ಕೆವಿಎನ್ ನಿರ್ಮಾಣದಲ್ಲಿ ವಿಜಯ್ 69ನೇ ಸಿನಿಮಾ
500 ಕೋಟಿಗೂ ಅಧಿಕ ಬಜೆಟ್ನಲ್ಲಿ ಮೂಡಿ ಬರೋ ಸಿನಿಮಾ
ವಿಜಯ್ ಸಿನಿ ಕೆರಿಯರ್ನ ಕೊನೆಯ ಸಿನಿಮಾ ಮಾಡುತ್ತಿರೋ ಕೆವಿಎನ್
ಬಹುನಿರೀಕ್ಷಿತ ಟಾಕ್ಸಿಕ್, ಕೆಡಿ ಸಿನಿಮಾವನ್ನು ನಿರ್ಮಿಸುತ್ತಿರುವ ಜನಪ್ರಿಯ KVN ಪ್ರೊಡಕ್ಷನ್ಸ್ ಸಂಸ್ಥೆ ಇದೀಗ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ. ಆ ಮೂಲಕ ಎಲ್ಲರಿಗೂ ಬಿಗ್ ಸರ್ಪ್ರೈಸ್ ನೀಡಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ್ ಕನ್ನಡದಲ್ಲಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೊತೆಗೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾವನ್ನು ಮಾಡುತ್ತಿದ್ದಾರೆ. ಇದೀಗ ಇಳಯದಳಪತಿ ವಿಜಯ್ 69ನೇ ಚಿತ್ರ ಕೆವಿಎನ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ.
ದಳಪತಿಯ 69ನೇ ಚಿತ್ರ ಇದಾಗಿದ್ದು, 500 ಕೋಟಿಗೂ ಅಧಿಕ ಬಜೆಟ್ನಲ್ಲಿ ಚಿತ್ರ ತಯಾರಾಗುತ್ತಿದೆ. ಈಗಾಗಲೇ ದೊಡ್ಡ ಬಜೆಟ್ನಲ್ಲಿ ಕೆವಿಎನ್ ಕೆ ವೆಂಕಟ್ ನಾರಾಯಣ್ ಅವರು ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: ಫ್ಯಾನ್ಸ್ಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ ಸೀರಿಯಲ್ ನಟಿ ಗೌತಮಿ ಜಾಧವ್; ಇದು ಅದೇನಾ..?
ಅಂದಹಾಗೆಯೇ ವಿಜಯ್ ಸಿನಿ ಕೆರಿಯರ್ನ ಕೊನೆಯ ಸಿನಿಮಾ ಇದಾಗಿದೆ. ಮತ್ತೊಂದೆಡೆ ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರವಿರೋ ಕಥೆ ಎಂದು ಹೇಳಲಾಗ್ತಿದೆ. ಮಾತ್ರವಲ್ಲದೆ ವಿಜಯ್ ರಾಜಕೀಯ ಭವಿಷ್ಯಕ್ಕೆ ಈ ಚಿತ್ರ ಭವ್ಯ ಮೆಟ್ಟಿಲಾಗಲಿದೆಯಂತೆ.
ಇದನ್ನೂ ಓದಿ: ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದ ಜನಮೆಚ್ಚಿದ ಗಿಚ್ಚಿ ಗಿಲಿಗಿಲಿ; ವಿನ್ನರ್ ಆಗೋದ್ಯಾರು?
ದಳಪತಿ ವಿಜಯ್ ನಟನೆಯ ಈ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಹೆಚ್. ವಿನೋದ್ ನಿರ್ದೇಶಿಸಲಿದ್ದಾರೆ. ಅಂದಹಾಗೆಯೇ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಐದನೇ ಚಿತ್ರ ಇದಾಗಿದ್ದು, ಬಹುನೀರಿಕ್ಷೆಯಿಂದ ಕೂಡಿದೆ. ಅಭಿಮಾನಿಗಳೂ ಸಹ ವಿಜಯ್ ನಟನೆಯ ಕೊನೆಯ ಸಿನಿಮಾ ನೋಡಲು ಕಾತುರರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ