ಜಾಲಿ ಮೂಡ್​ನಲ್ಲಿ ಸ್ಯಾಂಡಲ್​ವುಡ್​ ಸ್ಟಾರ್ ಜೋಡಿ; ತರುಣ್ ಸುಧೀರ್, ಸೋನಲ್ ಸುಮಧುರ ಫೋಟೋಸ್ ಇಲ್ಲಿವೆ

author-image
Veena Gangani
Updated On
ಜಾಲಿ ಮೂಡ್​ನಲ್ಲಿ ಸ್ಯಾಂಡಲ್​ವುಡ್​ ಸ್ಟಾರ್ ಜೋಡಿ; ತರುಣ್ ಸುಧೀರ್, ಸೋನಲ್ ಸುಮಧುರ ಫೋಟೋಸ್ ಇಲ್ಲಿವೆ
Advertisment
  • ಹನಿಮೂನ್‌ನಲ್ಲಿ ಮೂಡ್​ಗೆ ಜಾರಿದ ತರುಣ್ ಸುಧೀರ್ ಹಾಗೂ ಸೋನಲ್‌
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಸ್ಟಾರ್​ ಜೋಡಿ ಫೋಟೋಸ್
  • ಹೊಸ ಫೋಟೋಗಳನ್ನು ಕ್ಲಿಕ್ಕಿಸಿಕೊಂಡ ದಂಪತಿಗೆ ಫ್ಯಾನ್ಸ್​ಗಳಿಂದ ಬಹುಪರಾಕ್

ಸ್ಯಾಂಡಲ್‌ವುಡ್‌ ಸ್ಟಾರ್​ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್‌ ಮೊಂಥೆರೋ ಮಾಲ್ಡೀವ್ಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಅದ್ಧೂರಿ ಮದುವೆಯಾದ ಮೇಲೆ ಹನಿಮೂನ್‌ಗಾಗಿ ಮಾಲ್ಡೀವ್ಸ್​ಗೆ ಹೋಗಿದ್ದಾರೆ ಮುದ್ದಾದ ಜೋಡಿ. ಹನಿಮೂನ್‌ನಲ್ಲಿ ಮೂಡ್​ನಲ್ಲಿ ಜಾಲಿಯಾಗಿ ಓಡುಡುತ್ತಿರುವ ಈ ಜೋಡಿ ಸೋಷಿಯಲ್​ ಮೀಡಿಯಾದಲ್ಲಿ ಕಲರ್​ಫುಲ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಮದುವೆ ದಿನವೇ ಸೋನಲ್ ಹಾಕಿದ್ರು ಒಂದು ಕಂಡೀಷನ್‌.. ತರುಣ್ ಸುಧೀರ್‌ಗೆ ನರ್ವಸ್‌; ವಿಡಿಯೋ ನೋಡಿ!

publive-image

ನಟ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಕಳೆದ ಆಗಸ್ಟ್​ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಮದುವೆ ಸಮಾರಂಭ ನಡೆದಿತ್ತು. ಗುರು ಹಿರಿಯರ ಸಮ್ಮುಖದಲ್ಲಿ ಈ ಸ್ಟಾರ್​ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಈ ಸ್ಟಾರ್ ಜೋಡಿಯ ಮದುವೆ ಸಮಾರಂಭಕ್ಕೆ ಇಡೀ ಸ್ಯಾಂಡಲ್‌ವುಡ್ ತಾರೆಯರು ಬಂದು ಶುಭ ಹಾರೈಸಿದ್ದರು.

publive-image

ಇನ್ನು, ತರುಣ್ ಸುಧೀರ್ ಹಾಗೂ ಸೋನಲ್​ ಹನಿಮೂನ್​ಗೆ ಎಲ್ಲಿಗೆ ಹೋಗ್ತಾರೆ ಎಂಬ ಪ್ರಶ್ನೆ ಸಾಕಷ್ಟು ಅಭಿಮಾನಿಗಳಿಗೆ ಕಾಡಿತ್ತು. ಇದೀಗ ಈ ಸ್ಟಾರ್​ ಜೋಡಿ ದುಬೈ ನಂತರ ಮಾಲ್ಡೀವ್ಸ್ ಹೋಗಿದೆ. ಮಾಲ್ಡೀವ್ಸ್​ನಲ್ಲಿ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆಗೆ ನಟಿ ಸೋನಲ್ ಮೊಂಥೆರೋ ಅವರು ತಮ್ಮ ಹನಿಮೂನ್‌ನ ಅಪ್ಡೇಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೀತಿಯ ಪತ್ನಿಗೆ ಅಪ್ಪಿಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ ತರುಣ್.

ಇದನ್ನೂ ಓದಿ: ವೇದಿಕೆ ಮೇಲೆ ನಟಿಯನ್ನ ಎತ್ತಿ ಮುದ್ದಾಡಿದ ತರುಣ್​; ಚಿನ್ನ, ಬಂಗಾರಿ ಎಂದಿದ್ದಕ್ಕೆ ನಾಚಿ ನೀರಾದ ಸೋನಲ್ 

publive-image

ನಟ ತರುಣ್ ಸುಧೀರ್ ಹಾಗೂ ಸೋನಲ್ ದಂಪತಿ ಬಿಳಿ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ತರುಣ್ ಹಾಗೂ ಸೋನಲ್ ಅವರು ಮಾಲ್ಡೀವ್ಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೇ ಫೋಟೋಸ್ ನೋಡಿದ ಫ್ಯಾನ್ಸ್​ ಮುದ್ದಾದ ಜೋಡಿ, ಸೂಪರ್ ಫೋಟೋಸ್​ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ.

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment