯ ಎಚ್ಚರಿಕೆ ನೀಡಿದೆ. ಕಾರ್ಪೊರೇಟ್ ಡಿವೈಸ್ಗಳಲ್ಲಿ WhatsApp ವೆಬ್ ಬಳಸುವುದರಿಂದ ವೈಯಕ್ತಿಕ ಮಾಹಿತಿ ಮಾತ್ರವಲ್ಲದೇ ಪ್ರಮುಖ ಕಂಪನಿಯ ಮಾಹಿತಿಯೂ ಸೋರಿಕೆಯಾಗಬಹುದು ಎಂದಿದೆ.
ಇದನ್ನೂ ಓದಿ: ಬೈಕ್ ಪ್ರಿಯರಿಗೆ ಬಂಪರ್ ಆಫರ್.. HARLEY-DAVIDSON ಕಂಪನಿಯಿಂದ 3 ಲಕ್ಷ ಡಿಸ್ಕೌಂಟ್; ಏನದು..?
WhatsApp ವೆಬ್ ಬಳಕೆದಾರರು ಸ್ಕ್ರೀನ್ ಮಾನಿಟರಿಂಗ್, ಮಾಲ್‌ವೇರ್ ಮತ್ತು ಬ್ರೌಸರ್ ಹೈಜಾಕಿಂಗ್‌ನಂತಹ ಭದ್ರತಾ ಬೆದರಿಕೆಗಳಿಗೆ ಒಡ್ಡಿಕೊಳ್ಳುತ್ತಾರೆ. ನೀವು ಕಚೇರಿ ವೈ-ಫೈ ಬಳಸುವಾಗ ನಿಮ್ಮ ಕಂಪನಿಯು ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರವೇಶಿಸಬಹುದು. ಹೆಚ್ಚುವರಿಯಾಗಿ WhatsApp ವೆಬ್ ಬಳಸುವ ಸಾಧನಗಳು ಕಳೆದುಹೋದರೆ ದೊಡ್ಡ ಡೇಟಾ ಸೋರಿಕೆಯಾಗುವ ಅಪಾಯವಿದೆ ಎಂದು ಸೂಚಿಸಿದೆ.
ಮುನ್ನೆಚ್ಚರಿಕೆಗಳು
- ಕೆಲಸದ ಉದ್ದೇಶಗಳಿಗಾಗಿ ವಾಟ್ಸ್ಆ್ಯಪ್ ವೆಬ್ ಬಳಸೋರು ಜಾಗೃತೆ
- ಕೆಲಸ ಮುಗಿದ ಬಳಿಕ ಲಾಗ್ ಔಟ್ ಮಾಡಿ
- ನೀವು ಬಳಸಿದ ಡಿವೈಸ್ ಲಾಕ್ ಮಾಡಿ.
- ಅಸುರಕ್ಷಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
- ಕಂಪನಿಯ ಭದ್ರತಾ ಮಾನದಂಡಗಳನ್ನು ಅನುಸರಿಸುವುದು ಮುಖ್ಯ. ಸಮಯಕ್ಕೆ ಸರಿಯಾಗಿ ಸೆಕ್ಯೂರಿಟಿ ಅಪ್ಡೇಟ್ಸ್ ಮಾಡೋದನ್ನ ಮರೆಯಬಾರದು.
ಇದನ್ನೂ ಓದಿ:ಫ್ಯಾಮಿಲಿ ಸ್ನೇಹಿ WAGON-R ಕಾರ್ನ ‘1 ಕೋಟಿ’ಯ ಸಾಧನೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ