newsfirstkannada.com

ಹೆರಿಗೆಗೂ ಮೊದಲೇ ಗರ್ಭಿಣಿ, ಮಗು ಸಾವು.. ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

Share :

Published May 1, 2024 at 11:53am

    ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಂದ ಆಸ್ಪತ್ರೆ ಮುಂದೆ ಪ್ರತಿಭಟನೆ

    ಮೊದಲ ಹೆರಿಗೆಗೆ ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು

    ಕುಟುಂಬಸ್ಥರಿಂದ ಆಸ್ಪತ್ರೆ ಮುಂದೆ ಪ್ರತಿಭಟನೆ, ವೈದ್ಯರ ವಿರುದ್ಧ ಗರಂ

ಕೊಪ್ಪಳ: ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ಸಮಯದಲ್ಲಿ ಗರ್ಭಿಣಿ ಹಾಗೂ ಶಿಶು ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಈ ಘಟನೆಯು ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ನಡೆದಿದೆ.

ಇದನ್ನೂ ಓದಿ: ಹಾಸನ ವಿಡಿಯೋ ಕೇಸ್​ ಹೊತ್ತಲ್ಲೇ ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ.. ಕಾಂಗ್ರೆಸ್​ಗೆ ಚೆಕ್​ಮೇಟ್ ಕೊಡಲು ಭರ್ಜರಿ ಪ್ಲಾನ್

ಕುಷ್ಟಗಿ ತಾಲೂಕಿನ ವಿಠಲಾಪುರ ಗ್ರಾಮದ ನಿವಾಸಿ ಲಕ್ಷ್ಮಿ (20) ಹೆರಿಗೆ ಸಮಯದಲ್ಲಿ ಮೃತಪಟ್ಟ ಮಹಿಳೆ. ಮೊದಲ ಹೆರಿಗೆಗೆ ಎಂದು ಬೆಳಗ್ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆರಿಗೆಗೆ ಮೊದಲೇ ತಾಯಿ ಮೃತಪಟ್ಟಿದ್ದು ಅಲ್ಲದೇ ಹೊಟ್ಟೆಯೊಳಗಿನ ಶಿಶು ಕೂಡ ಸಾವನ್ನಪ್ಪಿದೆ. ಈ ಸಂಬಂಧ ವೈದ್ಯರ ನಿರ್ಲಕ್ಷ್ಯದಿಂದ ತಾಯಿ, ಮಗು ಸಾವನ್ನಪ್ಪಿದೆ ಎಂದು ಕುಟುಂಬದವರು, ಗ್ರಾಮಸ್ಥರು ಆರೋಪ ಮಾಡಿದ್ದಾರೆ. ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರಾತ್ರಿಯೆಲ್ಲ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ಮಾಡುವ ಮೂಲಕ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆರಿಗೆಗೂ ಮೊದಲೇ ಗರ್ಭಿಣಿ, ಮಗು ಸಾವು.. ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

https://newsfirstlive.com/wp-content/uploads/2024/05/KPL_WOMAN.jpg

Load More