ಅಬ್ಬಾ..! ವಿಶ್ವದ ಅತಿ ವೇಗದ ಮೀನು ಇದು! ಗಂಟೆಗೆ 110km ಕ್ರಮಿಸುತ್ತಂತೆ

author-image
AS Harshith
Updated On
ಅಬ್ಬಾ..! ವಿಶ್ವದ ಅತಿ ವೇಗದ ಮೀನು ಇದು! ಗಂಟೆಗೆ 110km ಕ್ರಮಿಸುತ್ತಂತೆ
Advertisment
  • ಪ್ರಪಂಚದ ಅತಿ ವೇಗದ ಮೀನಿನ ಬಗ್ಗೆ ನಿಮಗೆಷ್ಟು ಗೊತ್ತು?
  • ಗಂಟೆಗೆ ಈ ಮೀನು ಗರಿಷ್ಟ 132 ಕಿಲೋ ಮೀಟರ್​ ಕ್ರಮಿಸುತ್ತಂತೆ
  • ಭಾರತ ಮತ್ತು ಪೆಸಿಫಿಕ್​ ಸಾಗರದಲ್ಲಿ ಕಂಡುಬರುತ್ತದೆ ಈ ವಿಶೇಷ ಮೀನು

ಮೀನುಗಳು ವೇಗದ ಬಗ್ಗೆ ಹೇಳೋದೇ ಬೇಡ. ನೀರಿನಲ್ಲಿ ಮೀನಿನ ವೇಗವನ್ನು ಪರೀಕ್ಷಿಸಲು ಕೊಂಚ ಕಷ್ಟವೇ ಸಾಧ್ಯ. ಆದರೀಗ ಪ್ರಪಂಚದ ಅತಿ ವೇಗದ ಮೀನಿನ ಕುರಿತಾಗಿ ಮಾಹಿತಿಯೊಂದು ಹೊರಬಿದ್ದಿದೆ. ಅಚ್ಚರಿ ಸಂಗತಿ ಎಂದರೆ ಇದು ಗಂಟೆಗೆ 110 ಕಿ.ಮೀ ಕ್ರಮಿಸುತ್ತಂತೆ.

ಅತಿ ದೊಡ್ಡ ಗಾತ್ರ ಮೀನಿನ ಬಗ್ಗೆ ಬಹುತೇಕರಿಗೆ ಗೊತ್ತು. ಆದರೆ ಅತಿ ವೇಗವಾಗಿ ಚಲಿಸಬಲ್ಲ ಮೀನಿನ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಇಂಡೋ-ಸೈಲ್ಫಿಶ್​ ಎಂಬ ಮೀನು ಅತಿ ವೇಗದ ಮೀನು ಎಂಬ ಸಂಗತಿ ಸಂಶೋಧನೆ ಮೂಲಕ ಬಹಿರಂಗಗೊಂಡಿದೆ.

ಅಂದಹಾಗೆಯೇ ಇಂಡೋ-ಸೈಲ್ಫಿಶ್ ಮೀನು ಭಾರತ ಮತ್ತು ಪೆಸಿಫಿಕ್​ ಸಾಗರದಲ್ಲಿ ಕಂಡುಬರುತ್ತದೆ. ಮಾತ್ರವಲ್ಲದೆ, ಸೂಯೆಜ್​ ಕಾಲುವೆಯ ಮೂಲಕ ಮೆಡಿಟರೇನಿಯನ್​ ಸಮುದ್ರವನ್ನು ಪ್ರವೇಶಿಸುವ ಅಟ್ಲಾಂಟಿಕ್​ ಸಾಗರದಲ್ಲಿ ಕಾಣಸಿಗುತ್ತವೆ.

publive-image

ಇದನ್ನೂ ಓದಿ:ನಿನ್ನೆ ನಡೆದ RCB ಪಂದ್ಯದ ವಿಡಿಯೋ ಹಂಚಿಕೊಂಡ ಪಶ್ಚಿಮ ಬಂಗಾಳದ ಪೊಲೀಸರು! ಇವ್ರಿಗೂ RCB ಅಂದ್ರೆ ಇಷ್ಟನಾ?

ಗರಿಷ್ಠವೆಂದರೆ ಈ ಮೀನು ಗಂಟೆಗೆ 132 ಕಿ.ಮೀ ಕ್ರಮಿಸುತ್ತದೆ. ಇಂಡೋ-ಸೈಲ್ಫಿಶ್ 3.4 ಮೀಟರ್​​ ಉದ್ದ ಮತ್ತು 100 ಕೆ.ಜಿ ತೂಕದವರೆಗೆ ಬೆಳೆಯುತ್ತದೆ. ಮೀನ ಮೈಬಣ್ಣ ಮೇಲ್ಭಾಗದಲ್ಲಿ ನೀಲಿ ಮತ್ತು ಕೆಳಭಾಗದಲ್ಲಿ ಕಂದು ಬೆಳ್ಳಿಯ ಬಣ್ಣದಲ್ಲಿ ಕಾಣಸಿಗುತ್ತದೆ. ಬೇಟೆಯಾಡಲು ಕತ್ತಿಯಂತಹ ಚೂಪಾದ ಮುಖವನ್ನು ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment