/newsfirstlive-kannada/media/media_files/2025/10/29/caller-id-2025-10-29-21-30-35.jpg)
ಶೀಘ್ರದಲ್ಲೇ ದೇಶದಾದ್ಯಂತ ನೆಟ್​ವರ್ಕ್ ಆಧಾರಿತ ಕಾಲರ್ ಐಡಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈ ವಿಶೇಷ ವ್ಯವಸ್ಥೆ ಮೂಲಕ ಕರೆ ಸ್ವೀಕರಿಸಿದ ನಂತರ, ಸ್ವೀಕರಿಸುವ ಮುನ್ನವೇ ಕರೆ ಮಾಡಿದವರ ನಿಜವಾದ ಹೆಸರು (Caller ID soon) ಬಹಿರಂಗವಾಲಿದೆ. DoT ಮತ್ತು TRAI ಜಂಟಿಯಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರುತ್ತಿವೆ.
ಸಮಸ್ಯೆಗೆ ಪರಿಹಾರ..
ಮೊಬೈಲ್ ಕರೆಗಳು ಇಂದು ಸಾಮಾನ್ಯವಾಗಿದೆ. ಆದರೆ ಸ್ಪ್ಯಾಮ್, ವಂಚನೆ ಮತ್ತು ಅನಗತ್ಯ ಕರೆಗಳಿಂದಾಗಿ ಅನಾನುಕೂಲ ಹೆಚ್ಚಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ದೃಷ್ಟಿಯಿಂದ ಭಾರತ ಮೊದಲ ದೊಡ್ಡ ಹೆಜ್ಜೆಯನ್ನಿಟ್ಟಿದೆ. TRAI ದೂರ ಸಂಪರ್ಕ ಇಲಾಖೆ (DoT) ಪರಿಚಯಿಸಿದ caller ID ಯೋಜನೆಯನ್ನು ಅನುಮೋದಿಸಿದೆ. ಅದರ ಅಡಿಯಲ್ಲಿ ನೇಮ್ ಡಿಸ್​​ಪ್ಲೇ ನೆಟ್​ವರ್ಕ್ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದೆ.
ಇದನ್ನೂ ಓದಿ: ಸೂರ್ಯಘರ್, ಪಿಎಂ ಕುಸುಮ್‌ಗೆ ಭಾರೀ ಬೇಡಿಕೆ.. ಭಾರತದ ಸೌರ ಸಾಧನೆಗೆ ತಲೆದೂಗಿದ 125 ರಾಷ್ಟ್ರಗಳು..!
ಇದರಿಂದ ಮೊಬೈಲ್ ಬಳಕೆದಾರರಿಗೆ ತಮಗೆ ಯಾರು ಕರೆ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಸಹಾಯ ಆಗಲಿದೆ. ಆ ಮೂಲಕ ಮೋಸದ ಕರೆಗಳಿಂದ ದೂರ ಇರಬಹುದಾಗಿದೆ. ಅಂದ್ಹಾಗೆ ಈ ಸೇವೆಯು 4G, 5G ನೆಟ್​ವರ್ಕ್​​ನಲ್ಲಿ ಕರೆ ಮಾಡೋರಿಗೆ ಲಭ್ಯ ಇರಲಿದೆ. ತಾಂತ್ರಿಕ ಕಾರಣಗಳಿಂದ 2Gಯಲ್ಲಿ ಲಭ್ಯವಿರುವುದಿಲ್ಲ.
ಹೇಗೆ ಕಾರ್ಯ ನಿರ್ವಹಿಸುತ್ತದೆ..?
CNAP ಎಂದು ಕರೆಯಲಾಗಿರುವ ಈ ಸೇವೆಯು ಫೋನ್ ಕರೆ ಬರುತ್ತಿದ್ದಂತೆಯೇ ಹೆಸರು ತೋರಿಸಲಿದೆ. ಸಿಮ್ ಖರೀದಿ ವೇಳೆ ನೀಡಿರುವ ಹೆಸರೇ ಇಲ್ಲಿ ಡಿಸ್​​ಪ್ಲೇ ಆಗಲಿದೆ. ಅಲ್ಲಿ ನೀಡಲಾಗಿರುವ ಹೆಸರನ್ನೇ ನೆಟ್​​ವರ್ಕ್ ಆಪರೇಟರ್​​ ನಮೂದಿಸುತ್ತಾರೆ. 4G, 5G ನೆಟ್​ವರ್ಕ್​​ನಲ್ಲಿ ಕರೆ ಮಾಡಿದ್ದರೆ ಹೆಸರು ಮತ್ತು ನಂಬರ್ ಎರಡೂ ಡಿಸ್​ಪ್ಲೇ ಆಗಲಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಮೋಡ ಬಿತ್ತನೆ ಮಾಡಿದ್ದರೂ ಮಳೆ ಬರಲಿಲ್ಲ, ಏಕೆ? : IIT ಕಾನ್ಪುರ ನಿರ್ದೇಶಕರು ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us