newsfirstkannada.com

ಬ್ಲೌಸ್​ ಸರಿಯಾಗಿ ಹೊಲಿಯದಕ್ಕೆ ಟೈಲರ್​ಗೆ ಬಿತ್ತು 5000 ರೂಪಾಯಿ ದಂಡ!

Share :

Published March 30, 2024 at 4:42pm

Update March 30, 2024 at 5:00pm

    ಸೋದರಳಿಯನ ಮದುವೆಗೆ ಬ್ಲೌಸ್​​ ಹೊಲಿಸಲು ಕೊಟ್ಟ ಮಹಿಳೆ

    ಸರಿಯಾಗಿ ಬ್ಲೌಸ್​ ಹೊಲಿಯದ ಟೈಲರ್​ಗೆ ಬಿತ್ತು 5 ಸಾವಿರ ರೂಪಾಯಿ ದಂಡ

    ಸಮಾರಂಭದಲ್ಲಿ ಮಜುಗರಕ್ಕೊಳಗಾದ ಮಹಿಳೆ.. ಟೈಲರ್​ ಮೇಲೆ ನಿಗಿನಿಗಿ ಕೆಂಡ

ಮದುವೆ, ಸಮಾರಂಭ ಬಂತೆಂದರೆ ಸಾಕು ಮಹಿಳೆಯರು, ಯುವತಿಯರು ಸೀರೆ ಅಂಗಡಿಯತ್ತ ಮುಖ ಮಾಡೇ ಮಾಡುತ್ತಾರೆ. ಅದರಲ್ಲೂ ಕೆಲವರು ದುಬಾರಿ ಬೆಲೆಯ ಸೀರೆ ಖರೀದಿಸುತ್ತಾರೆ. ನಂತರ ಟೈಲರ್​ ಅಂಗಡಿಯತ್ತ ಮುಖ ಮಾಡಿ ಸೀರೆಗೆ ತಕ್ಕಂತೆ ಬ್ಲೌಸ್​ ಹೊಲಿಸುತ್ತಾರೆ. ಆದರೆ ಇಲ್ಲೊಬ್ಬ ಟೈಲರ್​ ಸರಿಯಾಗಿ ಬ್ಲೌಸ್​ ಹೊಲಿಯದ ಕಾರಣ 5 ಸಾವಿರ ರೂಪಾಯಿ ದಂಡ ತೆರೆಬೇಕಾದ ಪರಿಸ್ಥಿತಿ ಎದುರಾಗಿದೆ.

ಹೌದು. ಗುಜರಾತ್​ನ ವಡೋದರಾ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಘಟನೆ ಇದಾಗಿದೆ. ಮಹಿಳೆಯೊಬ್ಬಳು ಚೆಂದ ಸೀರೆ ಖರೀದಿಸಿ ಬಳಿಕ ಟೈಲರ್​ ಬಳಿ ಹೋಗಿ ಬ್ಲೌಸ್​ ಹೊಲಿಸಲು ಅಳತೆ ಕೊಟ್ಟು ಬಂದಿದ್ದಾಳೆ. ಆದರೆ ಟೈಲರ್​ ಕೊಂಚ ಎಡವಟ್ಟು ಮಾಡಿ ಬ್ಲೌಸ್​ ಸರಿಯಾಗಿ ಹೊಲಿದಿಲ್ಲವಂತೆ. ಇದರಿಂದಾಗಿ ಮಹಿಳೆಗೆ ಸಮಾರಂಭದಲ್ಲಿ ಮುಜುಗರ ಉಂಟಾಗಿದೆ.

ಗ್ರಾಹಕ ವೇದಿಕೆ ತಲುಪಿತು

ಟೈಲರ್​ ಸರಿಯಾಗಿ ಬ್ಲೌಸ್​ ಹೊಲಿಸಿಲ್ಲ ಎಂಬ ಸಂಗತಿ ಗ್ರಾಹಕರ ವೇದಿಕೆಗೆ ತಲುಪಿದೆ. ಮಹಿಳೆ ಟೈಲರ್​ ಸರಿಯಾಗಿ ಬ್ಲೌಸ್​ ಹೊಲಿಸಲಿಲ್ಲವೆಂದು ದೂರಿದ್ದಾಳೆ. ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಬಳಿಕ ಗ್ರಾಹಕ ವೇದಿಕೆ ಮಹಿಳೆಯ ಸಮಸ್ಯೆಯನ್ನು ಆಲಿಸಿ ನ್ಯಾಯ ಕೊಡಿಸಿದೆ. ಬ್ಲೌಸ್​ ಹೊಲಿಸಿದ ಟೈಲರ್​ಗೆ 5 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಹೇಳಿದೆ.

ಇದನ್ನೂ ಓದಿ: ಗುಡ್ ಬೈ ಬ್ರದರ್.. ವಿಲ್ ಮಿಸ್ ಯು.. ಅಗಲಿದ ಸ್ನೇಹಿತನಿಗೆ ಭಾವುಕ ವಿದಾಯ ಹೇಳಿದ ನಟ ಕಿಶೋರ್​

ಮಹಿಳೆ ಸೋದರಳಿಯನ ಮದುವೆ ಸಮಾರಂಭಕ್ಕೆ ಬಟ್ಟೆ ಹೊಲಿಯಲು ಟೈಲರ್​ ಮೊರೆ ಹೋಗಿದ್ದಳು. ಮೂರು ಬ್ಲೌಸ್​​ ಮತ್ತು ಎರಡು ಉಡುಪುಗಳನ್ನು ಹೊಲಿಯಲು ನೀಡಿದ್ದಳು. ಆದರೆ ಟೈಲರ್​ ಸರಿಯಾಗಿ ಹೊಲಿಯದ ಕಾರಣ ದಂಡ ಪಾವತಿಸಬೇಕಾದ ಸಂಕಷ್ಟ ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಲೌಸ್​ ಸರಿಯಾಗಿ ಹೊಲಿಯದಕ್ಕೆ ಟೈಲರ್​ಗೆ ಬಿತ್ತು 5000 ರೂಪಾಯಿ ದಂಡ!

https://newsfirstlive.com/wp-content/uploads/2024/03/Blouse.jpg

Load More