newsfirstkannada.com

×

ದರ್ಶನ್​ ಸೇಫ್​ ಮಾಡುವಂತೆ ಕಣ್ಣೀರಿಟ್ಟ ಸಚಿವ.. ಗೃಹ ಸಚಿವರ ಕಾಲಿಗೆ ಬಿದ್ದು ಹೈಡ್ರಾಮಾ?

Share :

Published June 19, 2024 at 9:54am

Update June 19, 2024 at 9:59am

    ಗೃಹ ಸಚಿವರ ಮನೆಗೆ ಕಣ್ಣೀರಿಡುತ್ತಾ ಬಂದ ಸಚಿವ

    ಕಾನೂನು ಸಚಿವ ಹೆಚ್.ಕೆ ಪಾಟೀಲ್​ಗೆ ಕರೆ ಮಾಡಿದ ಗೃಹ ಸಚಿವ

    ದರ್ಶನ್​ ಬಗ್ಗೆ ಚರ್ಚೆ.. ಸಚಿವನಿಗೆ ಗೃಹ ಸಚಿವರು ಹೇಳಿದ ಕಿವಿ ಮಾತೇನು ಗೊತ್ತಾ?

ಕೊಲೆ ಕೇಸ್​ನಲ್ಲಿ ಸ್ಯಾಂಡಲ್​​ವುಡ್​ ನಟ ದರ್ಶನ್​ ಗ್ಯಾಂಗ್ ಅರೆಸ್ಟ್​ ಆಗಿದ್ದಾರೆ. ಲಾಕಪ್​ನಲ್ಲಿರುವ ದರ್ಶನ್​ ಪೊಲೀಸರಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಅತ್ತ ಪೊಲೀಸರು ಸಹ ಪಾರದರ್ಶಕತೆಯ ತನಿಖೆ ನಡೆಸುತ್ತಿದ್ದಾರೆ. ಆದರೆ ನಟನನ್ನು ರಕ್ಷಿಸಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆ ಪೈಕಿ ಸಚಿವರೊಬ್ಬರ ಒದ್ಡಾಟ, ಕಣ್ಣೀರು ಹಾಕಿದ ಪ್ರಸಂಗ ಕೇಳಿಬಂದಿದೆ.

ದರ್ಶನ್ ಕೊಲೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಪ್ರಭಾವಿ ಸಚಿವರೊಬ್ಬರು ಕಣ್ಣೀರಿಟ್ಟಿದ್ದಾರಂತೆ. ದರ್ಶನ್​ ಬಂಧನ ಬಳಿಕ ಗೃಹ ಸಚಿವ ಜಿ ಪರಮೇಶ್ವರ್​ ಮನೆಗೆ ಎಂಟ್ರಿಕೊಟ್ಟಿದ್ದ ಸಚಿವರೊಬ್ಬರು ಅಳಲು ತೋಡಿಕೊಂಡಿದ್ದಾರಂತೆ. ಈ ವೇಳೆ ಜಿ ಪರಮೇಶ್ವರ್​ ಕಾನೂನು ಸಚಿವ ಹೆಚ್.ಕೆ ಪಾಟೀಲ್​ಗೆ ಕರೆ ಮಾಡಿ ಬರಹೇಳಿದ್ದಾರೆ.

ಇದನ್ನೂ ಓದಿ: ಕಲೆಗಳು.. ರಕ್ತದ ಕಲೆಗಳು.. ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ಟ ರೇಣುಕಾಸ್ವಾಮಿ ಹತ್ಯೆಯ ಬಗೆಗಿನ ಸ್ಫೋಟಕ ಮಾಹಿತಿ

ಡಾ.ಜಿ.ಪರಮೇಶ್ವರ್​ ನಿವಾಸಕ್ಕೆ ಆಗಮಿಸಿದ್ದರು ಹೆಚ್.ಕೆ ಪಾಟೀಲ್ ಸಚಿವರ ಜೊತೆಗೆ ಸಮಗ್ರವಾಗಿ ಚರ್ಚಿಸಿದ್ದಾರೆ. ಈ ವೇಳೆ ದರ್ಶನ್​ಗೆ ಉಂಟಾಗಬಹುದಾದ ಸಂಕಷ್ಟದ ಬಗ್ಗೆಯೂ ಚರ್ಚೆ ನಡೆದಿದೆ. ಜೊತೆಗೆ ದರ್ಶನ್ ಬಿಡುಗಡೆಗೆ ಯತ್ನಿಸಿದ್ರೆ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಬಗ್ಗೆ ಮಾತುಕತೆಯಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೈಯೇ ದಿಂಬು, ಲಾಕಪ್​ನಲ್ಲಿ ವಿಚಾರಣೆ.. ದರ್ಶನ್​ಗೆ ಸಿಗೋ ಟ್ರೀಟ್​ಮೆಂಟ್​ ಮಾತ್ರ..

ಬಳಿಕ ತನಿಖೆ ವೇಳೆ ಮಧ್ಯಪ್ರವೇಶಿಸುವುದು ಕಷ್ಟವೆಂದು ಕಾನೂನು ಸಚಿವ H.K ಪಾಟೀಲ್ ಕೂಡ  ಹೇಳಿದ್ದಾರೆ. ಒಂದು ವೇಳೆ ಪ್ರಭಾವ ಬೀರಲು ಮುಂದಾದ್ರೆ ನೀವೂ ಸಿಲುಕಿಕೊಳ್ಳಬೇಕಾಗುತ್ತೆ ಎಂದು ಕಿವಿಮಾತು ಹೇಳಿದ್ದಾರೆ. ಈ ವೇಳೆ ಅಳುತ್ತಲೇ ಪರಮೇಶ್ವರ್ ಕಾಲಿಗೆ ಬೀಳಲು ಸಚಿವ ಮುಂದಾದ್ರು ಎನ್ನಲಾಗುತ್ತಿದೆ.

ಬಳಿಕ ಸಚಿವರಿಗೆ ಬುದ್ದಿ ಹೇಳಿ ಪರಮೇಶ್ವರ್ & ಹೆಚ್.ಕೆ ಪಾಟೀಲ್ ಕಳುಹಿಸಿಕೊಟ್ಟಿದ್ದಾರೆ. ಅಳಲು ತೋಡಿಕೊಂಡು ಪ್ರಯೋಜನವಿಲ್ಲವೆಂಬತೆ ಸಚಿವರು ಬಂದ ದಾರಿ ಹಿಡಿದರು ಎಂಬ ಸಂಗತಿಯೊಂದು ಹೊರಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಸೇಫ್​ ಮಾಡುವಂತೆ ಕಣ್ಣೀರಿಟ್ಟ ಸಚಿವ.. ಗೃಹ ಸಚಿವರ ಕಾಲಿಗೆ ಬಿದ್ದು ಹೈಡ್ರಾಮಾ?

https://newsfirstlive.com/wp-content/uploads/2024/06/Darshan-19-1.jpg

Load More