newsfirstkannada.com

VIDEO: ಏರಿಯಲ್ ರೋಪ್‌ನಲ್ಲಿ ಕೆಳಗಿಳಿಸುವಾಗ ಭಯಾನಕ ದುರಂತ; ವಿಸ್ಟೆಕ್ಸ್ ಕಂಪನಿ ಸಿಇಒ ದಾರುಣ ಸಾವು

Share :

Published January 20, 2024 at 12:33pm

Update January 20, 2024 at 12:35pm

    ಏರಿಯಲ್ ರೋಪ್‌ನಲ್ಲಿ ಸ್ಟೇಜ್‌ ಮೇಲೆ ಇಳಿಸುವಾಗ ಬಿದ್ದ ಸಿಇಒ ಸಾವು

    ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಸಂಭವಿಸಿದ ದುರಂತ

    ವಿಸ್ಟೆಕ್ಸ್ ಕಂಪನಿಯ ಅಧ್ಯಕ್ಷ ವಿಶ್ವನಾಥ ರಾಜು ಸ್ಥಿತಿಯೂ ಗಂಭೀರ

ಹೈದರಾಬಾದ್‌: ಅಮೆರಿಕಾ ಮೂಲದ ವಿಸ್ಟೆಕ್ಸ್‌ ಕಂಪನಿಯ ಸಿಲ್ವರ್ ಜುಬ್ಲಿ ಸಂಭ್ರಮಾಚರಣೆಯಲ್ಲಿ ಭಯಾನಕ ದುರಂತ ಸಂಭವಿಸಿದೆ. ಕಂಪನಿಯ ಸಿಇಒ ಹಾಗೂ ಚೇರ್‌ಮನ್ ಇಬ್ಬರನ್ನು ವೇದಿಕೆಯ ಮೇಲೆ ಏರಿಯಲ್ ರೋಪ್‌ನಲ್ಲಿ ಕೆಳಗಿಳಿಸುವಾಗ ಏರಿಯಲ್ ರೋಪ್ ಬರೋಬ್ಬರಿ 20 ಅಡಿ ಮೇಲಿದ್ದ ಕುಸಿದು ಬಿದ್ದಿದೆ. ದುರ್ಘಟನೆಯಲ್ಲಿ ವಿಸ್ಟೆಕ್ಸ್ ಕಂಪನಿಯ ಸಿಇಒ ಸಂಜಯ್ ಸಿಂಗ್ ಸಾವನ್ನಪ್ಪಿದ್ದಾರೆ.

ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಪ್ರತಿಷ್ಠಿತ ಐಟಿ ಕಂಪನಿಯಾದ ವಿಸ್ಟೆಕ್ಸ್‌ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಲ್ವರ್ ಜುಬ್ಲಿ ಸಮಾರಂಭ ಆಯೋಜಿಸಿತ್ತು. 2 ದಿನದ ರಜತ ಮಹೋತ್ಸವದಲ್ಲಿ ಕಂಪನಿಯ ವಿದೇಶಿ ಪ್ರತಿನಿಧಿಗಳು ಸೇರಿ 2000 ಸಿಬ್ಬಂದಿಗಳು ಭಾಗಿಯಾಗಿದ್ದರು.

ವಿಸ್ಟೇಕ್‌ ಸಿಲ್ವರ್ ಜುಬ್ಲಿ ಸಂಭ್ರಮಾಚರಣೆಗಾಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅತಿ ದೊಡ್ಡ ಸ್ಟೇಜ್ ಹಾಕಲಾಗಿತ್ತು. ಈ ಸ್ಟೇಜ್‌ಗೆ ಕಂಪಿನಿಯ ಸಿಇಒ ಸಂಜಯ್ ಸಿಂಗ್ ಹಾಗೂ ವಿಸ್ಟೆಕ್ಸ್ ಕಂಪನಿಯ ಅಧ್ಯಕ್ಷ ವಿಶ್ವನಾಥ ರಾಜು ಅವರನ್ನು ಏರಿಯಲ್ ರೋಪ್‌ನಲ್ಲಿ ಕರೆತರುವ ಪ್ಲಾನ್ ಮಾಡಲಾಗಿತ್ತು. ಏರಿಯಲ್ ರೋಪ್‌ನಲ್ಲಿ ಸಿಇಒ ಹಾಗೂ ಅಧ್ಯಕ್ಷ ಇಬ್ಬರನ್ನು ಕೆಳಗಿಳಿಸುವಾಗ 20 ಅಡಿ ಮೇಲಿನಿಂದ ಕಬ್ಬಿಣದ ಸರಪಳಿಯ ಒಂದು ಭಾಗ ಮುರಿದು ಅನಾಹುತ ಸಂಭವಿಸಿದೆ.

ಏರಿಯಲ್ ರೋಪ್‌ನಲ್ಲಿ ನಿಂತಿದ್ದ ಸಿಇಒ ಹಾಗೂ ಚೇರ್‌ಮನ್‌ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ರೋಪ್‌ನಿಂದ ಕೆಳಗೆ ಬಿದ್ದ ಸಂಜಯ್ ಸಿಂಗ್ ಸಾವನ್ನಪ್ಪಿದ್ರೆ ವಿಸ್ಟೆಕ್ಸ್ ಕಂಪನಿಯ ಅಧ್ಯಕ್ಷ ವಿಶ್ವನಾಥ ರಾಜುಗೂ ಗಂಭೀರ ಗಾಯಗಳಾಗಿದೆ. ಸಿಲ್ವರ್ ಜುಬ್ಲಿ ಸಂಭ್ರಮಾಚರಣೆ ಮಾಡುವ ಸ್ಟೇಜ್ ಮೇಲೆ ರೋಪ್ ಕುಸಿದು ಬಿದ್ದಿದ್ದು ಅಮೆರಿಕ ಮೂಲದ ಸಂಸ್ಥೆಯ ಭಾರತೀಯ ಸಿಇಒ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Breaking News: ಡಿವೋರ್ಸ್ ವದಂತಿ ಮಧ್ಯೆ ಎರಡನೇ ಮದುವೆಯಾದ ಸಾನಿಯಾ ಮಿರ್ಜಾ ಪತಿ ಮಲಿಕ್..!

ಕಳೆದ ಗುರುವಾರ ರಾತ್ರಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಏರಿಯಲ್ ರೋಪ್‌ನಲ್ಲಿ ಕೆಳಗೆ ಬಿದ್ದಾಗ ಆ್ಯಂಬುಲೆನ್ಸ್ ಬರುವುದು ತಡವಾಗಿದೆ. ಹೀಗಾಗಿ ವಿಸ್ಟೇಕ್ಸ್ ಕಂಪನಿ ಸಿಇಒ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಏರಿಯಲ್ ರೋಪ್ ನಿರ್ವಹಣೆಯಲ್ಲೂ ದೋಷ ಕಂಡು ಬಂದಿದ್ದು, ರಾಮೋಜಿ ಫಿಲ್ಮ್ ಸಿಟಿಯ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಕಂಪನಿಯ ಆಡಳಿತ ಮಂಡಳಿ ಆರೋಪ ಮಾಡಿದೆ. ಹೈದರಾಬಾದ್ ಪೊಲೀಸರು ಈ ಘಟನೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಏರಿಯಲ್ ರೋಪ್‌ನಲ್ಲಿ ಕೆಳಗಿಳಿಸುವಾಗ ಭಯಾನಕ ದುರಂತ; ವಿಸ್ಟೆಕ್ಸ್ ಕಂಪನಿ ಸಿಇಒ ದಾರುಣ ಸಾವು

https://newsfirstlive.com/wp-content/uploads/2024/01/Vistex-CEO-Death.jpg

Load More