ಕೋಸ್ಟಾ ಹಾಟ್ ಚಾಕೊಲೇಟ್ ಸೇವಿಸೋ ಮುನ್ನ ಹುಷಾರ್.. ಸಾವಿಗೆ ಕಾರಣವಾಯ್ತು ಒಂದೇ ಒಂದು ಸಿಪ್‌!

author-image
Gopal Kulkarni
ಕೋಸ್ಟಾ ಹಾಟ್ ಚಾಕೊಲೇಟ್ ಸೇವಿಸೋ ಮುನ್ನ ಹುಷಾರ್.. ಸಾವಿಗೆ ಕಾರಣವಾಯ್ತು ಒಂದೇ ಒಂದು ಸಿಪ್‌!
Advertisment
  • 13ರ ಬಾಲೆಯ ಬಾಳಿಗೆ ಕಟಂಕವಾಯ್ತು ಕೋಸ್ಟ್ ಹಾಟ್ ಚಾಕೊಲೇಟ್​!
  • ಅಲರ್ಜಿಯ ಬಗ್ಗೆ ಗೊತ್ತಿದ್ದರು ಆ ಡ್ರಿಂಕ್ಸ್ ಸೇವನೆ ಮಾಡಿದ್ದೇಕೆ ಹುಡುಗಿ?
  • ಕೋಸ್ಟ್ ಹಾಟ್ ಚಾಕೊಲೇಟ್ ಸೇವಿಸುವ ಮುನ್ನ ಎಚ್ಚರ.. ಎಚ್ಚರ

ಲಂಡನ್​: ಇತ್ತೀಚಿನ ದಿನಗಳಲ್ಲಿ ಕಾಫಿ ಡೇನಂತಹ ದುಬಾರಿ ಕಾಫಿ ಹಬ್​ಗಳಲ್ಲಿ ಭಿನ್ನ ವಿಭಿನ್ನ ಕಾಫಿಗಳು ಸಿಗುತ್ತವೆ. ಒಂದೊಂದರದು ಒಂದೊಂದು ರುಚಿ ಹಾಗೂ ಘಮ. ಸಂಗಾತಿಯ ಜೊತೆಗೊ, ಗೆಳೆಯರ ಜೊತೆಗೊ ಕುಳಿತುಕೊಂಡು ಒಂದೊಂದೇ ಸಿಪ್ ಹೀರುವ ಮಜವೇ ಬೇರೆ. ಆದ್ರೆ ಇದೇ ಮಜ ಒಮ್ಮೊಮ್ಮೆ ಸಜೆಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಹೀಗೆ ಕೋಸ್ಟಾ ಕಾಫಿ ಹಾಟ್ ಚಾಕಲೇಟ್ ಸೇವಿಸಿದ 13 ವರ್ಷದ ಹುಡುಗಿಯೊಬ್ಬಳು ಅಲರ್ಜಿಯಾಗಿ ಮೃತಪಟ್ಟ ಘಟನೆ ಲಂಡನ್​ನಲ್ಲಿ ನಡೆದಿದೆ.

2023ರಲ್ಲಿ ತೀರಿಕೊಂಡ ಹುಡುಗಿ 2024ರಲ್ಲಿ ಸಾವಿನ ಕಾರಣ ಬಯಲು
13 ವರ್ಷದ ಹುಡುಗಿ ಹನ್ಹಾ ಜಾಕೋಬ್ಸ್​ ಫೆಬ್ರವರಿ 2023ರಂದು ಸೋಯಾ ಮಿಲ್ಕ್​ನಿಂದ ಮಾಡಿದ್ದ ಕೋಸ್ಟ್ ಹಾಟ್ ಜಾಕೊಲೇಟ್​ ಗುಟುಕರಿಸಿ ಮೃತಪಟ್ಟಿದ್ದಾಳೆ. ಈ ಡ್ರಿಂಕ್ಸ್ ಕುಡಿದ ಯುವತಿಗೆ ಹಲವು ಅಲರ್ಜಿ ಸಮಸ್ಯೆಗಳಿದ್ವಂತೆ. ಡೈರಿ ಉತ್ಪನ್ನಗಳು, ಮೊಟ್ಟೆ, ಮೀನು ಮತ್ತು ಗೋಧಿಯಿಂದ ತಯರಾದ ಪದಾರ್ಥಗಳು ಇವಳಿಗೆ ಆಗಿ ಬರುತ್ತಿರಲಿಲ್ಲ. ಚಿಕ್ಕಂದಿನಿಂದಲೇ ಈ ಸಮಸ್ಯೆಯಿದ್ದು, ಅವುಗಳನ್ನೆಲ್ಲಾ ಇಷ್ಟು ವರ್ಷ ಮ್ಯಾನೇಜ್ ಮಾಡಿಕೊಂಡು ಬಂದಿದ್ದಳು.

publive-image

ಇದನ್ನೂ ಓದಿ:ನೀವು ಸುಂದರವಾಗಿ ಕಾಣಬೇಕಂದ್ರೆ ಈ ಹಣ್ಣು ತಿಂದ್ರೆ ಸಾಕು.. ಚರ್ಮದ ಸಮಸ್ಯೆಗೆ ಇದುವೇ ರಾಮಬಾಣ!

ಹನ್ಹಾ ಹಾಗೂ ಆಕೆ ತಾಯಿ ದಂತ ವೈದ್ಯರನ್ನು ಕಾಣಲು ಹೋಗುವಾಗ ಹಾದಿಯಲ್ಲಿಯೇ ಸಿಕ್ಕ ಕಾಫಿ ಶಾಪ್​ಗೆ ಹೋಗಿದ್ದಾರೆ. ಹನ್ಹಾಳಿಗೆ ಹಾಲಿನ ಪದಾರ್ಥಗಳ ಅಲರ್ಜಿ ಇರುವ ಕಾರಣದಿಂದಾಗಿ ಆಕೆಯ ತಾಯಿ ಸೋಯಾ ಮಿಲ್ಕ್​ನ ಕೋಸ್ಟ್ ಹಾಟ್ ಚಾಕಲೇಟ್ ಹೇಳುವುದನ್ನು ಮರೆತಿದ್ದಾಳೆ. ಆಕೆಯ ಹೇಳಿದ ರೀತಿಯೇ ಕಾಫಿಶಾಪ್​ನವನು ಸಾಮಾನ್ಯ ಹಾಲಿನಲ್ಲಿ ಮಾಡಿರುವ ಕೋಸ್ಟ್ ಕಾಫಿ ಹಾಟ್ ಚಾಕಲೇಟ್​ ತಂದಿಟ್ಟಿದ್ದಾನೆ.

ಇದನ್ನೂ ಓದಿ: ನೀವು ಈ ಔಷಧಿ ಸೇವಿಸಿದ್ರೆ ಕ್ಯಾನ್ಸರ್​ ನಿಮ್ಮ ಬಳಿಯೂ ಸುಳಿಯಲ್ಲ; ಎಲ್ಲರೂ ಓದಲೇಬೇಕಾದ ಸ್ಟೋರಿ!

ಅದನ್ನು ಸವಿದ ಹನ್ಹಾಗೆ ಕೂಡಲೇ ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಗಮನಿಸಿದ ತಾಯಿ ತುರ್ತಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಿರಂತರ ಚಿಕಿತ್ಸೆಯ ನಂತರವೂ ಕೂಡ ಆಕೆ ಬದುಕುಳಿಯಲಿಲ್ಲ. ಅವಳ ಸಾವಿಗೆ ಕಾರಣ ಅಂದು ಕುಡಿದ ಕೋಸ್ಟ್​ ಕಾಫಿ ಹಾಟ್ ಚಾಕೊಲೇಟ್​ ಕಾರಣ ಅನ್ನೋದು ಈಗ ಬಹಿರಂಗವಾಗಿದೆ. ನಿಮಗೆ ಅಲರ್ಜಿ ಅನಿಸುವ ಪದಾರ್ಥದಿಂದ ದೂರ ಇರುವುದು ಒಳ್ಳೆಯದು. ಹೊರಗಡೆ ಹೋದಾಗ ಏನಾದರೂ ತಿನ್ನಲು ಕುಡಿಯಲು ಆರ್ಡರ್ ಮಾಡಿದಾಗ ನಿಮಗೆ ಅಲರ್ಜಿಯಾಗುವ ಪದಾರ್ಥ ಅದರಲ್ಲಿದೆಯಾ ಅನ್ನೋದನ್ನ ಕೇಳಿ ತಿಳಿದು ಸೇವಿಸುವುದು ಉತ್ತಮ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment