newsfirstkannada.com

ಎಲ್ರಿ ಇದೆ ಮೋದಿ ಅಲೆ.. ಬಿಜೆಪಿ ಬಿಟ್ಟು ಕಾಂಗ್ರೆಸ್‌ ಪಕ್ಷ ಸೇರಿಕೊಂಡ ತೇಜಸ್ವಿನಿ ಗೌಡ ವಾಗ್ದಾಳಿ!

Share :

Published March 30, 2024 at 12:42pm

Update March 30, 2024 at 1:48pm

  ದೇಶದಲ್ಲಿ ಮೋದಿ ಅಲೆ ಇದೆ ಅಂದ್ರೆ ಯಾಕೆ ಕೇಂದ್ರ ಸಚಿವರ ಬದಲಾವಣೆ

  ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡ ತೇಜಸ್ವಿನಿ ಗೌಡ

  ಸೋನಿಯಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಎಲ್ಲರೂ ನನಗೆ ಪ್ರೇರಣೆ

ನವದೆಹಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಎಂಎಲ್‌ಸಿ ತೇಜಸ್ವಿನಿ ಗೌಡ ಅವರು ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ತೇಜಸ್ವಿನಿ ಗೌಡ ಅವರನ್ನು ಕಾಂಗ್ರೆಸ್ ಹಿರಿಯ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು.

ಲೋಕಸಭಾ ಚುನಾವಣೆ ಅನೌನ್ಸ್ ಆಗ್ತಿದ್ದಂತೆ ತೇಜಸ್ವಿನಿ ಗೌಡ ಅವರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಬಿಜೆಪಿ ಪಕ್ಷಕ್ಕೆ ಗುಡ್‌ಬೈ ಹೇಳಿದ ತೇಜಸ್ವಿನಿ ಗೌಡ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಗುಡ್​ಬೈ ಹೇಳಿದ ತೇಜಸ್ವಿನಿಗೌಡ; ಪಕ್ಷ ತೊರೆಯಲು ಕೊಟ್ಟ ಕಾರಣ ಏನು ಗೊತ್ತಾ?

ಕಾಂಗ್ರೆಸ್ ಪಕ್ಷ ಸೇರಿಕೊಂಡ ಬಳಿಕ ಎಐಸಿಸಿ ಕಚೇರಿಯಲ್ಲಿ ತೇಜಸ್ವಿನಿ ಗೌಡ ಅವರು ಮಾತನಾಡಿದ್ರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರದ್ದು ಅಷ್ಟೊಂದು ಹವಾ ಇದೆ ಅಂತಾರೆ. ಮೋದಿ ಅಲೆ ಇದೆ ಅಂದ್ರೆ ಯಾಕೆ ಹಾಲಿ ಕೇಂದ್ರ ಮಂತ್ರಿಗಳನ್ನು ಬದಲಾಯಿಸಿದ್ದಾರೆ. ನಾರಾಯಣ ಸ್ವಾಮಿ, ಶೋಭಾ ಕರಂದ್ಲಾಜೆ ಅವರ ಲೋಕಸಭಾ ಕ್ಷೇತ್ರವನ್ನು ಬದಲಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ 95 ವರ್ಷಗಳ ಹಳೇ ಪಕ್ಷ. ನನ್ನ ಮನೆಗೆ ನಾನು ವಾಪಸ್‌ ಬಂದಿದ್ದೇನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಎಲ್ಲರೂ ನನಗೆ ಪ್ರೇರಣೆ ಎಂದು ತೇಜಸ್ವಿನಿ ಗೌಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲ್ರಿ ಇದೆ ಮೋದಿ ಅಲೆ.. ಬಿಜೆಪಿ ಬಿಟ್ಟು ಕಾಂಗ್ರೆಸ್‌ ಪಕ್ಷ ಸೇರಿಕೊಂಡ ತೇಜಸ್ವಿನಿ ಗೌಡ ವಾಗ್ದಾಳಿ!

https://newsfirstlive.com/wp-content/uploads/2024/03/Tejaswini-Ramesh-Gowda-Congress.jpg

Load More