ಸೋದರಳಿಯನ ಮದುವೆಗೆ ಬ್ಲೌಸ್ ಹೊಲಿಸಲು ಕೊಟ್ಟ ಮಹಿಳೆ
ಸರಿಯಾಗಿ ಬ್ಲೌಸ್ ಹೊಲಿಯದ ಟೈಲರ್ಗೆ ಬಿತ್ತು 5 ಸಾವಿರ ರೂಪಾಯಿ ದಂಡ
ಸಮಾರಂಭದಲ್ಲಿ ಮಜುಗರಕ್ಕೊಳಗಾದ ಮಹಿಳೆ.. ಟೈಲರ್ ಮೇಲೆ ನಿಗಿನಿಗಿ ಕೆಂಡ
ಮದುವೆ, ಸಮಾರಂಭ ಬಂತೆಂದರೆ ಸಾಕು ಮಹಿಳೆಯರು, ಯುವತಿಯರು ಸೀರೆ ಅಂಗಡಿಯತ್ತ ಮುಖ ಮಾಡೇ ಮಾಡುತ್ತಾರೆ. ಅದರಲ್ಲೂ ಕೆಲವರು ದುಬಾರಿ ಬೆಲೆಯ ಸೀರೆ ಖರೀದಿಸುತ್ತಾರೆ. ನಂತರ ಟೈಲರ್ ಅಂಗಡಿಯತ್ತ ಮುಖ ಮಾಡಿ ಸೀರೆಗೆ ತಕ್ಕಂತೆ ಬ್ಲೌಸ್ ಹೊಲಿಸುತ್ತಾರೆ. ಆದರೆ ಇಲ್ಲೊಬ್ಬ ಟೈಲರ್ ಸರಿಯಾಗಿ ಬ್ಲೌಸ್ ಹೊಲಿಯದ ಕಾರಣ 5 ಸಾವಿರ ರೂಪಾಯಿ ದಂಡ ತೆರೆಬೇಕಾದ ಪರಿಸ್ಥಿತಿ ಎದುರಾಗಿದೆ.
ಹೌದು. ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಘಟನೆ ಇದಾಗಿದೆ. ಮಹಿಳೆಯೊಬ್ಬಳು ಚೆಂದ ಸೀರೆ ಖರೀದಿಸಿ ಬಳಿಕ ಟೈಲರ್ ಬಳಿ ಹೋಗಿ ಬ್ಲೌಸ್ ಹೊಲಿಸಲು ಅಳತೆ ಕೊಟ್ಟು ಬಂದಿದ್ದಾಳೆ. ಆದರೆ ಟೈಲರ್ ಕೊಂಚ ಎಡವಟ್ಟು ಮಾಡಿ ಬ್ಲೌಸ್ ಸರಿಯಾಗಿ ಹೊಲಿದಿಲ್ಲವಂತೆ. ಇದರಿಂದಾಗಿ ಮಹಿಳೆಗೆ ಸಮಾರಂಭದಲ್ಲಿ ಮುಜುಗರ ಉಂಟಾಗಿದೆ.
ಗ್ರಾಹಕ ವೇದಿಕೆ ತಲುಪಿತು
ಟೈಲರ್ ಸರಿಯಾಗಿ ಬ್ಲೌಸ್ ಹೊಲಿಸಿಲ್ಲ ಎಂಬ ಸಂಗತಿ ಗ್ರಾಹಕರ ವೇದಿಕೆಗೆ ತಲುಪಿದೆ. ಮಹಿಳೆ ಟೈಲರ್ ಸರಿಯಾಗಿ ಬ್ಲೌಸ್ ಹೊಲಿಸಲಿಲ್ಲವೆಂದು ದೂರಿದ್ದಾಳೆ. ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಬಳಿಕ ಗ್ರಾಹಕ ವೇದಿಕೆ ಮಹಿಳೆಯ ಸಮಸ್ಯೆಯನ್ನು ಆಲಿಸಿ ನ್ಯಾಯ ಕೊಡಿಸಿದೆ. ಬ್ಲೌಸ್ ಹೊಲಿಸಿದ ಟೈಲರ್ಗೆ 5 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಹೇಳಿದೆ.
ಇದನ್ನೂ ಓದಿ: ಗುಡ್ ಬೈ ಬ್ರದರ್.. ವಿಲ್ ಮಿಸ್ ಯು.. ಅಗಲಿದ ಸ್ನೇಹಿತನಿಗೆ ಭಾವುಕ ವಿದಾಯ ಹೇಳಿದ ನಟ ಕಿಶೋರ್
ಮಹಿಳೆ ಸೋದರಳಿಯನ ಮದುವೆ ಸಮಾರಂಭಕ್ಕೆ ಬಟ್ಟೆ ಹೊಲಿಯಲು ಟೈಲರ್ ಮೊರೆ ಹೋಗಿದ್ದಳು. ಮೂರು ಬ್ಲೌಸ್ ಮತ್ತು ಎರಡು ಉಡುಪುಗಳನ್ನು ಹೊಲಿಯಲು ನೀಡಿದ್ದಳು. ಆದರೆ ಟೈಲರ್ ಸರಿಯಾಗಿ ಹೊಲಿಯದ ಕಾರಣ ದಂಡ ಪಾವತಿಸಬೇಕಾದ ಸಂಕಷ್ಟ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ