Advertisment

ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್.. ಕೋರ್ಟ್‌ನಲ್ಲಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದವೇನು?

author-image
admin
Updated On
ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್.. ಕೋರ್ಟ್‌ನಲ್ಲಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದವೇನು?
Advertisment
  • ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ
  • ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದ ಮೇಲೆ ರಿಟ್ ಅರ್ಜಿ
  • ನಾಳೆ ಜನಪ್ರತಿನಿಧಿಗಳ ನ್ಯಾಯಾಲಯ ನೀಡುವ ಆದೇಶಕ್ಕೆ ಬ್ರೇಕ್‌!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ಆರೋಪ ಪ್ರಕರಣ ತೀವ್ರ ಕುತೂಹಲ ಕೆರಳಿಸಿದೆ. ಸಿಎಂ ವಿರುದ್ಧ ತನಿಖೆಗೆ ಗವರ್ನರ್ ಆದೇಶ ನೀಡಿದ ಮೇಲೆ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಂದು ನ್ಯಾ. ಎಂ ನಾಗಪ್ರಸನ್ನ ಅವರ ಪೀಠದಲ್ಲಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಯಿತು. ಸಿಎಂ ಪರವಾಗಿ ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದ್ದಾರೆ.

Advertisment

ಇದನ್ನೂ ಓದಿ: ಸಿಎಂ ಬೆನ್ನಿಗೆ ನಿಂತ ಸುಪ್ರೀಂ ಕೋರ್ಟ್ ಹಿರಿಯ ವಕೀಲರು.. ಸಿದ್ದರಾಮಯ್ಯನವರ ಮೇಲಿರೋ ಆರೋಪಕ್ಕೆ ಮುಕ್ತಿ ಸಿಗುತ್ತಾ?

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರು 17A PC Act & 218 ಭಾರತೀಯ ದಂಡ ಸಂಹಿತೆ (BNS) ಅಡಿ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ವಿವೇಚನೆ ಇಲ್ಲದೇ ಷೋಕಾಸ್ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ವಾದ ಮಂಡಿಸಿದರು. ಇದಕ್ಕೆ ರಾಜ್ಯಪಾಲರ ಪರ ಎಸ್‌ಜಿ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಪಾಲರು ಯಾವುದೇ ವಿವೇಚನೆ ಇಲ್ಲದೆ ಷೋಕಾಸ್ ನೋಟಿಸ್‌ ನೀಡಬಹುದು. ಅದು ಚರ್ಚೆಯ ವಿಷಯವೇ ಅಲ್ಲ ಎಂದು ಪ್ರತಿವಾದ ಮಂಡಿಸಿದರು.

publive-image

ಸಿಎಂ ಪರ ವಕೀಲರ ವಾದವೇನು?
ರಾಜ್ಯಪಾಲರು ಅನುಮತಿ ನೀಡಿದ ವಿಧಾನದ ಬಗ್ಗೆ ಆಕ್ಷೇಪ
ಟಿ.ಜೆ ಅಬ್ರಹಾಂ ದೂರು ಕೊಟ್ಟ ದಿನವೇ ಗವರ್ನರ್ ನೋಟಿಸ್
ಕ್ಯಾಬಿನೆಟ್​​ ನಿರ್ಧಾರ ಮೀರಿ ರಾಜ್ಯಪಾಲರಿಂದ ತನಿಖೆಗೆ ಅನುಮತಿ
ಆರ್ಟಿಕಲ್​​ 163 ಅನ್ವಯ ಕ್ಯಾಬಿನೆಟ್​ ತೀರ್ಮಾನ ಒಪ್ಪಬೇಕಿತ್ತು
ಆದರೆ ಅದನ್ನು ತಿರಸ್ಕರಿಸಿ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದಾರೆ
ಆದರೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲು ಕಾರಣ ಉಲ್ಲೇಖಿಸಿಲ್ಲ
ಮುಡಾ ಬಗ್ಗೆ ತನಿಖೆಗೆ ಈಗಾಗಲೇ ಒಂದು ಆಯೋಗ ರಚನೆಯಾಗಿದೆ
ಜಮೀನು ಡಿನೋಟಿಫಿಕೇಶನ್​, ಸೈಟ್​ ಹಂಚಿಕೆಯಲ್ಲಿ ಸಿಎಂ ಪಾತ್ರವಿಲ್ಲ
ಬೇರೆ ಕೇಸ್​ ಇದ್ದರೂ ರಾಜ್ಯಪಾಲರು ಸೆಲೆಕ್ಟಿವ್​​ ಅಪ್ರೋಚ್​​ ಪ್ರದರ್ಶಿಸಿದ್ದಾರೆ
ಸಿಎಂಗೆ ಮಧ್ಯಂತರ ರಿಲೀಫ್​ ನೀಡುವಂತೆ ಮನುಸಿಂಘ್ವಿ ಮನವಿ

Advertisment

ರಾಜ್ಯಪಾಲರ ಪರ ವಾದವೇನು?
ಗವರ್ನರ್​ ಅವರಿಗೆ ಅಗೌರವ ತೋರುವುದು ಸರಿಯಲ್ಲ
ಪ್ರಕರಣದ ಮೆರಿಟ್​ ಮೇಲೆ ಗವರ್ನರ್​ ತೀರ್ಮಾಸಿದ್ದಾರೆ
ಕ್ಯಾಬಿನೆಟ್​ ನಿರ್ಧಾರವನ್ನು ರಾಜ್ಯಪಾಲರು ಒಪ್ಪಲೇಬೇಕಿಲ್ಲ
ತನ್ನ ವಿವೇಚನೆಯನ್ನು ಬಳಸಿ ನಿರ್ಧಾರ ತೆಗೆದುಕೊಳ್ಳಬಹುದು
ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು
ಅವರ ನಿರ್ಧಾರಕ್ಕೆ ಕೋರ್ಟ್​ ಮಧ್ಯಂತರ ತಡೆ ನೀಡಬಾರದು

ಹೀಗೆ ವಾದ ಮಂಡಿಸುವಾಗ ಅಭಿಷೇಕ್ ಮನು ಸಿಂಘ್ವಿ ಹಾಗೂ ತುಷಾರ್ ಮೆಹ್ತಾ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹಿಂದೆ ಅನೇಕರ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ‌ ಕೇಳಲಾಗಿದೆ. ಆದರೆ ಅದನ್ನ ಪರಿಗಣಿಸದೇ ಇದನ್ನ ಮಾತ್ರ ಪರಿಗಣಿಸಿದ್ದಾರೆ ಎಂದು ಸಿದ್ದರಾಮಯ್ಯ ಪರ ವಕೀಲರು ವಾದಿಸಿದರು.

ಇದನ್ನೂ ಓದಿ: 40 ವರ್ಷದಲ್ಲೇ ಸಿದ್ದರಾಮಯ್ಯಗೆ ಬಿಗ್‌ ಶಾಕ್‌.. ಸಿಎಂ ಸ್ಥಾನಕ್ಕೆ ಎದುರಾಗೋ 10 ಪರಿಣಾಮಗಳೇನು?

Advertisment

ಆಗಸ್ಟ್ 29ರವರೆಗೂ ಬಿಗ್ ರಿಲೀಫ್‌!
ಸಿದ್ದರಾಮಯ್ಯ ಹಾಗೂ ರಾಜ್ಯಪಾಲರ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಆಗಸ್ಟ್‌ 29ರ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ. ನಾಳೆ ಜನಪ್ರತಿನಿಧಿಗಳ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯ ಆದೇಶ ನೀಡದಂತೆ ಆದೇಶ ನೀಡಿದೆ. ಹೈಕೋರ್ಟ್‌ನ ಈ ಆದೇಶದಿಂದ ಆಗಸ್ಟ್ 29ರವರೆಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment