newsfirstkannada.com

ಸಾತ್ವಿಕ್‌ ಸಾಮಾನ್ಯನಲ್ಲ.. ಕೊಳವೆ ಬಾವಿಗೆ ಬಿದ್ದಿದ್ದ ಕಂದನ ರಿಪೋರ್ಟ್‌ಗೆ ಶಾಕ್ ಆದ ವೈದ್ಯರು; ಹೇಳಿದ್ದೇನು?

Share :

Published April 5, 2024 at 8:26pm

    ಮಗುವಿನ ಆರೋಗ್ಯ ದೃಷ್ಠಿಯಿಂದ ನೋಡಲು ಬರುವ ಜನರಿಗೆ ಸಿಬ್ಬಂದಿ ತಡೆ

    ಸಾವು ಗೆದ್ದು ಬಂದ 2 ವರ್ಷದ ಮಗುವಿನ ಆರೋಗ್ಯದಲ್ಲಿ ಅಚ್ಚರಿಯ ಚೇತರಿಕೆ

    ಮಕ್ಕಳ ಐಸಿಯು ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾತ್ವಿಕ್ ಮೇಲೆ ವೈದ್ಯರ ನಿಗಾ

ವಿಜಯಪುರ: ಕೊಳವೆ ಬಾವಿಯಲ್ಲಿ 20 ಗಂಟೆಗಳ ಕಾಲ ಜೀವನ್ಮರಣದ ಮಧ್ಯೆ ಹೋರಾಡಿ ಸಾವು ಗೆದ್ದು ಬಂದಿದ್ದ ಸಾತ್ವಿಕ್​ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾನೆ. ಬಾಲಕ ಆರಾಮಾಗಿರೋದು ಕಂಡು ಸ್ವತಃ ವೈದ್ಯರೇ ಆಶ್ಚರ್ಯಗೊಂಡಿದ್ದಾರೆ. ಬಹುತೇಕ ನಾಳೆ ಸಾತ್ವಿಕ್ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾನೆ.

ವಿಜಯಪುರ ಜಿಲ್ಲಾಸ್ಪತ್ರೆ ಐಸಿಯು ಬೆಡ್​ ಮೇಲೆ ಎಳೆನೀರು, ನೀರಿನ ಬಾಟಲಿಯೊಂದಿಗೆ ಆಟ ಆಡ್ತಿರೋ ಈ ಮುದ್ದು ಕಂದಮ್ಮನೇ ಸಾವು ಗೆದ್ದ ಸಾತ್ವಿಕ್​. ಬರೋಬ್ಬರಿ 20 ಗಂಟೆಗಳ ಕಾಲ ಅನ್ನ, ನೀರಿಲ್ಲದೇ ಕೊಳವೆಬಾವಿಯಲ್ಲಿ ಸಿಲುಕಿ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದು ಮತ್ತೆ ಹುಟ್ಟಿ ಬಂದಿದ್ದಾನೆ. ಇದಕ್ಕೆ ವೈದ್ಯಕೀಯ ಲೋಕದಲ್ಲಿ ಉತ್ತರವಿಲ್ಲ. ಆದ್ರೆ, ಇದು ಲಚ್ಯಾಣ ಗ್ರಾಮದ ಪವಾಡ ಪುರುಷ ಸಿದ್ಧಿ ಪುರುಷ ಸಿದ್ದಲಿಂಗ ಮಹಾರಾಜರ ಪವಾಡ ಎಂದು ಜನರು ಮಾತನಾಡ್ತಿದ್ದಾರೆ.

ಇದನ್ನೂ ಓದಿ: ಸಾವು ಗೆದ್ದ ಸಾತ್ವಿಕ್‌ ಮತ್ತೊಂದು ಪವಾಡ.. ಮೆದುಳು ಸ್ಕ್ಯಾನಿಂಗ್‌ ರಿಪೋರ್ಟ್‌ನಲ್ಲಿ ಬಂದಿದ್ದೇನು?

21 ಗಂಟೆಗಳ ಕಾಲ ಕೊಳವೆ ಬಾವಿಯೊಳಗೆ ಸಿಲುಕಿದ್ದ ಸಾತ್ವಿಕ್​ನನ್ನ ಹೊರ ತೆಗೆಯುತ್ತಿದ್ದಂತೆ ಇಂಡಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ತಲೆಕೆಳಗಾಗಿ ಬಿದ್ದಿದ್ದ ಹಿನ್ನೆಲೆ ಸ್ಕ್ಯಾನ್, ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳ ಐಸಿಯು ಕೇಂದ್ರದಲ್ಲಿ ಸಾತ್ವಿಕ್ ಆರೋಗ್ಯದ ಮೇಲೆ ನಿಗಾ ಇಡಲಾಗಿತ್ತು. ತಲೆಕೆಳಗಾಗಿ 20 ಗಂಟೆ ಇದ್ದಿದ್ರಿಂದ ಮೆದುಳಿಗೆ ಏನಾದರೂ ಆಗಿರಬಹುದು ಅಂತ ವೈದ್ಯರು ಅಂದಾಜಿಸಿ ತಲೆ ಸಿಟಿ ಸ್ಕ್ಯಾನ್ ಮಾಡಿದ್ರು. ಆದ್ರೆ ರಿಪೋರ್ಟ್ ನಾರ್ಮಲ್ ನೋಡಿ ವೈದ್ಯರಿಗೂ ಆಶ್ಚರ್ಯ ಆಗಿದೆ.

ಇನ್ನು, ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್, ಹಾಗೂ ಜಿಪಂ ಸಿಇಒ ರಿಷಿ ಆನಂದ ಸೇರಿದಂತೆ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಾತ್ವಿಕ್​ ಆರೋಗ್ಯ ಪರಿಸ್ಥಿತಿ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದ್ರು. ಸಾತ್ವಿಕ್ ನೋಡಲು ಜಿಲ್ಲಾಸ್ಪತ್ರೆಗೆ ಜನ ಬರ್ತಿರೋದಕ್ಕೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬ್ರೇಕ್ ಹಾಕಲಾಗಿದೆ. ಬೆನ್ನಿನ ಸ್ಕ್ಯಾನ್ ಮಾಡಿಸಿ, ನಾಳೆ ಬೆಳಿಗ್ಗೆ ಮತ್ತೊಂದು ಸುತ್ತಿನ ಆರೋಗ್ಯ ಪರೀಕ್ಷಿಸಿ, ಜಿಲ್ಲಾಸ್ಪತ್ರೆಯ ವೈದ್ಯಕೀಯ ತಂಡದೊಂದಿಗೆ ಚರ್ಚಿಸಿ ಮಧ್ಯಾಹ್ನ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಜಿಲ್ಲಾ ಸರ್ಜನ್ ಹೇಳಿದ್ದಾರೆ. ಒಟ್ಟಿನಲ್ಲಿ ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದಿದ ಸಾತ್ವಿಕ್, ಆರೋಗ್ಯವಾಗಿದ್ದಾನೆ. ಆದ್ರೆ, ಈ ರೀತಿ ಘಟನೆ ಮತ್ತೆ ಮರುಕಳಿಸಬಾರದು ಅಂದ್ರೆ, ತೆರೆದ ಕೊಳವೆ ಬಾವಿ ಮುಚ್ಚುವ ಅಭಿಯಾನ ನಡೆಯಬೇಕಿದೆ. ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳಲೇಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾತ್ವಿಕ್‌ ಸಾಮಾನ್ಯನಲ್ಲ.. ಕೊಳವೆ ಬಾವಿಗೆ ಬಿದ್ದಿದ್ದ ಕಂದನ ರಿಪೋರ್ಟ್‌ಗೆ ಶಾಕ್ ಆದ ವೈದ್ಯರು; ಹೇಳಿದ್ದೇನು?

https://newsfirstlive.com/wp-content/uploads/2024/04/satwik.jpg

Load More