/newsfirstlive-kannada/media/post_attachments/wp-content/uploads/2024/05/RAIN-15.jpg)
ಮೇ 31 ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಲ್ಕು ದಿನ ಮುಂಚಿತವಾಗಿ ಇಲ್ಲವೇ ನಾಲ್ಕು ದಿನ ನಂತರ ಕೇರಳಕ್ಕೆ ಮಾನ್ಸೂನ್ ಪ್ರವೇಶ ಆಗಲಿದೆ ಎಂದು ತಿಳಿಸಿದೆ.
ಮಾನ್ಸೂನ್ ಮಳೆಯು ಈ ಬಾರಿ ವಾಡಿಕೆಗಿಂತ ಅಧಿಕವಾಗಿ ಆಗಲಿದೆ ಅಂತ ಸೂಚನೆ ಕೊಟ್ಟಿದೆ. ಈ ವಾರ ಪೂರ್ತಿ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದ್ದು, ಮೇ 20 ರವರೆಗೆ ನಗರದಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.
ಇದನ್ನೂ ಓದಿ:CSK ತಂಡದಿಂದ ಹೊರಬಿದ್ದ ಇಬ್ಬರು ಪವರ್ ಪ್ಲೇ ಸ್ಪೆಷಲಿಸ್ಟ್.. ಅದೇ ಆರ್ಸಿಬಿಗೆ ವರದಾನ ಆಗುತ್ತಾ?
ಇಂದಿನಿಂದ ಕೆಲವು ಜಿಲ್ಲೆಗಳಲ್ಲಿ ಮಳೆಯಾದರೆ, ಬೆಂಗಳೂರಲ್ಲೂ ಮಳೆ ಮತ್ತಷ್ಟು ಹೆಚ್ಚಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಪರಿಣಾಮ, ಬೆಂಗಳೂರಿನ ಬನಶಂಕರಿ, ಬಸವನಗುಡಿ, ಜಯನಗರ, ಕೋರಮಂಗಲ ಸೇರಿದಂತೆ ಹಲವೆಡೆ ರಾತ್ರಿ 10 ಗಂಟೆ ಮೇಲೆ ವಿದ್ಯುತ್ ವ್ಯತ್ಯಯ ಆಗಲಿದೆ ಅಂತ ಬೆಸ್ಕಾಂ ತಿಳಿಸಿದೆ.
ಇದನ್ನೂ ಓದಿ: CSK vs RCB ನಡುವಿನ ಮ್ಯಾಚ್ಗೆ ಮಳೆ ಬಂದರೆ ಏನಾಗುತ್ತದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ