ಅರ್ಧ ಕೋಟಿ ಐಷಾರಾಮಿ ಕಾರು ಖರೀದಿಸಿದ ಕಾಟೇರ ನಿರ್ದೇಶಕ ತರುಣ್ ಸುಧೀರ್​; ವಿಡಿಯೋ ನೋಡಿ!

author-image
Veena Gangani
Updated On
ಅರ್ಧ ಕೋಟಿ ಐಷಾರಾಮಿ ಕಾರು ಖರೀದಿಸಿದ ಕಾಟೇರ ನಿರ್ದೇಶಕ ತರುಣ್ ಸುಧೀರ್​; ವಿಡಿಯೋ ನೋಡಿ!
Advertisment
  • ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕರಲ್ಲಿ ತರುಣ್ ಸುಧೀರ್ ಒಬ್ಬರು
  • ತಾಯಿ ಮಾಲತಿ ಸುಧೀರ್ ಜೊತೆ ದುಬಾರಿ ಕಾರು ಖರೀದಿ ಮಾಡಿದ ನಟ
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ತರುಣ್ ಸುಧೀರ್ ವಿಡಿಯೋ

ನಟ ದರ್ಶನ ಅವರ ಬಹುನಿರೀಕ್ಷಿತ ಸಿನಿಮಾ ಕಾಟೇರಾ. ಈ ಕಾಟೇರಾ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟ ಕಮ್​ ನಿರ್ದೇಶಕ ತರುಣ್ ಸುಧೀರ್ ಅವರು ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಹೌದು, ನಟ, ನಿರ್ದೇಶಕ ತರುಣ್ ಕಿಶೋರ್ ಅವರು ಸ್ಯಾಂಡಲ್‌ವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿದ್ದು, ಪ್ರಸ್ತುತವಾಗಿ ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

publive-image

ಇದನ್ನೂ ಓದಿ:ಶ್ರಾವಣಿ ಸುಬ್ರಮಣ್ಯ ಸೀರಿಯಲ್​ಗೆ ಹೊಸ ವಿಲನ್ ಖಡಕ್​​ ಎಂಟ್ರಿ; ಯಾರು ಈ ಅಥರ್ವ್!

ಇದೀಗ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್​ ಮಾಡಿಕೊಂಡ ವಿಡಿಯೋದಲ್ಲಿ ತರುಣ್ ಸುಧೀರ್ ಅವರು ಬಿಎಂಡಬ್ಲ್ಯು ಎಕ್ಸ್ 1 ಕಾರನ್ನು ಖರೀದಿ ಮಾಡಿದ್ದಾರೆ. ಈ BMW ಕಾರಿನ ಬೆಲೆ ಬರೋಬ್ಬರಿ 50 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ. ತರುಣ್ ಅವರ ಜತೆಗೆ ತಾಯಿ ಮಾಲತಿ ಸುಧೀರ್ ತಮ್ಮ ಹೊಸ ಐಷಾರಾಮಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಕಾಟೇರಾ ಸಿನಿಮಾ ಬಾಕ್ಸ್ ಆಫೀಸ್​ ಉಡೀಸ್​ ಮಾಡಿ ದಾಖಲೆ ನಿರ್ಮಿಸಿತ್ತು.

ಇದೀಗ ಅದೇ ಖುಷಿಯಲ್ಲಿದ್ದ ತರುಣ್ ಸುಧೀರ್ ಅವರು ಬಿಎಂಡಬ್ಲ್ಯೂ ಎಕ್ಸ್ 1 ಕಾರು ಖರೀದಿ ಮಾಡಿದ್ದಾರೆ. ಜೊತೆಗೆ ಅವರು ತರುಣ್ ಸುಧೀ‌ರ್ ಅವರು​ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಫಸ್ಟ್ ಡ್ರೈವ್ ಹೋಗಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಇನ್​ಸ್ಟಾಗ್ರಾಮ್​​ನಲ್ಲಿ ಕಾಮೆಂಟ್​ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment