ಮುಂದಿನ ಜನ್ಮದಲ್ಲೂ ನಿನಗೆ ಕಾಟ ಕೊಡಬೇಕಲ್ವಾ ಎಂದ ಚಂದನ್!
ಚಂದನ್, ನಿವೇದಿತಾ ಜೋಡಿ ಡಿವೋರ್ಸ್ ಪಡೆದ ಮೇಲೆ ಏನಾಯ್ತು?
ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಕಾಲೆಳೆದ ನೆಟ್ಟಿಗರು
ಱಪರ್ ಚಂದನ್ ಶೆಟ್ಟಿ ಹಾಗೂ ಬಿಗ್ಬಾಸ್ ಬೆಡಗಿ ನಿವೇದಿತಾ ಗೌಡ ದೂರ, ದೂರ ಆಗಿದ್ದಾರೆ. ನಾಲ್ಕು ವರ್ಷದ ವೈವಾಹಿಕ ಜೀವನಕ್ಕೆ ಬ್ರೇಕ್ ಹಾಕಿರುವ ಈ ಕ್ಯೂಟ್ ಕಪಲ್ಸ್ ನಿನ್ನೆಯಿಂದ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಡಿವೋರ್ಸ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಗೆ ಬಗೆಯ ಚರ್ಚೆಗಳು ಜೋರಾಗಿದೆ.
ಇದನ್ನೂ ಓದಿ: ಪಕ್ಕಾ ಚಾಕಲೇಟ್ ಗರ್ಲ್ ಎಂದಿದ್ದ ಚಂದನ್ ಶೆಟ್ಟಿ! ನಿವೇದಿತಾ ಜೊತೆಗಿನ ಸಂಸಾರಕ್ಕೆ ಬ್ರೇಕ್ ನೀಡಲು ಇದೇನಾ ಕಾರಣ?
ಚಂದನ್ ಹಾಗೂ ನಿವೇದಿತಾ ಜೋಡಿ ಪರಸ್ಪರ ಒಪ್ಪಂದದ ಮೇರೆಗೆ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಒಂದೇ ದಿನದಲ್ಲಿ ಇವರಿಗೆ ಫ್ಯಾಮಿಲಿ ಕೋರ್ಟ್ ಕೂಡ ಡಿವೋರ್ಸ್ ಕೊಡಲು ಒಪ್ಪಿಗೆ ಸೂಚಿಸಿದೆ. ಇದಾದ ಮೇಲೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಒಟ್ಟಿಗೆ ಮಾಡಿರುವ ರೀಲ್ಸ್ ವಿಡಿಯೋಗಳು ಸಖತ್ ವೈರಲ್ ಆಗಿದೆ.
View this post on Instagram
ಮುಂದಿನ ಜನ್ಮದಲ್ಲಿ ನೀನೇ ಹೆಂಡತಿ!
ಈ ಜನ್ಮದಲ್ಲಿ ಚಂದನ್ ಹಾಗೂ ನಿವೇದಿತಾ ಇಬ್ಬರೂ ಬೇರೆ, ಬೇರೆಯಾಗಲು ನಿರ್ಧರಿಸಿದ್ದಾರೆ. ಆದರೆ ಚಂದನ್ ಅವರು ಮುಂದಿನ ಜನ್ಮದಲ್ಲೂ ನೀನೇ ಹೆಂಡತಿ ಆಗ್ಬೇಕು ಎಂದಿರುವ ಹಳೇ ವಿಡಿಯೋ ಸದ್ಯ ವೈರಲ್ ಆಗಿದೆ.
ವೈರಲ್ ಆಗಿರುವ ಹಳೇ ರೀಲ್ಸ್ನಲ್ಲಿ ಚಂದನ್ ಶೆಟ್ಟಿಗೆ ನಿವೇದಿತಾ ಒಂದು ಪ್ರಶ್ನೆ ಕೇಳುತ್ತಾರೆ. ದೇವರು ಏನಾದ್ರೂ ಬಂದು ವರ ಕೊಟ್ರೆ ಮುಂದಿನ ಜನ್ಮದಲ್ಲೂ ನೀನು ಮತ್ತೆ ನಾನೇ ಹೆಂಡತಿಯಾಗಿ ಬರಬೇಕು ಅಂತ ಕೇಳಿ ಕೊಳ್ತಿಯಾ ಎಂದಿದ್ದಾರೆ. ನಿವೇದಿತಾ ಪ್ರಶ್ನೆಗೆ ಹೌದು ಮುಂದಿನ ಜನ್ಮದಲ್ಲೂ ನೀನೇ ಹೆಂಡತಿ ಆಗಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಚಂದನ್ ಹೇಳಿದ್ದಾರೆ. ಆಗ ನಕ್ಕಿರುವ ನಿವೇದಿತಾ ಯಾಕೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಚಂದನ್, ನಿನಗೆ ಕಾಟ ಕೊಡಲು ಒಂದು ಜನ್ಮ ಸಾಲೋದಿಲ್ಲ. ಮುಂದಿನ ಜನ್ಮದಲ್ಲೂ ನಿನಗೆ ಕಾಟ ಕೊಡಬೇಕಲ್ವಾ ಅದಕ್ಕೆ ಎಂದಿದ್ದಾರೆ.
ಇದನ್ನೂ ಓದಿ: VIDEO: ‘ಚಂದನ್, ನಿವೇದಿತಾ ಬಗ್ಗೆ ಹರಿದಾಡ್ತಿರೋ ಸುದ್ದಿಯೆಲ್ಲಾ ಸುಳ್ಳು’- ಹೊಸ ಟ್ವಿಸ್ಟ್ ಕೊಟ್ಟ ಆಪ್ತರು
ಚಂದನ್ ಹಾಗೂ ನಿವೇದಿತಾ ಜೋಡಿ ರೀಲ್ಸ್ ಮಾಡುವಾಗ ಮುಂದಿನ ಜನ್ಮದ ಕನಸು ಕಂಡಿದ್ದರು. ಆದ್ರೀಗ ನಾಲ್ಕು ವರ್ಷಕ್ಕೆ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಈ ರೀಲ್ಸ್ ವಿಡಿಯೋ ನೋಡಿದ ನೆಟ್ಟಿಗರು ಸಖತ್ ಕಮೆಂಟ್ ಮಾಡುತ್ತಿದ್ದಾರೆ. ಗುರು ಇದು ಬಕ್ರ ಮಾಡ್ತಿರೋದಾ. ನಿಜಾನಾ ಎಂದು ಕೆಲವರು ಪ್ರಶ್ನಿಸಿದ್ರೆ, ಮೊದಲು ಅಣ್ಣ ತಂಗಿ…ಆಮೇಲೆ ಗಂಡ ಹೆಂಡತಿ…ಈಗ ಮತ್ತೆ ಅಣ್ಣ ತಂಗಿ. ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ