newsfirstkannada.com

ಸ್ಟಾರ್ ಹಾಸ್ಯ ನಟನ ಕಾರು ಬೈಕ್​ಗೆ ಡಿಕ್ಕಿ; BRS​ ಪಕ್ಷದ ಹಿರಿಯ ರಾಜಕಾರಣಿ ಸ್ಥಳದಲ್ಲೇ ಸಾವು

Share :

Published April 18, 2024 at 2:55pm

  ನರ್ಕೆಟ್​ಪಲ್ಲಿ-ಅಡ್ಡಂಕಿ ಹೆದ್ದಾರಿಯಲ್ಲಿ ದುರ್ಘಟನೆ

  ಯು-ಟರ್ನ್​ ತೆಗೆದುಕೊಳ್ತಿದ್ದಾಗ ಅಪಘಾತ ನಡೆದಿದೆ

  ಹಾಸ್ಯ ನಟನ ವಿರುದ್ಧ ಕೇಸ್ ದಾಖಲು, ತನಿಖೆ ಆರಂಭ

ತೆಲುಗು ಹಾಸ್ಯ ನಟ ರಘು ಬಾಬು ಪ್ರಯಾಣಿಸ್ತಿದ್ದ ಕಾರು ಬೈಕ್​ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಹಿರಿಯ ರಾಜಕಾರಣಿ ಒಬ್ಬರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ನರ್ಕೆಟ್​ಪಲ್ಲಿ-ಅಡ್ಡಂಕಿ (Narketpally-Addanki) ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:ಬೆಂಗಳೂರು: ಸ್ನೇಹಿತನ ಭೇಟಿಗೆ ಹೋಗಿದ್ದ ಯುವಕ ರೈಲಿಗೆ ಸಿಲುಕಿ ಸಾವು

ಸಂದಿನೇನಿ ಜನಾರ್ದನ್ ರಾವ್ (50) ಮೃತಪಟ್ಟ ವ್ಯಕ್ತಿ. ಇವರು ಕೆಸಿಆರ್​ ಅವರ ಬಿಆರ್​​ಎಸ್​ (ಭಾರತ್ ರಾಷ್ಟ್ರ ಸಮಿತಿ) ಪಕ್ಷದ ನಾರ್ಕೆಟ್‌ಪಲ್ಲಿ ಪಟ್ಟಣದ ಕಾರ್ಯದರ್ಶಿಯಾಗಿದ್ದರು. ನಟ ಹೈದರಾಬಾದ್ ಕಡೆಗೆ ತೆರಳುತ್ತಿದ್ದಾಗ ನಾರ್ಕೆಟ್‌ಪಲ್ಲಿ-ಅದ್ದಂಕಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ನಿನ್ನೆ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಹಾರ್ದಿಕ್ ಸ್ಥಾನಕ್ಕೆ ಬಂತು ಕುತ್ತು.. ಈಗ ರೋಹಿತ್ ಅಲ್ಲ, ದುಬೆ ಜೊತೆ ಫೈಟ್..!

ಜನಾರ್ದನ್ ಅವರು ಹೆದ್ದಾರಿಯಲ್ಲಿ ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ನಟನ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ 50 ಮೀಟರ್ ದೂರ ಹೋಗಿ ಬಿದ್ದಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ವೈದ್ಯರು ಸ್ಥಳಕ್ಕೆ ಧಾವಿಸಿದ್ದರು. ಆದರೆ ಜನಾರ್ದನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಜನಾರ್ದನ್ ಪತ್ನಿ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಕಾರನ್ನು ರಘು ಅವರ ಚಾಲಕ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್​ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್​​​​ ಆದವರ ಹೆಸರೂ ಇದೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಟಾರ್ ಹಾಸ್ಯ ನಟನ ಕಾರು ಬೈಕ್​ಗೆ ಡಿಕ್ಕಿ; BRS​ ಪಕ್ಷದ ಹಿರಿಯ ರಾಜಕಾರಣಿ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/04/TELUG-ACTOR-CAR.jpg

Load More