newsfirstkannada.com

×

VIDEO: ಗಾಯಕರು ಹಾಡು ಹಾಡುವಾಗ ವೇದಿಕೆ ಕುಸಿತ.. ದೆಹಲಿ ಕಾರ್ಯಕ್ರಮದಲ್ಲಿ ಭೀಕರ ದುರಂತ

Share :

Published January 28, 2024 at 10:07am

    ಸಂಗೀತಾ ನಿರ್ಮಾಪಕ ಬಿ. ಪ್ರಾಂಕ್‌ ಅವರ ಗಾಯನ ಕಾರ್ಯಕ್ರಮ

    ಉತ್ಸಾಹದಲ್ಲಿದ್ದ ಜನರು ವೇದಿಕೆಯ ಮೇಲೆ ಹತ್ತಿದ್ದಾಗ ದುರಂತ

    ದೆಹಲಿಯ ಕಲ್ಕಾಜಿ ಮಂದಿರದಲ್ಲಿ ಮಧ್ಯರಾತ್ರಿ ನಡೆದಿರುವ ಘಟನೆ

ನವದೆಹಲಿ: ಕಲ್ಕಾಜಿ ಮಂದಿರದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದ ವೇಳೆ ವೇದಿಕೆ ಕುಸಿದು ಬಿದ್ದ ದಾರುಣ ಘಟನೆ ನಡೆದಿದೆ. ಕಾರ್ಯಕ್ರಮದ ವೇದಿಕೆ ಕುಸಿದು ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದರೆ 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: BREAKING: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಬಿಗುವಿನ ವಾತಾವರಣ; ಪೊಲೀಸರಿಂದ ಲಾಠಿ ಚಾರ್ಜ್‌!

ಮಧ್ಯರಾತ್ರಿ ನಡೆಯುತ್ತಿದ್ದ ಧಾರ್ಮಿಕ ಸಮಾರಂಭದ ವೇಳೆ ದೆಹಲಿಯ ಕಲ್ಕಾಜಿ ಮಂದಿರದಲ್ಲಿ ಈ ಘಟನೆ ನಡೆದಿದೆ. ಮಹಂತ ಪರಿಸರದ ಮಾತಾ ಜಾಗರಣದಲ್ಲಿ ಇಡೀ ರಾತ್ರಿ ಜಾಗರಣೆ ಆಚರಿಸಲಾಗುತ್ತೆ. ಹಿಂದೂ ಜಾಗರಣ ಸಮಯದಲ್ಲಿ ಹಾಡುಗಳು, ನೃತ್ಯಗಳು ಮತ್ತು ಪೂಜೆಯನ್ನು ಮಾಡಲಾಗುತ್ತೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಹಾಗೂ ಸಂಗೀತಾ ನಿರ್ಮಾಪಕ ಬಿ. ಪ್ರಾಂಕ್‌ ಅವರು ಹಾಡುತ್ತಿದ್ದರು. ಎಲ್ಲರೂ ಅತ್ಯುತ್ಸಾಹದಿಂದ ಸಂಗೀತಾ ಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ದರು.

ಜನವರಿ 27-28ರಂದು ಈ ಧಾರ್ಮಿಕ ಸಮಾರಂಭ ಆಯೋಜಿಸಲಾಗಿತ್ತು. ಸಂಗೀತ ಜಾಗರಣದಲ್ಲಿ ಎಲ್ಲರೂ ಮುಳುಗಿದ್ದಾಗ ಕಾರ್ಯಕ್ರಮದ ವೇದಿಕೆ ಕುಸಿದು ಬಿದ್ದಿದೆ. ಉತ್ಸಾಹದಲ್ಲಿದ್ದ ಜನರು ವೇದಿಕೆಯ ಮೇಲೆ ಹತ್ತಿದ್ದಾರೆ. ಹೆಚ್ಚು ಜನರ ಭಾರವನ್ನು ತಡೆದುಕೊಳ್ಳಲಾಗದೇ ಮರದ ವೇದಿಕೆ ಕುಸಿದು ಬಿದ್ದಿದೆ. ಈ ಸಮಾರಂಭಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದು, ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಗಾಯಕರು ಹಾಡು ಹಾಡುವಾಗ ವೇದಿಕೆ ಕುಸಿತ.. ದೆಹಲಿ ಕಾರ್ಯಕ್ರಮದಲ್ಲಿ ಭೀಕರ ದುರಂತ

https://newsfirstlive.com/wp-content/uploads/2024/01/Kalkaji-mandir.jpg

Load More