/newsfirstlive-kannada/media/post_attachments/wp-content/uploads/2024/10/MASALA-DOSE.jpg)
ಹೋಟೆಲ್​ಗೆ ಹೋದಾಕ್ಷಣ ನಮಗೆ ತಿನ್ನಲು ಮೊದಲು ಆಸೆ ಆಗೋದೆ ಗರಿ ಗರಿ ಮಸಾಲೆ ದೋಸೆಯದ್ದು. ಅದೆಷ್ಟೋ ಜನರ ಇಷ್ಟದ ತಿಂಡಿಯಲ್ಲಿ ಮೊದಲ ಸ್ಥಾನದಲ್ಲಿರೋದೆ ಮಸಾಲ ದೋಸೆ. ಹೀಗೆ ಇಷ್ಟವಾದ ಮಸಾಲೆ ತಿನ್ನುತ್ತಿರುವಾಗಲೇ ವ್ಯಕ್ತಿಯೊಬ್ಬರು ಪ್ರಾಣ ಬಿಟ್ಟ ಘಟನೆ ತೆಲಂಗಾಣದ ನಾಗರ್​ಕರ್ನೂಲ್​ನಲ್ಲಿ ನಡೆದಿದೆ.
ಇದನ್ನೂ ಓದಿ:ವಿಷಸರ್ಪ ಕಚ್ಚಿ ಮೂವರು ಸಾ*ವು.. ಪುಂಗಿದಾಸನನ್ನು ಕರೆಸಿ ಹಾವು ಹಿಡಿಯಲು ಮುಂದಾದ ಅರಣ್ಯ ಇಲಾಖೆ
43 ವರ್ಷದ ವ್ಯಕ್ತಿ ತೆಲಂಗಾಣದ ನಾಗರ್​ಕರ್ನೂಲ್​ನ ಸುಭಾಷ್ ನಗರದ ವೆಂಕಟಯ್ಯ ಎಂದು ಗುರುತಿಸಲಾಗಿದೆ. ಹೋಟೆಲ್​ಗೆ ಬಂದಿದ್ದ ವೆಂಕಟಯ್ಯ ತಿನ್ನಲು ಮಸಾಲ್ ದೋಸೆ ಆರ್ಡರ್ ಮಾಡಿದ್ದಾರೆ. ರುಚಿ ರುಚಿಯಾದ ಮಸಾಲೆ ದೋಸೆ ತಿನ್ನುವಾಗ ದೋಸೆ ಗಂಟಲಲ್ಲಿ ಸಿಕ್ಕಿಕೊಂಡಿದ್ದರಿಂದ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ:ಬೀದಿಗೆ ಬಂತು ಅಣ್ಣ-ತಂಗಿ ಆಸ್ತಿ ಕಲಹ.. Y.S ಜಗನ್‌ಗೆ ₹200 ಕೋಟಿ ಮೋಸ ಮಾಡಿದ್ರಾ ಶರ್ಮಿಳಾ?
ದೋಸೆ ತಿನ್ನುವಾಗ ಅದು ಗಂಟಲಲ್ಲಿ ಸಿಕ್ಕಿಕೊಂಡಾಗ ನೀರು ಕುಡಿದು ನಿರಾಳರಾಗಬೇಕೆಂದು ವೆಂಕಟಯ್ಯ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಅಷ್ಟರಲ್ಲಿ ಉಸಿರುಕಟ್ಟಿಕೊಂಡಿದೆ. ಏನೇ ಪ್ರಯತ್ನ ಪಟ್ಟರೂ ಕೂಡ ವೆಂಕಟಯ್ಯ ಬದುಕುಳಿಯಲು ಸಾಧ್ಯವಾಗಲಿಲ್ಲ. ಅವರಿಷ್ಟದ ದೋಸೆಯೇ ಅವರಿಗೆ ಮೃತ್ಯುವಾಗಿ ಪರಿಣಮಿಸಿದೆ. ಅಕ್ಕಪಕ್ಕದಲ್ಲಿದ್ದವರು ಸಹಾಯಕ್ಕೆ ಬರುವಷ್ಟರಲ್ಲಿ ವೆಂಕಟಯ್ಯ ಪ್ರಾಣಪಕ್ಷಿ ಹಾರಿ ಹೋಗಿದೆ.
ವರದಿಗಳು ಹೇಳುವ ಪ್ರಕಾರ ವೆಂಕಟಯ್ಯ ಮಸಾಲೆ ದೋಸೆ ತಿನ್ನೋಕೆ ಬರುವ ಮೊದಲು ಮದ್ಯಪಾನ ಮಾಡಿ ಬಂದಿದ್ದರು ಅಂತಲೂ ಹೇಳಲಾಗುತ್ತಿದೆ. ಮೃತಪಟ್ಟ ವೆಂಕಟಯ್ಯಗೆ ಪತ್ನಿ ಹಾಗೂ ಮೂವರು ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us