VIDEO: ದರ್ಶನ್​ ಬಗ್ಗೆ ಕೇಳುತ್ತಿದ್ದಂತೆ ಕೈ ಎತ್ತಿ ಮುಗಿದ ಮಾಲತಿ ಸುಧೀರ್; ಈ ಬಗ್ಗೆ ಏನಂದ್ರು?

author-image
Veena Gangani
Updated On
VIDEO: ದರ್ಶನ್​ ಬಗ್ಗೆ ಕೇಳುತ್ತಿದ್ದಂತೆ ಕೈ ಎತ್ತಿ ಮುಗಿದ ಮಾಲತಿ ಸುಧೀರ್; ಈ ಬಗ್ಗೆ ಏನಂದ್ರು?
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಒಟ್ಟು 17 ಆರೋಪಿಗಳು ಜೈಲಿಗೆ
  • ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ರೇಣುಕಾಸ್ವಾಮಿ ಕೊಲೆ
  • ಮನೆ ಮಗನಂತಿದ್ದ ದರ್ಶನ್​ ಬಗ್ಗೆ ತರುಣ್​ ಸುದೀರ್​ ತಾಯಿ ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನ ಕಳೆದಂತೆ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಒಟ್ಟು 17 ಆರೋಪಿಗಳು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. 13 ಮಂದಿ ಪರಪ್ಪನ ಆಗ್ರಹಾರದಲ್ಲಿ ಇದ್ದರೆ, ಉಳಿದ 4 ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ:VIDEO: ದರ್ಶನ್​ ಭೇಟಿಗಾಗಿ 2 ಗಂಟೆ ಕಾದು ಕುಂತ ಧನ್ವೀರ್​.. ಭೇಟಿ ಮಾಡೋಕೆ ನಿರಾಕರಿಸಿದ್ರಾ ದಾಸ? ಏನಾಯ್ತು ಅಲ್ಲಿ?

ಇನ್ನು, ಕಾಟೇರ ನಿರ್ದೇಶಕ ತರುಣ್​ ಅವರ ತಾಯಿ ಮಾಲತಿ ಸುಧೀರ್ ನಟ ದರ್ಶನ್​ ಜೈಲಿಗೆ ಹೋಗಿದ್ದ ಬಗ್ಗೆ ನ್ಯೂಸ್​ ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮನೆ ಮಗನಂತಿದ್ದ ನಟ ದರ್ಶನ್​ ಬಗ್ಗೆ ಮಾಲತಿ ಸುಧೀರ್ ಅವರು, ಕ್ಷಮಿಸಿ ನನಗೆ ಏನು ಕೇಳಬೇಡಿ. ನನಗೆ ತುಂಬಾ ಅಳು ಬಂದು ಬಿಡುತ್ತೆ. ಮೊದಲೇ ಅಳ್ತಾ ಇದ್ದೀವಿ ನಾವು. ಮತ್ತೆ ನಮಗೆ ಏನು ಕೇಳಬೇಡಿ ಅಂತ ಪ್ರತಿಕ್ರಿಯೆ ನೀಡಿದ್ದಾರೆ.

ಏನಿದು ಪ್ರಕರಣ?

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್​ ಮಾಡಿದ್ದ. ಇದೇ ಕಾರಣಕ್ಕೆ ಕೋಪಗೊಂಡ ದರ್ಶನ್​ ಅಂಡ್​ ಗ್ಯಾಂಗ್​ ಪ್ಲಾನ್​​ ಮಾಡಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ ಬಹಳ ಕ್ರೂರವಾಗಿ ಕೊಲೆ ಮಾಡಿದ್ದರು, ಇದಾದ ಬಳಿಕ ಪೊಲೀಸ್​ ಅಧಿಕಾರಿಗಳು ಈ ಕೊಲೆ ಹಿಂದಿನ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment