/newsfirstlive-kannada/media/post_attachments/wp-content/uploads/2024/03/Elon-musk.jpg)
ವಿಶ್ವದ ಶ್ರೀಮಂತ ಉದ್ಯಮಿ ಅಂತ ಹೆಸರು ಗಳಿಸಿರೋ ಎಲಾನ್ ಮಸ್ಕ್ 12ನೇ ಮಗುವಿಗೆ ತಂದೆಯಾಗಿದ್ದಾರೆ. ವಿಶೇಷ ಅಂದರೆ ಕಳೆದ 5 ವರ್ಷದಲ್ಲಿ 6 ಮಕ್ಕಳ ತಂದೆಯಾಗಿದ್ದಾರೆ.
ಇದನ್ನೂ ಓದಿ: ಹೆತ್ತ ಮಗಳನ್ನೇ ಮನೆಯಲ್ಲಿ ಹೂತು ಹಾಕಿದ ತಾಯಿ.. ತನಿಖೆ ವೇಳೆ ಕೊಟ್ಟ ಕಾರಣ ಏನು ಗೊತ್ತಾ?
ಎಲಾನ್ ಮಸ್ಕ್ನ 12ನೇ ಮಗುವಿನ ತಾಯಿ ನ್ಯೂರಾಲಿಂಕ್ ಕಂಪನಿ ಮ್ಯಾನೇಜರ್ ಶಿವೊನ್ ಝಿಲಿಸ್ ಅನ್ನೋ ಮಾಹಿತಿ ಬಹಿರಂಗವಾಗಿದೆ. ಇನ್ನು 6 ಮಕ್ಕಳಲ್ಲಿ ಮೂರು ಮಕ್ಕಳು ಕೆನಡಾ ಮೂಲದ ಗಾಯಕಿ ಗ್ರಿಮ್ಸ್ ತಾಯಿಯಾಗಿದ್ದರೆ, ಇನ್ನುಳಿದ ಮೂರು ಮಕ್ಕಳು ಶಿವೊನ್ ಝಿಲಿಸ್ ತಾಯಿಯಾಗಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ ಏನ್ ಲುಕ್ ಗುರು.. ತನ್ವಿ ರಾವ್ ರಗಡ್ ಡ್ಯಾನ್ಸ್ಗೆ ಅಭಿಮಾನಿಗಳು ಫುಲ್ ಫಿದಾ
ಆದರೆ ಮಗುವಿನ ಹೆಸರು ಸೇರಿದಂತೆ ಇತರ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. 2000ನೇ ಇಸವಿಯಲ್ಲಿ ಎಲಾನ್ ಮಸ್ಕ್ ಕೆನಡಾ ಬರಹಗಾರ್ತಿ ಜಸ್ಟಿನ್ ವಿಲ್ಸನ್ರನ್ನ ಮದುವೆಯಾಗಿದ್ದರು. 2002ರಲ್ಲಿ ಮಸ್ಕ್‌ಗೆ ಹುಟ್ಟಿದ ಮಗು 10 ವಾರದಲ್ಲಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಬಳಿಕ 2004ರಲ್ಲಿ ಅವಳಿ ಜವಳಿ ಜನನವಾಗಿತ್ತು. 2008ರಲ್ಲಿ ಮಸ್ಕ್ ಹಾಗೂ ವಿಲ್ಸನ್ ವಿಚ್ಛೇದನ ಪಡೆದುಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ