/newsfirstlive-kannada/media/media_files/2025/08/08/wagon-r-1-2025-08-08-22-37-29.jpg)
ನಮಗೆ WAGON-R ಕಾರಿನ ಬಗ್ಗೆ ಚೆನ್ನಾಗಿಯೇ ಗೊತ್ತು.. ಮಾರುತಿ ಸುಜುಕಿ ಕಂಪನಿ ಲಾಂಚ್​ ಮಾಡಿದ ಒನ್ ಆಫ್ ದ ಮೋಸ್ಟ್​ ಫ್ಯಾಮಿಲಿ ಫ್ರೆಂಡ್ಲಿ ಹಾಗೂ ಸ್ಪೇಶಿಯಸ್​ ಕಾರ್​ಗಳಲ್ಲಿ ಇದು ಅಗ್ರಸ್ಥಾನದಲ್ಲಿ ನಿಲ್ಲುತ್ತೆ. ಸೋ ಇಂತಹ ಫ್ಯಾಮಿಲಿ ಕಾರ್​​ ಇದೀಗ ವಿಶ್ವದ ಮಾರುಕಟ್ಟೆಯಲ್ಲಿ ಒಂದು ಮೈಲ್​​​​ಸ್ಟೋನ್​ ಸಾಧನೆ ಮಾಡಿದೆ.
31 ವರ್ಷ, 9 ತಿಂಗಳಲ್ಲಿ 1 ಕೋಟಿ ಯುನಿಟ್‌ಗಳ ಜಾಗತಿಕ ಮಾರಾಟದ ಮೈಲಿಗಲ್ಲನ್ನು WAGON-R ದಾಟಿದೆ. ಅಂದ್ರೆ 1 ಕೋಟಿ WAGON-R ಕಾರ್​​ಗಳನ್ನು ಮಾರುತಿ ಸುಜುಕಿ ಸಂಸ್ಥೆ, ಗ್ಲೋಬಲಿ ಮಾರಾಟ ಮಾಡಿದ ಸಾಧನೆ ಮಾಡಿದೆ. ಸುಮಾರು 75 ದೇಶಗಳಲ್ಲಿ ಇದರ ಮಾರಾಟವಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 12 ಸಾವಿರ ಉದ್ಯೋಗ ಸೃಷ್ಟಿಗೆ ಪೊದ್ದಾರ್ ಕಂಪನಿಯಿಂದ ಹೂಡಿಕೆ
ಇದನ್ನು 2019ರಲ್ಲಿ ಸ್ವಲ್ಪ ಮಾಡಿಫೈ ಮಾಡಿ 3-ಜೆನ್​ ಕಾರ್​ ಆಗಿ ಪರಿಚಯವಾಗಿತ್ತು. ಆ ಮಾಡೆಲ್​ನ ಕಾರ್​ಗಳು ಸುಮಾರು 11.9 ಲಕ್ಷ ಯೂನಿಟ್​ಗಳು ಸೇಲ್​ ಆಗಿದೆ. ಒಟ್ಟಾರೆಯಾಗಿ 1 ಕೋಟಿ ಕಾರ್​ಗಳನ್ನು ಸೇಲ್​ ಮಾಡಿದ ಕೀರ್ತಿ ಈ ಮಾರುತಿ ಸುಜುಕಿಗೆ ಸಲ್ಲುತ್ತೆ. ಈ ಕಾರು​ ನಮ್ಮ ದೇಶದಲ್ಲಿ ಕಮಾಲ್ ಮಾಡಿದೆ.
ಇಲ್ಲಿವರೆಗೂ ಸೇಲ್​ ಆಗಿರೋ 1 ಕೋಟಿ ಕಾರ್​ಗಳಲ್ಲಿ ಜೂನ್​ವರೆಗೂ ನಮ್ಮ ದೇಶದಲ್ಲೇ 34,14,176 WAGON-R ಕಾರ್​ಗಳು ಸೇಲ್ ಆಗಿವೆ. ಆರ್ಥಿಕ ವರ್ಷ 2022ರಿಂದ ಬೆಸ್ಟ್​ ಸೆಲ್ಲಿಂಗ್​ ಕಾರ್​​ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಿಂದ 40 ವಿಧದ ಉದ್ಯೋಗಕ್ಕೆ ಕುತ್ತು, ಮೈಕ್ರೋಸಾಫ್ಟ್ ಕಂಪನಿಯ ವರದಿಯಲ್ಲಿ ಹೇಳಿದ್ದೇನು?
/filters:format(webp)/newsfirstlive-kannada/media/media_files/2025/08/08/wagon-r-1-2025-08-08-22-37-29.jpg)
ಇದರ ಜೊತೆಗೆ 1999ರ ಡಿಸೆಂಬರ್​​ನಲ್ಲಿ ನಮ್ಮ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ನಂತರ ಸುಮಾರು 25ಕ್ಕೂ ಹೆಚ್ಚು ವರ್ಷಗಳ ಕಾಲ ಮನೆ ಮಾತಾಗಿದೆ. ಅತ್ಯಂತ ದೀರ್ಘಕಾಲ ಮಾರುಕಟ್ಟೆಯಲ್ಲಿ ಉಳಿದುಕೊಂಡ ಸಾಧನೆ ಮಾಡಿದ ಕೇವಲ 3 ಕಾರ್​​ಗಳಲ್ಲಿ ಇದು ಕೂಡ ಒಂದು. MERCEDES BENZ E- CLASS ಮತ್ತು HONDA CITYಯ ನಂತರ ಈ ಸಾಧನೆ ಮಾಡಿದ ಕಾರ್​ WAGON-R.
/filters:format(webp)/newsfirstlive-kannada/media/media_files/2025/08/08/wagon-r-2-2025-08-08-22-40-53.jpg)
ಬರೀ ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೆ ಯುರೋಪ್, ಜಪಾನ್, ಮತ್ತು ಏಷ್ಯಾದ ಹಲವು ದೇಶಗಳಲ್ಲಿ WAGON-R ಮಾರಾಟದಲ್ಲಿದೆ. ಜಪಾನ್‌ನಿಂದ ರಫ್ತು ಮಾಡಲಾದ ಮಾದರಿಗಳ ಜೊತೆಗೆ WAGON-R SERIESನ ಭಾರತ, ಹಂಗೇರಿ ಮತ್ತು ಇಂಡೋನೇಷ್ಯಾ ಸೇರಿದಂತೆ ಇತರ ಪ್ರದೇಶಗಳಲ್ಲಿ ಉತ್ಪಾದಿಸಲಾಗಿದೆ. ವಿಶೇಷ ಅಂದ್ರೆ ಲೋಕಲ್ ಫ್ಲೇವರ್​ ಹಾಗೂ ಅಗತ್ಯತೆಗೆ ಅನುಗುಣವಾಗುವಂತೆ ಇದನ್ನು ಮಾಡಿಫೈ ಮಾಡಲಾಗಿದೆ. ಉದಾಹರಣಗೆ ಭಾರತದಲ್ಲಿ ಸಿಎನ್​ಜಿ ಮಾಡೆಲ್​ ಕಾಣಬಹುದು.
/filters:format(webp)/newsfirstlive-kannada/media/media_files/2025/08/08/wagon-r-4-2025-08-08-22-40-34.jpg)
ಜಪಾನ್​ನಲ್ಲಿ ಸ್ಲೈಡಿಂಗ್​ ಬಾಗಿಲನ್ನು WAGON-R SMILE ಸೀರೀಸ್​ನಲ್ಲಿ ಅಡಾಪ್ಟ್ ಮಾಡಿಕೊಳ್ಳಲಾಗಿದೆ.
ಒಟ್ಟಿನಲ್ಲಿ ಈ ಸಾಧನೆಗೆ ಕಾರಣ ಒಂದು, ಜನರ ಮೆಚ್ಚಿನ ಕಾರ್​ ಆಗಿರೋದು, ಡಿಸೆಂಟ್​ ದರಕ್ಕೆ ಡಿಸೆಂಟ್​ ಪೀಚರ್ಸ್​ ನೀಡಿದ್ದು, ಅಗತ್ಯತೆಗೆ ತಕ್ಕಂತೆ ಪ್ರಾದೇಶಿಕತೆಗೆ ಹೊಂದುಕೊಂಡಿದ್ದು, ಮಧ್ಯಮ ವರ್ಗದ ಪ್ರಿಯವಾದ ಕಾರ್​ ಆಗಿದ್ದು, ಆಮೇಲೆ ಕಂಪನಿಯ ಮಾರ್ಕೆಟಿಂಗ್​ ಸ್ಟ್ರ್ಯಾಟರ್ಜಿ ಕೂಡ ಒಂದು ರೇಂಜಿಗೆ ಸಕ್ಸ್​ಸ್​ ಆಗಿದ್ದು ಅಂತ ಹೇಳಬಹುದು.
ವಿಶೇಷ ವರದಿ: ರಾಹುಲ್ ದಯಾನ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us