/newsfirstlive-kannada/media/post_attachments/wp-content/uploads/2024/09/love1.jpg)
ಸಾಕಷ್ಟು ಜನರು ತಮ್ಮ ಜೀವನ ನಡೆಸಲು ಕೆಲಸಕ್ಕೆ ಹೋಗ್ತಾರೆ. ಆದರೆ ಇದೇ ಕೆಲಸದಲ್ಲಿ ಬ್ಯುಸಿಯಾಗುತ್ತಾ ತಮ್ಮ ವೈಯಕ್ತಿಕ ಜೀವನಕ್ಕೆ ಟೈಮ್ ಕೊಡೋದಕ್ಕೆ ಆಗದೇ ಒದಾಡುತ್ತಾ ಇರುತ್ತಾರೆ. ಅದರಲ್ಲೂ ಕೆಲಸದ ಒತ್ತಡದಲ್ಲಿ ಲವರ್ಸ್ಗಳ ಜೊತೆಗೆ ಕಾಲ ಕಳೆಯೋದಕ್ಕೆ ಆಗದೇ ಬೇಸರ ಹೊರಹಾಕುತ್ತಾ ಇರುತ್ತಾರೆ.
ಇದನ್ನೂ ಓದಿ:10 ನಿಮಿಷದಲ್ಲಿ ಹೀಗೆ ಮೋದಕ ತಯಾರಿಸಿ! ಗಣೇಶನಿಗೆ ಮಾತ್ರವಲ್ಲ ನಿಮಗೂ ಇಷ್ಟವಾಗುತ್ತೆ ನೋಡಿ
ಆದರೆ ಇದೀಗ ಇಂಥವರಿಗಾಗಿಯೇ ಬಂಪರ್ ಆಫರ್ ನೀಡಿದೆ ಈ ಕಂಪನಿ. ಹೌದು, ಇತ್ತೀಚೆಗೆ ನಮ್ಮ ದೇಶದಲ್ಲಿ ಡೇಟಿಂಗ್ ಸಂಸ್ಕೃತಿ ಹೆಚ್ಚಾಗಿದೆ ಎಂದು ಹೇಳಬಹುದು. ಆದರೆ ಈ ಡೇಟಿಂಗ್ ಸಂಸ್ಕೃತಿ ಭಾರತಕ್ಕಿಂತ ವಿದೇಶಗಳಲ್ಲಿ ಸಾಮಾನ್ಯವಾಗಿದೆ. ಅನೇಕರು ಕೆಲಸದಿಂದ ಸ್ವಲ್ಪ ಬಿಡುವಿನ ವೇಳೆಗೆ ತಮ್ಮ ಗೆಳತಿಯರೊಂದಿಗೆ ಡೇಟ್‌ಗೆ ಹೋಗುತ್ತಾರೆ. ಅದೇ ಸಮಯದಲ್ಲಿ ಡೇಟಿಂಗ್ನಲ್ಲಿ ಬ್ಯುಸಿ ಆಗಿ ಕೆಲಸಕ್ಕೆ ರಜೆ ಹಾಕುವುದು ಉಂಟು. ಆದರೆ ಇನ್ಮುಂದೆ ಅದಕ್ಕೆ ತಲೆನೋವು ಇರೋದಿಲ್ಲ ಬಿಡಿ. ಥೈಲ್ಯಾಂಡ್‌ನ ಕಂಪನಿಯೊಂದು ತನ್ನ ಸಿಬ್ಬಂದಿಗಾಗಿಯೇ ವಿನೂತನವಾಗಿ ಪ್ಲಾನ್ವೊಂದು ಜಾರಿ ಮಾಡಿದೆ.
ಥೈಲ್ಯಾಂಡ್ ಮೂಲದ ಮಾರ್ಕೆಟಿಂಗ್ ಏಜೆನ್ಸಿ ವೈಟ್‌ಲೈನ್ ಗ್ರೂಪ್ ತನ್ನ ಉದ್ಯೋಗಿಗಳಿಗೆ 'ಟಿಂಡರ್ ಲೀವ್' ಘೋಷಿಸಿದೆ. 6 ತಿಂಗಳೊಮ್ಮೆ ಉದ್ಯೋಗಿಗಳಿಗೆ ತಮ್ಮ ಗೆಳತಿಯರೊಂದಿಗೆ ಡೇಟ್ ಮಾಡಲು ವೇತನ ಸಹಿತ ರಜೆ ನೀಡಲಾಗುತ್ತಿದೆ ಎಂದು ಅದು ಹೇಳಿದೆ. ಉದ್ಯೋಗಿಗಳು ಜುಲೈ ಮತ್ತು ಡಿಸೆಂಬರ್ ನಡುವೆ ಯಾವುದೇ ಸಮಯದಲ್ಲಿ ಈ ರಜೆಗಳನ್ನು ಬಳಸಬಹುದು ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಗೌರಿ ಪೂಜೆಗೆ ಒಳ್ಳೆಯ ಮುಹೂರ್ತ ಯಾವ್ದು? ಸ್ವರ್ಣಗೌರಿ ವ್ರತದಿಂದ ಆಗುವ ಪ್ರಯೋಜನ ಏನು?
ನೌಕರರ ಕಲ್ಯಾಣಕ್ಕಾಗಿ ಈ ಹೊಸ ‘ಟಿಂಡರ್ ಲೀವ್’ ಜಾರಿ ಮಾಡಿದೆ. ಆದರೆ, ಟಿಂಡರ್ ಲೀವ್ ಹೆಸರಿನಲ್ಲಿ ಎಷ್ಟು ದಿನ ರಜೆ ನೀಡಲಾಗಿದೆ ಎಂಬುದನ್ನು ಕಂಪನಿ ಮಾಹಿತಿ ನೀಡಿಲ್ಲ. ಈ ರಜೆಗಾಗಿ ಅರ್ಜಿ ಸಲ್ಲಿಸುವ ನೌಕರರು ಒಂದು ವಾರ ಮುಂಚಿತವಾಗಿ ತಿಳಿಸಬೇಕು. ಸಂಸ್ಥೆಯು ಕೈಗೊಂಡಿರುವ ಈ ವಿನೂತನ ನಿರ್ಧಾರದಿಂದ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಚೆನ್ನಾಗಿ ಕೆಲಸ ಮಾಡಬೇಕು ಎಂದು ವ್ಯವಸ್ಥಾಪಕರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ