Advertisment

ನೇಣು ಬಿಗಿದ ಸ್ಥಿತಿಯಲ್ಲಿ ನಟಿಯ ಮೃತದೇಹ ಪತ್ತೆ.. ಮಗಳು ಸತ್ತಿದ್ದಾಳೆ ಎಂದರೂ ಬಾರದ ಕುಟುಂಬಸ್ಥರು

author-image
Ganesh
Updated On
ನೇಣು ಬಿಗಿದ ಸ್ಥಿತಿಯಲ್ಲಿ ನಟಿಯ ಮೃತದೇಹ ಪತ್ತೆ.. ಮಗಳು ಸತ್ತಿದ್ದಾಳೆ ಎಂದರೂ ಬಾರದ ಕುಟುಂಬಸ್ಥರು
Advertisment
  • ಕಾಜೋಲ್ ಜೊತೆ ಸಹ ನಟಿಯಾಗಿ ಅಭಿನಯಿಸಿದ್ದ ನೂರ್
  • ಹಿಂದಿ ಹಾಗೂ ವೆಬ್ ಸಿರೀಸ್​ಗಳಲ್ಲಿ ನಟಿಸಿ ಜನಪ್ರಿಯತೆ
  • ಕತಾರ್​​ ಏರ್​ವೇಸ್​ನ ಮಾಜಿ ಗಗನಸಖಿಯೂ ಆಗಿದ್ದ ನಟಿ

ಹಿಂದಿ ಚಿತ್ರರಂಗದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕತಾರ್​​ ಏರ್​ವೇಸ್​ನ ಮಾಜಿ ಗಗನಸಖಿ, ‘ದಿ ಟ್ರಯಲ್’ ವೆಬ್​ ಸಿರೀಸ್​​ನಲ್ಲಿ ಕಾಜೋಲ್ ಜೊತೆ ಕೆಲಸ ಮಾಡಿದ್ದ ನಟಿ ನೋರ್ ಮಾಲಾಬಿಕಾ ದಾಸ್ (Noor Malabika Das) ಸಾವನ್ನಪ್ಪಿದ್ದಾರೆ.

Advertisment

ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿನ ಸುದ್ದಿ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ಮಾಹಿತಿಗಳ ಪ್ರಕಾರ.. ಜೂನ್ 6 ರಂದು ಪೊಲೀಸರು ನೂರ್ ಮಾಲಾಬಿಕಾ ದಾಸ್ ಅವರ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಫ್ಯಾನ್​​​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಾವಿಗೆ ಕಾರಣ ಇನ್ನೂ ಬಹಿರಂಗ ಆಗಿಲ್ಲ.

ಇದನ್ನೂ ಓದಿ:ಟಿ20 ವಿಶ್ವಕಪ್​​ನಲ್ಲಿ ಅಚ್ಚರಿ ಫಲಿತಾಂಶಗಳು.. ದೊಡ್ಡ ದೊಡ್ಡ ತಂಡಗಳಿಗೆ ಶಾಕ್ ಮೇಲೆ ಶಾಕ್..!

publive-image

ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು ಯಾರು?
ನೂರಾ ಮಾಲಾಬಿಕಾ ವಾಸವಿದ್ದ ನಿವಾಸದಲ್ಲಿ ದುರ್ವಾಸನೆ ಬರುತ್ತಿತ್ತು. ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಯ ಬಾಗಿಲು ತೆಗೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಫ್ಯಾನಗ್​ಗೆ ನೇತಾಡುತ್ತಿತ್ತು. ನಂತರ ಪೊಲೀಸರು ಕುಟುಂಬಸ್ಥರ ಸಂಪರ್ಕಿಸುವ ಪ್ರಯತ್ನ ಮಾಡಿದರು. ಆದರೆ ಮನೆಯವರಾಗಲಿ, ಸಂಬಂಧಿಕರಾಗಲಿ ಆಕೆಯ ಮೃತದೇಹವನ್ನು ಕೊಂಡೊಯ್ಯಲು ಮುಂದೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಪೊಲೀಸರು ಎನ್​ಜಿಒ ಒಂದರ ಸಹಾಯ ಪಡೆದು ನೂರ್ ಅವರ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisment

ಇದನ್ನೂ ಓದಿ:ಮಗನ ಎದೆಗೆ ಚೂರಿ ಇರಿದು ಬರ್ಬರವಾಗಿ ಸಾಯಿಸಿದ ಅಪ್ಪ.. ಕಾರಣ ರಿವೀಲ್..!

publive-image

ನೂರ್ ಮಾಲಾಬಿಕಾ ದಾಸ್ ಯಾರು..?
ನೂರ್ ಮಾಲಾಬಿಕಾ ದಾಸ್​ಗೆ 32 ವಯಸ್ಸಾಗಿತ್ತು. ಇವರು ಮೂಲತಃ ಅಸ್ಸಾಂ ನಿವಾಸಿ. ಇವರು ಅನೇಕ ಹಿಂದಿ ಚಲನಚಿತ್ರ ಮತ್ತು ವೆಬ್ ಸಿರೀಸ್​ಗಳಲ್ಲಿ ಕೆಲಸ ಮಾಡಿದ್ದಾರೆ. ನೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಸಾವಿಗೂ ಮೊದಲು ಐದು ದಿನಗಳ ಹಿಂದೆ ಇನ್​ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿದ್ದರು. ಇದೀಗ ಅದೇ ಪೋಸ್ಟ್​ಗೆ ಅಭಿಮಾನಿಗಳು ಕಮೆಂಟ್ ಮಾಡಿ ದುಃಖ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಕೆನಡಾ.. ಪಾಕ್​ ಆಯ್ತು.. ಈಗ ಮಿಷನ್ INDIA.. ಇದು ಟೀಂ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment