newsfirstkannada.com

MGR, ಶಿವಾಜಿ ಗಣೇಶನ್, ಕಮಲ್‌ ಬಳಿಕ ವಿಜಯ್ ಎಂಟ್ರಿ; ದಳಪತಿ ನೂತನ ಪಕ್ಷದ ಪ್ಲಾನ್ ಏನು?

Share :

Published January 30, 2024 at 3:42pm

Update January 30, 2024 at 3:48pm

    ತಮಿಳುನಾಡು ರಾಜಕೀಯಕ್ಕೆ ಮತ್ತೊಬ್ಬ ಸ್ಟಾರ್‌ ನಟನ ಎಂಟ್ರಿ

    200 ಸದಸ್ಯರ ಜೊತೆ ಸಾಮಾನ್ಯ ಸಭೆ ನಡೆಸಿರುವ ವಿಜಯ್‌

    ದಳಪತಿ ವಿಜಯ್ ಅವರೇ ಆ ಪಕ್ಷದ ಅಧ್ಯಕ್ಷರಾಗಿ ಆಯ್ಕೆ

ಚೆನ್ನೈ: ತಮಿಳುನಾಡು ರಾಜಕೀಯಕ್ಕೆ ಮತ್ತೊಬ್ಬ ಸ್ಟಾರ್‌ ನಟನ ಎಂಟ್ರಿ ಫಿಕ್ಸ್ ಆಗಿದೆ. ದಳಪತಿ ಖ್ಯಾತಿಯ ವಿಜಯ್‌ ತಮ್ಮ ರಾಜಕೀಯ ಪಕ್ಷ ಕಟ್ಟುವ ಸಿದ್ಧತೆ ಆರಂಭಿಸಿದ್ದಾರೆ. ವಿಜಯ್ ಅತ್ಯಾಪ್ತರ ಪ್ರಕಾರ ಕೇಂದ್ರ ಚುನಾವಣಾ ಆಯೋಗಕ್ಕೆ ಈಗಾಗಲೇ ಪಾರ್ಟಿ ಬಗ್ಗೆ ವಿವರ ನೀಡಿ ಮನವಿ ಮಾಡಲಾಗಿದೆ. ದಳಪತಿ ವಿಜಯ್ ಅವರೇ ಆ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿಯಾಗುವ ಸುಳಿವು ನೀಡಿದ್ದಾರೆ. ಇದೀಗ 200 ಸದಸ್ಯರ ಜೊತೆಗೆ ಪಕ್ಷದ ಸಾಮಾನ್ಯ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲೇ ರಾಜಕೀಯ ಪಕ್ಷ ಕಟ್ಟುವ ತೀರ್ಮಾನ ಕೈಗೊಳ್ಳಲಾಗಿದೆ. ವಿಜಯ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಜಿಯನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.

ನೂತನ ಪಕ್ಷದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಪಕ್ಷದ ಹೆಸರು, ಚಿಹ್ನೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ನಿರ್ಧಾರವನ್ನು ದಳಪತಿ ವಿಜಯ್ ಅವರಿಗೆ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ 2026ರಲ್ಲಿ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಹೊಸ ಪಕ್ಷ ಸ್ಪರ್ಧಿಸಲಿದೆ. ಮುಂದಿನ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ತಯಾರಿಯನ್ನು ಈಗಾಗಲೇ ಆರಂಭಿಸಿದ್ದಾರೆ.

ಇದನ್ನೂ ಓದಿ: ‘ನಟನಾ ಬದುಕಿಗೆ ಬ್ರೇಕ್’ ಎಂದ ದಳಪತಿ ವಿಜಯ್; ತಮಿಳುನಾಡು ರಾಜಕಾರಣದಲ್ಲಿ ಮತ್ತೊಬ್ಬ ರೀಲ್ to ‘ರಿಯಲ್’ ಹೀರೋನ ಉದಯ..!?

ವಿಜಯ್ ಅವರು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಳಿಕ ಅತಿಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದುವರೆಗೂ 68ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ವಿಜಯ್‌ ಹೆಸರಲ್ಲಿ ಹಲವು ಫ್ಯಾನ್ಸ್ ಕ್ಲಬ್‌ಗಳಿವೆ. ಹಲವು ಚಾರಿಟಿ ಹಾಗೂ ಸಂಘ ಸಂಸ್ಥೆಗಳ ಮುಖಾಂತರ ನಟ ವಿಜಯ್ ಅವರು ಉಚಿತ ಆಹಾರ ವಿತರಣೆ, ಶೈಕ್ಷಣಿಕ ವಿದ್ಯಾರ್ಥಿ ವೇತನಗಳು, ಗ್ರಂಥಾಲಯಗಳು, ಸಂಜೆ ಶಿಕ್ಷಣ ಮತ್ತು ಕಾನೂನು ಸಹಾಯ ನೀಡುತ್ತಿದ್ದಾರೆ.

ತಮಿಳುನಾಡಿನಲ್ಲಿ ಹಲವಾರು ಸ್ಟಾರ್ ನಟರು ರಾಜಕೀಯಕ್ಕೆ ಬಂದಿದ್ದಾರೆ. ಎಂಜಿಆರ್, ಶಿವಾಜಿ ಗಣೇಶನ್, ಕರುಣಾನಿಧಿ, ಜಯಲಲಿತಾ, ಕಮಲ್ ಹಾಸನ್, ರಜನಿಕಾಂತ್, ಕ್ಯಾಪ್ಟನ್ ವಿಜಯ್ ರಾಜಕೀಯದಲ್ಲಿ ಹೆಸರು ಮಾಡಿದ್ದಾರೆ. ಅಂಬೇಡ್ಕರ್ ಹಾಗೂ ಪೆರಿಯಾರ್ ಕಾಮರಾಜ್ ಅವರ ಸಿದ್ಧಾಂತದಲ್ಲಿ ಹೆಚ್ಚು ನಂಬಿಕೆ ಇರುವ ವಿಜಯ್ ಅವರು ಇದೀಗ ನೂತನ ರಾಜಕೀಯ ಪಕ್ಷ ಕಟ್ಟುತ್ತಿದ್ದಾರೆ. ವಿಜಯ್ ಅವರ ಪಾರ್ಟಿ ಸಿನಿಮಾದಂತೆ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MGR, ಶಿವಾಜಿ ಗಣೇಶನ್, ಕಮಲ್‌ ಬಳಿಕ ವಿಜಯ್ ಎಂಟ್ರಿ; ದಳಪತಿ ನೂತನ ಪಕ್ಷದ ಪ್ಲಾನ್ ಏನು?

https://newsfirstlive.com/wp-content/uploads/2023/09/vijay-6.jpg

Load More