/newsfirstlive-kannada/media/media_files/2025/08/22/maruti_car-2025-08-22-14-26-49.jpg)
CNG ವಾಹನಗಳನ್ನು ಒಂದು ದಶಕದ ಹಿಂದೆ ಕೊಂಡುಕೊಳ್ಳೋರ ಸಂಖ್ಯೆ ತೀರಾ ಕಡಿಮೆ ಇತ್ತು. ಈ ಮಾದರಿಯನ್ನು ಕೇವಲ ಆಟೋಗಳಲ್ಲಿ ಹೆಚ್ಚಾಗಿ ಬಳಸ್ತಾ ಇದ್ದಿದ್ದು. ಆದ್ರೆ ಈಗ ನೋಡಿ, ಸಿಎನ್ಜಿ ಗಾಡಿಗಳ ಟ್ರೆಂಡ್ ದಿನೇ ದಿನೇ ಹೆಚ್ಚಾಗುತ್ತಿದೆ. ಕಾರಣ ಒಂದು, ದಿನೇ ದಿನೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಮತ್ತೊಂದು ಆಟೋಮೊಬೈಲ್ ಕಂಪನಿಗಳು ತಮ್ಮ ಪೆಟ್ರೋಲ್, ಡೀಸೆಲ್ ಗಾಡಿಗಳಲ್ಲಿ ಸಿಎನ್ಜಿ ಮಾದರಿಗಳನ್ನು ಹೊಸದಾಗಿ ಪರಿಚಯಿಸುತ್ತಿವೆ. ಸೋ ಎಷ್ಟೋ ಜನ ಈಗ ಸಿಎನ್ಜಿ ಗಾಡಿಗಳ ಮೊರೆ ಹೋಗಿರೋದು ಸುಳ್ಳಲ್ಲ. ಹೇಳಬೇಕು ಅಂದ್ರೆ ಕಳೆದ 5 ವರ್ಷದಲ್ಲಿ ಈ ಗಾಡಿಗಳ ಮಾರಾಟ 3 ಪಟ್ಟು ಜಾಸ್ತಿ ಆಗಿದೆ. FY 2025 ನಲ್ಲಿ ಡೀಸೆಲ್ ಗಾಡಿಗಳಿಗಿಂತ ಜಾಸ್ತಿ ಮಾರಾಟವಾಗಿದೆ.
ಸೋ ನೀವೂ ಕೂಡ ಒಂದು ಸಿಎನ್ಜಿ ವಾಹನ ಕೊಂಡುಕೊಳ್ಳಬೇಕು ಅಂತ ಯೋಚಿಸುತ್ತಾ ಇದ್ದರೆ, ಸದ್ಯಕ್ಕೆ ಬಜಾರ್ನಲ್ಲಿರೋ MARUTI SUZUKIಯ ಟಾಪ್- 5 ಮೈಲೇಜ್ ಕೊಡೋ ಸಿಎನ್ಜಿ ಕಾರ್ಗಳನ್ನು ಹಾಗೂ ಅವುಗಳ ಬೆಲೆಗಳ ವಿವರ ಇಲ್ಲಿದೆ.
ಟಾಪ್ 5- Maruti Suzuki Swift
ಟಾಪ್ ನಾಚ್ ಕ್ವಾಲಿಟಿ ಹಾಗೂ ಬೆಲೆಯೂ ಕಡಿಮೆ ಅಂತ ಹೇಳಬಹುದು. ಇದರ ಬೆಲೆ 8.20 ಲಕ್ಷದಿಂದ 9.20 ಲಕ್ಷ ರೂಪಾಯಿ ಇದೆ. ಇನ್ನು ಪರ್ಫಾಮೆನ್ಸ್ ವಿಷ್ಯಕ್ಕೆ ಬರೋಹಾಗಿದ್ರೆ ಪ್ರತಿ ಕೆಜಿ ಸಿಎನ್ಜಿಗೆ 32.85 ಕಿ.ಮೀ ಮೈಲೇಜ್ ನೀಡುತ್ತದೆ.
ಟಾಪ್ 4- Maruti Suzuki Dzire
ಇದು Maruti Suzuki Swiftನ ಬೆಟರ್ ಅಪ್ಗ್ರೇಡ್ ಅಂತ ಹೇಳಬಹುದು. ಇದರ ಮೈಲೇಜ್ ಪ್ರತಿ ಕೆಜಿ ಸಿಎನ್ಜಿಗೆ 33.73 ಕಿ.ಮೀ. ಹಾಗೂ ಇದರ ಬೆಲೆ ಶುರುವಾಗೋದು 8.79 ಲಕ್ಷ ರೂಪಾಯಿ ಹಾಗೂ ಟಾಪ್ ಎಂಡ್ನ ಬೆಲೆ 9.89 ಲಕ್ಷ ರೂಪಾಯಿ.
ಟಾಪ್ 3- Maruti Suzuki Alto K10
ಇದು ಮಾರುತಿ ಕಂಪನಿಯ ಆಲ್ಟೋ ಕಾರ್ನ ಅಪ್ಗ್ರೇಡೆಡ್ ಹಾಗೂ ಅಡ್ವಾನ್ಸ್ ವರ್ಷನ್. ಅಂದ್ರೆ ಪೆಟ್ರೋಲ್ಗೆ ಸೀಮಿತವಾಗಿದ್ದ ಈ ಕಾರ್ನ ಇದೀಗ ಹೊಸ ರೂಪದಲ್ಲಿ ಹಾಗೂ ಟೆಕ್ನಾಲಜಿಯಲ್ಲಿ ಬದಲಾವಣೆ ತಂದು ರಿಲೀಸ್ ಮಾಡಲಾಗಿದೆ. ಇದರ ಬೆಲೆ 5.9 ಲಕ್ಷ ರೂಪಾಯಿಗಳಿಂದ 6.21 ಲಕ್ಷ ರೂಪಾಯಿ ಆಗಿದೆ. ಪ್ರತಿ ಕೆಜಿ ಟಾಪ್ಗೆ 33.85 ಕಿ.ಮೀ ಮೈಲೇಜ್ ಇದೆ.
ಟಾಪ್ 2- Maruti Suzuki Wagon R
Wagon R ಹ್ಯಾಚ್ಬ್ಯಾಕ್ ಇದ್ಯಲ್ಲಾ, ಇದನ್ನು ದೇಶದಲ್ಲೇ ಅತ್ಯಂತ FUEL EFFICIENT ಕಾರ್ ಎಂದು ಕರೆಯುತ್ತಾರೆ. ಇನ್ನೂ ಸಿಎನ್ಜಿ ವಿಷ್ಯಕ್ಕೆ ಬಂದ್ರೆ, ಅದರ ಸ್ಥಾನವನ್ನು ಹಾಗೇ ಈ ಮಾರ್ಕೆಟ್ನಲ್ಲೂ ಉಳಿಸಿಕೊಂಡಿದೆ. ಪರ್ಫಾಮೆನ್ಸ್ ವಿಷ್ಯಕ್ಕೆ ಬಂದ್ರೂ ಕೂಡ ಇದು ಎಲ್ಲರ ಬಾಪ್. ಸೋ ಹಾಗಿದ್ರೆ, ಇದರ ಮೈಲೇಜ್ ಎಷ್ಟು? ಪ್ರತಿ ಕೆಜಿ ಸಿಎನ್ಜಿಗೆ 34.05 ಕಿ.ಮೀ. ಮೈಲೇಜ್ ಇದೆ. ಹಾಗೂ ಬೆಲೆ 6.66 ದಿಂದ 7.09 ಲಕ್ಷ ರೂಪಾಯಿದಷ್ಟಿದೆ.
ಇದನ್ನೂ ಓದಿ: ಕದ್ದಿದ್ದು ಒಂದೇ ಒಂದು ಮೊಬೈಲ್.. ಕಳ್ಳನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಟಾಪ್ 1- Maruti Suzuki Celerio
ಮಾರುತಿ ಸುಜುಕಿ ತಯಾರು ಮಾಡಿರೋ ಸಿಎನ್ಜಿ ಕಾರ್ಗಳಲ್ಲೇ ಇದು ಮೈಲೇಜ್ನ ವಿಷ್ಯದಲ್ಲಿ ನಂಬರ್ ಒನ್ ಲೀಡರ್. ಯಾಕಂದ್ರೆ ಎಷ್ಟೋ ಕಂಪನಿಗಳು ಎಸ್ಯುವಿ ಕಾರ್ಗಳಿಗೂ ಇದೀಗ ಸಿಎನ್ಜಿ ಪರಿಚಯಿಸೋ ಕೆಲಸ ಮಾಡ್ತ ಇದೆ. ಆದರೂ ಅವುಗಳಿಗೂ ಠಕ್ಕರ್ ಕೊಡುವ ರೇಂಜಿಗಿದೆ ಇದರ ಮೇಲೇಜ್. ಪ್ರತಿ ಕೆಜಿ ಸಿಎನ್ಜಿಗೆ 34.43 ಕಿ.ಮೀ ಸಾಗುತ್ತೆ ಹಾಗೂ ಇದರ ಬೆಲೆ ಶುರುವಾಗೋದು 6.90 ಲಕ್ಷದಿಂದ. ಅದು ಕೂಡ ಇದರ VXi ವೇರಿಯಂಟ್ಗೆ
ಮಾರುತಿ ಸುಜುಕಿ ನಮ್ಮ ದೇಶದ ಅತ್ಯಂತ ವಿಶ್ವಸಾರ್ಹ ಆಟೋಮೊಬೈಲ್ಗಳಲ್ಲಿ ಒಂದು. ಹಾಗೂ ಈಗಿನ ಟ್ರೆಂಡ್ ಕೂಡ ಸಿಎನ್ಜಿ ಕಾರ್ಗಳೇ ಆಗಿರೋದ್ರಿಂದ ಮುಂದಿನ ದಿನಗಳಲ್ಲಿ ಈ ಕಾರ್ಗಳ ಬೇಡಿಕೆ ಹಾಗೂ ಬೆಲೆ ಎರಡೂ ಹೆಚ್ಚಾಗೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ವರದಿ: ರಾಹುಲ್ ದಯಾನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ