/newsfirstlive-kannada/media/post_attachments/wp-content/uploads/2024/09/TELAGU-STARS-DONATION-3.jpg)
ಹೈದ್ರಾಬಾದ್: ಆಂಧ್ರಪ್ರದೇಶ, ತೆಲಂಗಾಣದಲ್ಲಿ ವರುಣನ ಆರ್ಭಟ ಮುಗಿಲು ಮುಟ್ಟಿದ್ದು, ರಣಭೀಕರ ಮಳೆಗೆ ಎರಡು ರಾಜ್ಯಗಳಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹದ ಪರಿಸ್ಥಿತಿಗೆ ಜನಜೀವನ ಅಸ್ತವ್ಯಸ್ತವಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿರುವ ಜನರಿಗೆ ಡ್ರೋನ್‌ಗಳಲ್ಲಿ ಆಹಾರ ಸಾಮಾಗ್ರಿಗಳನ್ನು ಪೂರೈಸಲಾಗುತ್ತಿದೆ.
200 ವರ್ಷಗಳ ರಣಭೀಕರ ಮಳೆಗೆ ಆಂಧ್ರಪ್ರದೇಶದ ಹಲವೆಡೆ ದಿಢೀರ್ ಪ್ರವಾಹ ಎದುರಾಗಿದೆ. ವಿಜಯವಾಡದಲ್ಲಿ ಟಾಟಾ ಕಾರು ಡೀಲರ್ ಜಾಗ ಸಂಪೂರ್ಣ ಮುಳುಗಡೆಯಾಗಿದೆ. ಮಾರಾಟಕ್ಕೂ ಮುನ್ನ ಡೀಲರ್‌ಗಳು ವಿಜಯವಾಡದಲ್ಲಿ ನೂರಾರು ಕಾರುಗಳನ್ನ ಈ ಜಾಗದಲ್ಲಿ ನಿಲ್ಲಿಸಿದ್ದರು. ಭಾರೀ ಮಳೆ ಹಾಗೂ ದಿಢೀರ್ ಪ್ರವಾಹದಿಂದಾಗಿ ಮುಳುಗಡೆಯಾಗಿದೆ.
ಸದ್ಯ ಭೀಕರ ಮಳೆಯ ಸಂಕಷ್ಟದಲ್ಲಿರುವ ಜನರ ನೆರವಿಗೆ ಅಲ್ಲಿನ ಸಿನಿಮಾ ನಟರು ಹಾಗೂ ನಿರ್ಮಾಪಕರು ನೆರವಿಗೆ ಬಂದಿದ್ದಾರೆ. ಜ್ಯೂನಿಯರ್ ಎನ್​ಟಿಆರ್ ಹಾಗೂ ನಟ ವಿಶ್ವಕ್ ಸೇನ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ನೀಡಿದ್ದಾರೆ.
ತೆಲಗು ಚಿತ್ರರಂಗದ ಸೂಪರ್​ ಸ್ಟಾರ್ ಜ್ಯೂನಿಯರ್ ಎನ್​ಟಿಆರ್​ 50 ಲಕ್ಷ ರೂಪಾಯಿ ಸಿಎಂ ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ಅದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಇವರು, ಭೀಕರ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿದ್ದು ಜನರು ಅನೇಕ ಕಷ್ಟಗಳನ್ನು ಎದುರಿಸುತ್ತಿರುವುದು ನನಗೆ ತುಂಬಾ ನೋವು ತಂದಿದೆ. ನಾನು ಆ ದೇವರಲ್ಲಿ ಎರಡು ತೆಲಗು ರಾಜ್ಯದ ಜನರು ಬೇಗ ಈ ಪ್ರಕೃತಿ ವಿಕೋಪದಿಂದ ಚೇತರಿಸಿಕೊಳ್ಳಲಿ ಎಂದು ಬೇಡುತ್ತೇನೆ. ನಾನು ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಸಿಎಂ ರಿಲೀಫ್ ಫಂಡ್​ಗೆ ತಲಾ 50 ಲಕ್ಷ ರೂಪಾಯಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಒಂಟಿತನ, ಸೊಳ್ಳೆಕಾಟ, ನಿತ್ಯ ಕರ್ಮದ ಸಮಸ್ಯೆ.. ಬಳ್ಳಾರಿ ಜೈಲಲ್ಲಿ ದರ್ಶನ್‌ಗೆ 4 ನರಕ ದರ್ಶನ; ಏನಾಯ್ತು?
ಇನ್ನೂ ನಟ ವಿಶ್ವಕ್ ಸೇನ್ ಕೂಡ ಎರಡು ರಾಜ್ಯಗಳ ಸಿಎಂ ಪರಿಹಾರ ನಿಧಿಗೆ ತಲಾ ಐದು ಲಕ್ಷ ರೂಪಾಯಿ ನೀಡಿದ್ದಾರೆ. ವೈಜಯಂತಿ ಮೂವಿಯ ಅಶ್ವಿನಿ ದತ್ತ ಕೂಡ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಿರ್ದೇಶಕ ತ್ರಿವಿಕ್ರಮ ಶ್ರೀನಿವಾಸ ಕೂಡ 50 ಲಕ್ಷ ರೂಪಾಯಿ ಪರಿಹಾರ ನಿಧಿಗೆ ನೀಡಿದ್ದಾರೆ. ನಟ ನಂದಮೂರಿ ಬಾಲಕೃಷ್ಣ ಕೂಡ 1 ಕೋಟಿ ರೂಪಾಯಿ ಪರಿಹಾರ ನಿಧಿಗೆ ನೀಡಿದ್ದಾರೆ. ಉಭಯ ರಾಜ್ಯಗಳು ಈಗ ಸಂಕಷ್ಟ ಸಮಯದಲ್ಲಿದ್ದು, ಸರ್ಕಾರದ ನೆರವಿಗೆ ಬರುವ ಮೂಲಕ ಈ ನಟ, ನಿರ್ಮಾಪಕರು, ನಿರ್ದೇಶಕರು ಮಾನವೀಯತೆ ಮೆರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ