/newsfirstlive-kannada/media/post_attachments/wp-content/uploads/2024/08/tharun4.jpg)
ಇತ್ತೀಚೆಗಷ್ಟೇ ಸ್ಯಾಂಡಲ್​ವುಡ್​ ಸ್ಟಾರ್​ ಡೈರೆಕ್ಟರ್ ತರುಣ್​ ಸುಧೀರ್​ ಹಾಗೂ ಸೋನಲ್​ ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಮದುವೆಗೆ ಸ್ಯಾಂಡಲ್​​ವುಡ್​ ಗಣ್ಯರು ಬಂದು ನವಜೋಡಿಗೆ ಶುಭ ಹಾರೈಸಿದ್ದರು. ಮದುವೆಯಾದ ಬಳಿಕ ಮೊದಲ ಬಾರಿಗೆ ರಿಯಾಲಿಟಿ ಶೋಗೆ ದಂಪತಿ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಎಂದರೆ ಸರ್ಪ್ರೈಸ್ ರೀತಿಯಲ್ಲಿ ಶೋಗೆ ನಟಿ ಸೋನಲ್​ ಮೊಂತೆರೋ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/08/tharun3.jpg)
ಆಗಸ್ಟ್​ 10 ಹಾಗೂ 11ರಂದು ಗುರು ಹಿರಿಯರ ಸಮ್ಮುಖದಲ್ಲಿ ಈ ಸ್ಟಾರ್​ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಮದುವೆಯಾದ ಬಳಿಕ ಮೊದಲ ಬಾರಿಗೆ ಈ ಜೋಡಿ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಸ್ಟಾರ್​ ನಿರ್ದೇಶಕ ತರುಣ್​ ಸುಧೀರ್​ ಅವರು ಮಹಾನಟಿ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಶೋ ಮುಕ್ತಾಯದ ಬಳಿಕ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟಿದ್ದರು. ಮದುವೆ ವಿಚಾರ ಕೇಳಿ ಫ್ಯಾನ್ಸ್​ ಕೂಡ ಫುಲ್ ಖುಷ್ ಆಗಿದ್ದರು.
/newsfirstlive-kannada/media/post_attachments/wp-content/uploads/2024/08/tharun5.jpg)
ಡಿಕೆಡಿ ಶೋಗೆ ತರುಣ್​ ಸುಧೀರ್​ ಅವರು ಗೆಸ್ಟ್​ ಆಗಿ ಬಂದಿದ್ದರು. ಇದೇ ವೇಳೆ ನಿರೂಪಕಿ ಅನುಶ್ರೀ ಅವರು ತರುಣ್​ ಸುಧೀರ್​ ಪತ್ನಿ ಸೋನಲ್​ ಅವರನ್ನು ಶ್ರೀಗಂಧದ ಗೊಂಬೆ ಹಾಡಿನ ಮೂಲಕ ತುಂಬಾ ಗ್ರ್ಯಾಂಡ್​ ಆಗಿ ಬರಮಾಡಿಕೊಂಡಿದ್ದರು. ಸೋನಲ್​ ಅವರನ್ನು ನೋಡಿದ ಕೂಡಲೇ ನಿರ್ದೇಶಕ ತರುಣ್​ ಸುಧೀರ್ ಶಾಕ್​ ಆಗಿದ್ದಾರೆ. ಇಬ್ಬರನ್ನು ವೇದಿಕೆಗೆ ಕರೆಸಿಕೊಂಡ ಅನುಶ್ರೀ ಕೇಳಿದ ಪ್ರಶ್ನೆ ಇಬ್ಬರು ಉತ್ತರ ಕೊಟ್ಟಿದ್ದಾರೆ.
View this post on Instagram
ಮದುವೆಯಾದ ಮೇಲೆ ಮೊದಲ ಬಾರಿಗೆ ಈ ಶೋಗೆ ಬಾರ್ತಾ ಇರೋದು ಅಂತ ಸೋನಲ್​ ಹೇಳಿದ್ದಾರೆ. ಆಗ ಅನುಶ್ರೀ ಪ್ರೀತಿಯಿಂದ ಸೋನಲ್​ ಅವನ್ನು ಏನಂತ ಕರೀತೀರಾ ಅಂತ ಕೇಳಿದ್ದಾರೆ. ಆಗ ತರುಣ್​ ಚಿನ್ನ ಬಂಗಾರ ಅಂತ ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಸೋನಲ್​ ನಾಚಿ ನೀರಾಗಿದ್ದಾರೆ. ಬಳಿಕ ತುರುಣ್​ ಅವರನ್ನು ಪಡೆಯೋಕೆ ನಾನು ತುಂಬಾ ಪುಣ್ಯ ಮಾಡಿದ್ದೆ ಅಂತ ಹೇಳಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಒಳ್ಳೆ ಮನಸು ಇರೋರಿಗೆ ಒಳ್ಳೆಯದೇ ಆಗೋದು, ನೂರು ಕಾಲ ಚೆನ್ನಾಗಿರಿ ಒಳ್ಳೆ ಮನಸಿಂದ ಹಾರೈಸುವೆ, ಸೂಪರ್ ಜೋಡಿ ನೂರು ಕಾಲ ಚನ್ನಾಗಿರಿ ದೇವರು ಒಳ್ಳೇದು ಮಾಡಲಿ ಅಂತ ಶುಭ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us