newsfirstkannada.com

ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಗುಡ್​ಬೈ ಹೇಳಿದ ತೇಜಸ್ವಿನಿಗೌಡ; ಪಕ್ಷ ತೊರೆಯಲು ಕೊಟ್ಟ ಕಾರಣ ಏನು ಗೊತ್ತಾ?

Share :

Published March 30, 2024 at 7:23am

Update March 30, 2024 at 8:17am

  ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಮತ್ತೊಂದು ಶಾಕ್

  ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ತೇಜಸ್ವಿನಿಗೌಡ ರಾಜೀನಾಮೆ

  ಕೆಲ ದಿನಗಳ ಹಿಂದೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು

ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಡಾ.ತೇಜಸ್ವಿನಿಗೌಡ ಶಾಕ್​​ ನೀಡಿದ್ದಾರೆ. ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಗುಡ್‌ಬೈ ಹೇಳಿದ್ದಾರೆ. ಒಂದು ಪುಟದ ಭಾವನಾತ್ಮಕ ಪತ್ರ ಬರೆದು, ಪಕ್ಷದಲ್ಲಿನ ಆಂತರಿಕ ವಿಚಾರ ಉಲ್ಲೇಖಿಸಿ ತೇಜಸ್ವಿನಿಗೌಡ ಕಮಲಕ್ಕೆ ಕೊನೆ ಹಾಡಿದ್ದಾರೆ. ತೇಜಸ್ವಿನಿಗೌಡ ನಡೆ ಬಗ್ಗೆ ನ್ಯೂಸ್​ಫಸ್ಟ್​​ ಸರಿಯಾಗಿ ತಿಂಗಳ ಹಿಂದೇ ನಿಖರ ವರದಿ ಬಿತ್ತರಿಸಿತ್ತು.

ಪತ್ರದಲ್ಲಿ ಏನಿದೆ..?
ಕಳೆದೊಂದು ದಶಕದಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ವಕ್ತಾರಳಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ಪ್ರ-ಶಿಕ್ಷಣಕಾರಳಾಗಿ, ಕೆಳಹಂತದಿಂದ ಮೇಲ್ಮಟ್ಟದವರೆಗೂ ಶಿಸ್ತಿನ ಸಿಪಾಯಿಯಾಗಿ, ಪಕ್ಷಕ್ಕೆ ನಿಷ್ಠಳಾಗಿ ಶಕ್ತಿ ಮೀರಿ ದುಡಿರುತ್ತೇನೆ.
ದಿ. ಅನಂತ್‌ಕುಮಾರ್ ಹಾಗೂ ರಾಷ್ಟ್ರೀಯ ನಾಯಕರಾದ ರಾಜ್ಯದ ಮುತ್ಸದ್ಧಿಯೂ ಆದ ಹಿರಿಯರಾದ ಶ್ರೀ ಬಿ.ಎಸ್. ಯಡಿಯೂರಪ್ಪಾಜಿಯವರ ಮಾರ್ಗದರ್ಶನದಲ್ಲಿ ಅಪಾರ ರಾಜಕೀಯ ಅನುಭವಗಳಿಸಿದ ಭಾಗ್ಯ ಪಡೆದಿರುತ್ತೇನೆ.

ಇದನ್ನೂ ಓದಿ: ಬಿಜೆಪಿ ಶಾಲು ಧರಿಸಿದ ಮುತ್ಸದ್ಧಿ ದೇವೇಗೌಡ; ರಾಜಕೀಯ ಪಡಶಾಲೆಯಲ್ಲಿ ಭಾರೀ ಚರ್ಚೆ..!

ಇತ್ತೀಚಿನ ವರ್ಷಗಳಲ್ಲಿ BJP ಯು ಸಂಸದೀಯ ಪ್ರಜಾಪ್ರಭುತ್ವ ಮೌಲ್ಯಗಳಿಂದ ದೂರ ಸರಿದು, ಉತ್ತಮ ಸಂಸದೀಯ ಪಟುಗಳು ಹಾಗೂ ಪ್ರತಿಭಾವಂತರನ್ನು ಕಡೆಗಣಿಸಿ, ಅವಕಾಶವಾದಿಗಳ ತಾಣವಾಗುತ್ತಿರುವುದು ಮನಸ್ಸಿಗೆ ಅಪಾರ ನೋವು ತಂದಿದೆ. ಈ ಬಗ್ಗೆ ಪಕ್ಷದ ಆಂತರಿಕ ವೇದಿಕೆಗಳಲ್ಲಿ, ಪಕ್ಷದ ವರ್ಚಸ್ಸಿಗೆ ಧಕ್ಕೆ ಬರದಂತೆ, ಹಿರಿಯರ ಗಮನಕ್ಕೆ ತರುವ ಪ್ರಯತ್ನಗಳಾದರೂ, ಫಲಿತಾಂಶ ಶೂನ್ಯವಾಗಿದೆ.
ಎಲ್ಲ ಬಲ್ಲ ತಮಗೆ ವ್ಯರ್ಥ ವಿವರಣೆ ನೀಡದೇ, ಬಿಎಸ್‌ವೈ-ಅನಂತ ಯುಗಾಂತ್ಯದೊಡನೆ BJP ಯಲ್ಲಿ ಒಂದು ದಶಕದ ನನ್ನ ಯಾನಕ್ಕೆ ವಿದಾಯ ಹೇಳುತ್ತಿದ್ದೇನೆ. ಈ ಮೂಲಕ BJP ಯ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆ ನೀಡುತ್ತಿದ್ದು ಸ್ವೀಕರಿಸಬೇಕಾಗಿ ವಿನಮ್ರ ಕೋರಿಕೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಗುಡ್​ಬೈ ಹೇಳಿದ ತೇಜಸ್ವಿನಿಗೌಡ; ಪಕ್ಷ ತೊರೆಯಲು ಕೊಟ್ಟ ಕಾರಣ ಏನು ಗೊತ್ತಾ?

https://newsfirstlive.com/wp-content/uploads/2024/03/Tejaswini.jpg

Load More