ಎಚ್ಚರ.. ಪ್ರತಿದಿನ ಸ್ನಾನ ಮಾಡದೇ ನಿರ್ಲಕ್ಷ್ಯ ತೋರಿದ್ರೆ ಕಾಡುತ್ತೆ ಈ ಭಯಾನಕ ಕಾಯಿಲೆ; ಏನದು?

author-image
Veena Gangani
Updated On
ಎಚ್ಚರ.. ಪ್ರತಿದಿನ ಸ್ನಾನ ಮಾಡದೇ ನಿರ್ಲಕ್ಷ್ಯ ತೋರಿದ್ರೆ ಕಾಡುತ್ತೆ ಈ ಭಯಾನಕ ಕಾಯಿಲೆ; ಏನದು?
Advertisment
  • ಸ್ನಾನ ಮಾಡದೇ ಇರುವ ಜನರೇ ಈ ಸ್ಟೋರಿ ಓದಲೇಬೇಕು
  • ಹೆಚ್ಚಾಗಿ ಬೆವರುವುದರಿಂದ ಚರ್ಮದ ಸೋಂಕು ಎದುರಾಗುತ್ತೆ!
  • ಮೆಡಿಕಲ್​ನಲ್ಲಿ ಸಿಗುವ ಸ್ಟಿರಾಯ್ಡ್​ಗಳ ಸೇವನೆ ಮಾಡೋ ಮುನ್ನ ಎಚ್ಚರ

ಬೆಂಗಳೂರು: ದಿನದಿಂದ ದಿನಕ್ಕೆ ಬಿರು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಹೊರ ಬರೋದಕ್ಕೂ ಜನರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಇಂತಹ ಉರಿ ಬಿಸಿಲಿನಲ್ಲಿ ದಿನಕ್ಕೆ ಮೂರು ಬಾರಿ ಸ್ನಾನ ಮಾಡಿದ್ರೂ ಕಡಿಮೆ. ಆದರೆ ಕೆಲವರು ವಾರಕ್ಕೆ ಎರಡು ಬಾರಿ ಮಾತ್ರ ಮಾಡೋದು ಉಂಟು. ಅಂತಹವರಿಗೆ ಇದೀಗ ಚರ್ಮ ರೋಗ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.

publive-image

ಇದನ್ನೂ ಓದಿ:ಬೆಂಗಳೂರಲ್ಲಿ ಒಂದು ವಾರ ಭೀಕರ ಬಿಸಿಲು; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು?

ಬಿರು ಬಿಸಿಲಿನ ತಾಪಮಾನಕ್ಕೆ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತವೆ. ರಣಭೀಕರ ಬಿಸಿಲಿನಿಂದ ಸೂಕ್ಷ್ಮವಾದ ನಮ್ಮ ಚರ್ಮ ಕೂಡ ದುರ್ಬಲಗೊಳ್ಳುತ್ತದೆ. ಹೀಗಾಗಿ ಇಂತಹ ಬಿಸಿಲಿನಲ್ಲಿ ಪ್ರತಿಯೊಬ್ಬರು ಸ್ನಾನ ಮಾಡಬೇಕು. ಕೇವಲ ಒಂದು ಬಾರಿ ಅಲ್ಲದೇ, ಎರಡು ಬಾರಿ ದೇಹಕ್ಕೆ ತಣ್ಣೀರಿನಿಂದ ಸ್ನಾನ ಮಾಡಿದರೇ ಲೇಸು. ಆದರೆ ಇದೀಗ ನಿತ್ಯ ಸ್ನಾನವನ್ನು ನಿರ್ಲಕ್ಷ್ಯ ಮಾಡೋರಿಗೆ ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೌದು, ಸ್ನಾನವನ್ನು ನಿರ್ಲಕ್ಷ್ಯ ಮಾಡೋರಿಗೆ ಫಂಗಸ್ ಕಾಯಿಲೆ ಬರಲಿದೆಯಂತೆ. ನಿತ್ಯ ಸ್ನಾನ ಮಾಡದೇ ಇರೋರಿಗೆ ಕಾಯಿಲೆ ಕಾಡುತ್ತಿದೆಯಂತೆ. ಇನ್ನು, ಇತ್ತೀಚೆಗೆ 100 ರಲ್ಲಿ 70 ಮಂದಿ ಈ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬೇಸಿಗೆಯಲ್ಲಿ ಪ್ರತಿನಿತ್ಯ ದಿನಕ್ಕೆ 2 ಬಾರಿಯಾದರೂ ಸ್ನಾನವನ್ನು ಮಾಡಿ. ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

publive-image

ಬಿ ಅಲರ್ಟ್ ಎಂದ ವೈದ್ಯರು!

ಹೆಚ್ಚಾಗಿ ಬೆವರುವುದರಿಂದ ಚರ್ಮದ ಸೋಂಕು ಎದುರಾಗುತ್ತವೆ. ರಣ ಬಿಸಿಲಿನ ನಡುವೆ ಇಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಬೇಸಿಗೆಯಲ್ಲಿ ಮಕ್ಕಳನ್ನ ಗಜಕರ್ಣ ಕಾಯಿಲೆ ಹೆಚ್ಚಾಗಿ ಕಾಡುತ್ತೆ. ಪೋಷಕರು ‌ಮಕ್ಕಳನ್ನ ಆಸ್ಪತ್ರೆಗೆ ಸೇರಿಸದೆ ನಿರ್ಲಕ್ಷ್ಯ ತೊರುತ್ತಿದ್ದಾರೆ. ಕೆಲ ಮೆಡಿಕಲ್​ನಲ್ಲಿ ಸಿಗುವ ಸ್ಟಿರಾಯ್ಡ್​​​ಗಳನ್ನು ಬಳಸುತ್ತಿದ್ದಾರೆ. ಈ ಸ್ಟಿರಾಯಿಡ್ ತುಂಬಾ ಅಪಾಯಕಾರಿ. ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಇದನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment