newsfirstkannada.com

ಬಿಜೆಪಿ ಶಾಲು ಧರಿಸಿದ ಮುತ್ಸದ್ಧಿ ದೇವೇಗೌಡ; ರಾಜಕೀಯ ಪಡಶಾಲೆಯಲ್ಲಿ ಭಾರೀ ಚರ್ಚೆ..!

Share :

Published March 30, 2024 at 6:46am

    91ನೇ ವಯಸ್ಸಿನಲ್ಲಿ ಸಿದ್ದರಾಮಯ್ಯಗೆ ಮೈತ್ರಿ ನಾಯಕನ ಸವಾಲ್

    ಹಸಿರೇ ಉಸಿರು ಎಂದ ಮಣ್ಣಿನ ಮಗನ ಕೊರಳಲ್ಲಿ ಬಿಜೆಪಿ ಶಾಲು

    ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ನಡುವೆ ಮೈತ್ರಿ

ರಾಜಕೀಯ ಪಕ್ಷ ಅಂದ್ರೆ ಅದಕ್ಕೆ ತನ್ನದೇ ಆದ ತತ್ವ, ಸಿದ್ಧಾಂತಗಳು ಇರುತ್ತೆ. ಪಕ್ಷ ಸ್ಥಾಪನೆಯಾದಾಗಿದ್ದ ಆದರ್ಶಗಳೇ ಪಾಲನೆಯಾಗುತ್ತಿರುತ್ತೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ತತ್ವ-ಸಿದ್ಧಾಂತಗಳಿಗಿಂತ ಗೆಲುವೇ ಮುಖ್ಯವಾಗಿಬಿಟ್ಟಿರುತ್ತೆ. ಇದೀಗ ಜೆಡಿಎಸ್ ವರಿಷ್ಠ ಹೆಚ್‌.ಡಿ. ದೇವೇಗೌಡರ ವಿಚಾರದಲ್ಲೀಗ ಹೀಗೆ ಆದಂತೆ ಕಾಣ್ತಿದೆ. ಬಿಜೆಪಿಯಿಂದ ದೂರ ಇರಿಸುವ ರಾಜಕೀಯವನ್ನೇ ದಶಕಗಳಿಂದಲೂ ಮಾಡ್ತಾ ಬಂದಿದ್ದ ದೊಡ್ಡಗೌಡರು ಸದ್ಯ ಆ ಪಕ್ಷದ ಜೊತೆಯೇ ಸಖ್ಯಕ್ಕೆ ಸೈ ಎಂದಿದ್ದಾರೆ. ನಿನ್ನೆ ಬಿಜೆಪಿ ಶಾಲನ್ನೇ ಧರಿಸಿ ಅವರು ಕಾಣಿಸಿಕೊಂಡಿರೋದು ವಿಶೇಷ ಮಹತ್ವ ನೀಡಿದೆ.

ಇದನ್ನೂ ಓದಿ: 3 ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳು ಕಣಕ್ಕೆ; ರಕ್ಷಾ ರಾಮಯ್ಯ, ಸುನೀಲ್ ಬೋಸ್‌ಗೆ ಲಕ್‌; ವಿ.ಎಸ್‌ ಉಗ್ರಪ್ಪಗೆ ಶಾಕ್‌!

ಹಸಿರೇ ಉಸಿರು ಎಂದ ಮಣ್ಣಿನ ಮಗನ ಕೊರಳಲ್ಲಿ ‘ಕೇಸರಿ’ ಶಾಲು!

ಮೊನ್ನೆ ಮೊನ್ನೆಯಷ್ಟೇ ಕೆರಗೋಡಿನ ಧ್ವಜ ದಂಗಲ್‌ ವೇಳೆ ಕುಮಾರಸ್ವಾಮಿ ಕೇಸರಿ ಶಾಲು ಧರಿಸಿ ಹೋರಾಟಕ್ಕೆ ಇಳಿದಿದ್ರು. ಇದನ್ನ ಕಂಡ ದೊಡ್ಡಗೌಡ್ರು ಒಳಗೊಳಗೇ ಕುದಿದು ಹೋಗಿದ್ರು. ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದ್ದನ್ನ ಕಡ್ಡಿಮುರಿದಂತೆ ಖಂಡಿಸಿದ್ರು. ಮೋದಿಯನ್ನ ಕಡಾ ಖಂಡಿತವಾಗಿ ಖಂಡಿಸಿದ್ದವರು ಮಾಜಿ ಪ್ರಧಾನಿ ದೇವೇಗೌಡ್ರು ಅಷ್ಟೇ ಯಾಕೆ ಹಸಿರನ್ನೇ ಉಸಿರಾಗಿಸಿಕೊಂಡಿರೋ ಮಣ್ಣಿನ ಮಗ ಎದ್ರೂ ಬಿದ್ರೂ ಸೆಕ್ಯೂಲರ್ ಸಂಗೀತವನ್ನೇ ಹಾಡ್ತಿದ್ರು. ಮುಂದಿನ ಜನ್ಮದಲ್ಲಿ ಹುಟ್ಟಿದ್ರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಅಂತ ಶಪಥ ಮಾಡಿದಂತೆ ಮಾತಾಡಿದ್ರು. ಜೊತೆಗೆ ಬಿಜೆಪಿಯನ್ನ ತಮ್ಮ ಬಾಯಲ್ಲೇ ಕೋಮುವಾದಿ ಅಂತ ಕರೆದಿರೋದು ಕನ್ನಡಗರ ಕಿವಿಯಲ್ಲಿ ಗುಯ್ಯಗುಟ್ಟುತ್ತಲೇ ಇದೆ. ಅಷ್ಟರಲ್ಲೇ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ದೇವೇಗೌಡರ ಕೊರಳಲ್ಲಿ ಬಿಜೆಪಿ ಶಾಲು ರಾರಾಜಿಸಿದೆ.

ದೋಸ್ತಿಗಳ ಸಮನ್ವಯ ಸಮಿತಿ ಸಭೆ ನಡೀತು. ಈ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ರು. ಈ ವೇಳೆ ಹೆಚ್‌.ಡಿ. ದೇವೇಗೌಡರ ಕೊರಳಲ್ಲಿ ಬಿಜೆಪಿ ಶಾಲು ರಾರಾಜಿಸಿದ್ದು ರಾಜಕೀಯ ಪಂಡಿತರನ್ನೇ ದಿಗ್ಭ್ರಮೆಗೆ ತಳ್ಳಿದೆ. ಈ ಹಿಂದೆ 2006ರಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದ್ದ ಹೆಚ್‌ಡಿ ಕುಮಾರಸ್ವಾಮಿ ನಿರ್ಧಾರದಿಂದ ದೊಡ್ಡಗೌಡರು ಮಂಕಾಗಿ ಹೋಗಿದ್ರು. ತಮ್ಮ ಪುತ್ರನ ನಿರ್ಧಾರದಿಂದ ರಾಜಕೀಯವಾಗಿ ಕುಗ್ಗಿಹೋಗಿದ್ರು.

ನಿನ್ನೆಯ ದೇವೇಗೌಡರು ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ. ಜೊತೆಗೆ ಎಲ್ಲಾ ಭಿನ್ನಾಭಿಪ್ರಾಯ ಸರಿಪಡಿಸಿ 28 ಕ್ಷೇತ್ರಗಳನ್ನೂ ಜಯಿಸಬೇಕು ಅಂತ ಪಣತೊಟ್ಟಿದ್ದಾರೆ. ಸದ್ಯದ ಮಟ್ಟಿಗೆ ದೇವೇಗೌಡರ ಟಾರ್ಗೆಟ್‌ ತಮ್ಮ ಮಾಜಿ ಶಿಷ್ಯನ ಸರ್ಕಾರವಾಗಿದೆ. ಹಾಲಿ ಎದುರಾಳಿ ಸಿದ್ದರಾಮಯ್ಯಗೆ 91ನೇ ವಯಸ್ಸಿನಲ್ಲಿ ಜೆಡಿಎಸ್‌ ಎಲ್ಲಿದೆ ಅಂತ ಸಾಬೀತು ಮಾಡ್ತೀನಿ ಅಂತ ಸವಾಲ್ ಹಾಕಿದ್ದಾರೆ. ಸಿದ್ದರಾಮಯ್ಯರ ಗರ್ವಭಂಗ ಮಾಡ್ತೀನಿ ಅಂತ ಶಪಥಗೈದಿದ್ದಾರೆ.

ಅದೇನೆ ಇರಲಿ 91ನೇ ವಯಸ್ಸಿನಲ್ಲಿ ಜೆಡಿಎಸ್ ಬಗ್ಗೆ ಸಾಬೀತು ಮಾಡ್ತೀನಿ ಅಂತ ಹೆಚ್‌ಡಿಡಿ ಪಣತೊಟ್ಟಿದ್ದಾರೆ. ದೋಸ್ತಿ ಜೊತೆ ಸೇರಿ ಕೈ ವಿರುದ್ಧ ಕೇಸರಿ ಕಿಡಿಯನ್ನ ಹಚ್ಚಿದ್ದಾರೆ. ಆದ್ರೀಗ ಬಿಜೆಪಿ ಶಾಲು ಧರಿಸಿ ಕಾಣಿಸಿಕೊಂಡ ಮುತ್ಸದ್ಧಿ ರಾಜಕಾರಣಿ ದೇವೇಗೌಡರು, ರಾಜಕೀಯದ ಮತ್ತೊಂದು ಮಜಲನ್ನ ಓರೆಗೆ ಹಚ್ಚಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಶಾಲು ಧರಿಸಿದ ಮುತ್ಸದ್ಧಿ ದೇವೇಗೌಡ; ರಾಜಕೀಯ ಪಡಶಾಲೆಯಲ್ಲಿ ಭಾರೀ ಚರ್ಚೆ..!

https://newsfirstlive.com/wp-content/uploads/2024/03/HD-DEVEGOWDA.jpg

Load More