Advertisment

ಕೊನೆಗೂ ದರ್ಶನ್ ಕೈಯಲ್ಲಿದ್ದ ಕಡಗ ತೆಗೆಸಿದ ಪೊಲೀಸರು.. ಬಳ್ಳಾರಿ ಜೈಲಲ್ಲೂ ಅದೇ ಗತ್ತು, ದೌಲತ್ತು!

author-image
admin
Updated On
ಸ್ವಂತ ಹಣದಿಂದ ದರ್ಶನ್ ಕೇಸ್ ತನಿಖೆ; ಇಲ್ಲಿಯವರೆಗೆ ಪೊಲೀಸರು ಎಷ್ಟು ಖರ್ಚು ಮಾಡಿದ್ದಾರೆ..?
Advertisment
  • ಪೂಮಾ ಟೀ ಶರ್ಟ್‌, ಜೀನ್ಸ್ ಪ್ಯಾಂಟ್‌ ಕೂಲಿಂಗ್ ಗ್ಲಾಸ್‌ ಲುಕ್‌!
  • ಪರಪ್ಪನ ಅಗ್ರಹಾರದಲ್ಲಿ ಸಿಕ್ಕ ರಾಜಾತಿಥ್ಯದ ಗತ್ತಿನಲ್ಲೇ ಬಳ್ಳಾರಿ ಪ್ರವೇಶ
  • ಬೆಂಗಳೂರಿನಿಂದ ಕರೆ ತಂದ ಪೊಲೀಸರಿಗೆ ಹ್ಯಾಂಡ್​ಶೇಕ್ ಕೊಟ್ಟ ದಾಸ!

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸಿದ ತಪ್ಪಿಗೆ ಬಳ್ಳಾರಿ ಜೈಲು ಪಾಲಾಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ಕರೆದುಕೊಂಡು ಹೋದ ಪೊಲೀಸರು ಬಳ್ಳಾರಿ ಕಾರಾಗೃಹದ ಸುಪರ್ದಿಗೆ ನೀಡಿದ್ದಾರೆ.

Advertisment

ಇದನ್ನೂ ಓದಿ: ದರ್ಶನ್‌ ಅಭಿಮಾನಿಗಳಿಗೆ 4 ಸಂದೇಶ; ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟ ಟೀ ಶರ್ಟ್‌ನಲ್ಲಿ ಮಹತ್ವದ ಸುಳಿವು! 

ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟಾಗ ದರ್ಶನ್ ಪೂಮಾ ಟೀ ಶರ್ಟ್‌, ಜೀನ್ಸ್ ಪ್ಯಾಂಟ್‌ ಕೂಲಿಂಗ್ ಗ್ಲಾಸ್‌ ಹಾಕೊಂಡು ಬಂದಿದ್ದರು. ಪರಪ್ಪನ ಅಗ್ರಹಾರದಲ್ಲಿ ಸಿಕ್ಕಿದ್ದ ರಾಜಾತಿಥ್ಯದ ಗತ್ತು ಹಾಗೇ ಇತ್ತು. ಆದರೆ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟಾಗ ದರ್ಶನ್ ಕೈಯಲ್ಲಿದ್ದ ಕಡಗವನ್ನೂ ಪೊಲೀಸರು ತೆಗೆಸಿದ್ದಾರೆ.

publive-image

ಅದೃಷ್ಟದ ಕಡಗ ತೆಗೆಸಿದ ಪೊಲೀಸರು!
ಕೊಲೆ ಆರೋಪಿ ದರ್ಶನ್ ಅವರ ಕೈಯಲ್ಲಿ ಬಹಳ ವರ್ಷಗಳಿಂದ ಒಂದು ಕಡಗ ಇತ್ತು. ದೇವರ ಮೇಲಿನ ನಂಬಿಕೆ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಷ್ಟು ಇದನ್ನು ತೆಗೆಸುವ ಕಾರ್ಯಕ್ಕೆ ಜೈಲಾಧಿಕಾರಿಗಳು ಮುಂದಾಗಿರಲಿಲ್ಲ.

Advertisment

ಇದನ್ನೂ ಓದಿ: ಕೂಲಿಂಗ್ ಗ್ಲಾಸ್​​, ಹ್ಯಾಂಡ್​ ಶೇಕ್ ಮಾಡಿ ಜೈಲಿಗೆ ಎಂಟ್ರಿ; ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟ ದರ್ಶನ್..! 

ಇದೀಗ ಬೆಂಗಳೂರಿಂದ ಬಳ್ಳಾರಿಗೆ ಜೈಲಿಗೆ ಶಿಫ್ಟ್ ಆಗುತ್ತಿದ್ದಂತೆ ಪೊಲೀಸುರ ದರ್ಶನ್‌ ಕೈನಲ್ಲಿದ್ದ ಕಡಗವನ್ನೂ ತೆಗೆಸಿದ್ದಾರೆ. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಬಳ್ಳಾರಿ ಜೈಲ್ ಸಿಬ್ಬಂದಿ ದರ್ಶನ್ ಜೈಲಿಗೆ ಎಂಟ್ರಿಯಾಗುತ್ತಿದ್ದಂತೆ ನಿಯಮ ಪಾಲಿಸಿದ್ದಾರೆ. ಬಳ್ಳಾರಿ ಕಾರಾಗೃಹಕ್ಕೆ ಎಂಟ್ರಿ ಕೊಡುತ್ತಿದ್ದಂತೆ ದರ್ಶನ್ ಅವರ ಕೈಯಲ್ಲಿದ್ದ ಕಡಗವನ್ನು ತೆಗೆದು ಸೆಲ್‌ಗೆ ಕಳುಹಿಸಲಾಗಿದೆ.

publive-image

ನಗುನಗುತ್ತಾ ಪೊಲೀಸರಿಗೆ ಹ್ಯಾಂಡ್‌ಶೇಕ್!
ಬಳ್ಳಾರಿ ಜೈಲಿಗೆ ಎಂಟ್ರಿಯಾಗುವ ದರ್ಶನ್ ಅವರು ಬೆಂಗಳೂರಿನಿಂದ ಕರೆ ತಂದ ಪೊಲೀಸರಿಗೆ ಹ್ಯಾಂಡ್​ಶೇಕ್ ಕೊಟ್ಟಿರೋದು ಹೊಸ ವಿವಾದಕ್ಕೆ ಕಾರಣವಾಗಿದೆ. ಪೊಲೀಸರ ಜೊತೆ ನಗುನಗುತ್ತಾ ಕೊಲೆ ಆರೋಪಿ ದರ್ಶನ್ ಅವರು ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಜೈಲಿನ ಬ್ಯಾರಕ್​ ಒಳಗೆ ಹೋಗಿದ್ದಾರೆ. ಬಳ್ಳಾರಿ ಜೈಲಿನ​ ಗೇಟ್ ಬಳಿ ಹ್ಯಾಂಡ್​​ಶೇಕ್ ಮಾಡಿದ ಪೊಲೀಸರಿಗೂ ಇದೀಗ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment