/newsfirstlive-kannada/media/media_files/2025/12/23/call-2025-12-23-15-51-28.jpg)
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಕಾಲಿಂಗ್ ನೇಮ್ ಪ್ರೆಸೆಂಟೇಶನ್ (CNAP) ಐಡಿ ಸೇವೆಯನ್ನ ಕ್ರಮೇಣ ಜಾರಿಗೆ ತರಲು ಪ್ರಾರಂಭಿಸಿದೆ. ಈ ತಂತ್ರಜ್ಞಾನದ ಅಡಿಯಲ್ಲಿ, ಕರೆ ಮಾಡಿದವರ ಪರಿಶೀಲಿಸಿದ (verified) ಹೆಸರು ಸ್ಕ್ರೀನ್ ಮೇಲೆ ತೋರಿಸಲಿದೆ. ಕರೆ ಬಂದ ಸಂದರ್ಭದಲ್ಲಿ ಮೊಬೈಲ್​​ನ ಸ್ಕ್ರೀನ್ ಮೇಲೆ ಅದು ಕಾಣಿಸಿಲಿದೆ.
ಕಳೆದ ಜುಲೈನಿಂದ ಈ ಪ್ರಯೋಗ ಆರಂಭವಾಗಿತ್ತು. ಇದೀಗ ವಿವಿಧ ನೆಟ್‌ವರ್ಕ್‌ಗಳಲ್ಲೂ ಹಂತ ಹಂತವಾಗಿ ಅಳವಡಿಸಲಾಗುತ್ತಿದೆ. ಮಾರ್ಚ್ ಅಥವಾ ಏಪ್ರಿಲ್ 2026ರ ವೇಳೆಗೆ ಎಲ್ಲಾ ಮೊಬೈಲ್ ಬಳಕೆದಾರರೂ ಕೂಡ ಈ ಫೀಚರ್ಸ್​ನ ಉಪಯೋಗ ಪಡೆಯಲಿದ್ದಾರೆ.
CNAP ಪರಿಚಯಿಸುವ ಅಗತ್ಯ ಏಕೆ..?
ಕಳೆದ ಕೆಲವು ವರ್ಷಗಳಲ್ಲಿ ವಂಚನೆಯ ಕರೆಗಳು, ಟೆಲಿ-ವಂಚನೆಗಳು ಮತ್ತು ಬ್ಯಾಂಕ್ ಅಥವಾ ಸರ್ಕಾರಿ ಅಧಿಕಾರಿಗಳನ್ನು ಅನುಕರಿಸುವ ಸೈಬರ್ ಅಪರಾಧಗಳು ಹೆಚ್ಚಾಗಿವೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ ಜನ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳಿಗೆ ಉತ್ತರಿಸಲು ಹಿಂಜರಿಯುತ್ತಿದ್ದಾರೆ. ಆದರೆ ಇನ್ಮುಂದೆ ಅಂಥ ಭಯ ಇರೋದಿಲ್ಲ.
ಇದನ್ನೂ ಓದಿ:ಹೊಸ ವರ್ಷದಲ್ಲಿ ಮೊಬೈಲ್ ಬಳಕೆದಾರರಿಗೆ ಕಾದಿದೆ ಬಿಗ್ ಶಾಕ್​..!
CNAP ಕಾಲರ್ ಐಡಿ ಇತರೆ ಅಪ್ಲಿಕೇಶನ್‌ಗಳಿಗಿಂತ ಹೇಗೆ ಭಿನ್ನ?
CNAP ನಿರ್ದಿಷ್ಟ ವ್ಯಕ್ತಿಯ ಹೆಸರು ಸೂಚಿಸುತ್ತದೆ. ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳು ಅಂದರೆ ಟ್ರೂ ಕಾಲರ್​ ಅಥವಾ ಬಳಕೆದಾರರು ಒದಗಿಸಿದ ಹೆಸರನ್ನ ಇದು ನೀಡೋದಿಲ್ಲ. ಕರೆ ಮಾಡಿದವರ ಹೆಸರನ್ನು ಟೆಲಿಕಾಂ ಕಂಪನಿಗಳ KYC-ಪರಿಶೀಲಿಸಿದ ದಾಖಲೆಗಳಿಂದ ನೇರವಾಗಿ ಪಡೆಯಲಾಗುತ್ತದೆ. ಸಿಮ್ ಖರೀದಿಸುವಾಗ ಆಧಾರ್‌ನಂತಹ ಅಧಿಕೃತ ದಾಖಲೆಗಳಲ್ಲಿ ಇರುವ ಹೆಸರನ್ನೇ ನೀಡುತ್ತದೆ.
ಈ ಫೀಚರ್ಸ್ 4G ಮತ್ತು 5G ಬಳಕೆದಾರರಿಗೆ ಸಿಗಲಿದೆ. ನಂತರ ಉಳಿದ ನೆಟ್​​ವರ್ಕ್​​ಗಳಿಗೂ ಕನೆಕ್ಟ್ ಮಾಡಲಾಗುತ್ತದೆ. ಆರು ತಿಂಗಳೊಳಗೆ ತಮ್ಮ ತಂತ್ರಜ್ಞಾನಗಳಲ್ಲಿ CNAP ಸಪೋರ್ಟಿಂಗ್ ಸಿಸ್ಟಮ್ ಅಳವಡಿಸಲಾಗಿದೆ ಎಂದು TRAI, ಸ್ಮಾರ್ಟ್‌ಫೋನ್ ಕಂಪನಿಗಳನ್ನು ಕೇಳಿದೆ.
ಟ್ರೂಕಾಲರ್ ಮತ್ತು CNAP ವ್ಯತ್ಯಾಸ
ಟ್ರೂಕಾಲರ್ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಸಿಎನ್‌ಎಪಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಟ್ರೂಕಾಲರ್ ಬಳಕೆದಾರರು ಸಲ್ಲಿಸಿದ ಮತ್ತು ಕ್ರೌಡ್‌ಸೋರ್ಸ್ ಮಾಡಿದ ಹೆಸರುಗಳನ್ನು ಅವಲಂಬಿಸಿದೆ. ಇವು ದೋಷಗಳು ಅಥವಾ ದಾರಿತಪ್ಪಿಸುವ ಮಾಹಿತಿಗೆ ಗುರಿಯಾಗುತ್ತವೆ. ಸಿಎನ್‌ಎಪಿ ನೆಟ್‌ವರ್ಕ್ ಮಟ್ಟದ ವೈಶಿಷ್ಟ್ಯವಾಗಿದ್ದು, ಇದಕ್ಕೆ ಅಪ್ಲಿಕೇಶನ್ ಅಗತ್ಯವಿಲ್ಲ.
ಇದನ್ನೂ ಓದಿ: ಬೆಂಗಳೂರಿನಿಂದ ಮಂಗಳೂರು ಮೂಲಕ ಗೋವಾಗೆ ವಂದೇ ಭಾರತ್ ಟ್ರೇನ್ ಆರಂಭಿಸಿ: ಕೇಂದ್ರ ರೈಲ್ವೇ ಸಚಿವರಿಗೆ ಎಚ್‌ಡಿಕೆ ಪತ್ರ ಬರೆದು ಒತ್ತಾಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us