newsfirstkannada.com

ಹೆಂಡ್ತಿ ಕೊಲೆ ಮಾಡಿ ಚರ್ಮ ಸುಲಿದ.. ನರರಾಕ್ಷಸನ ಕೃತ್ಯಕ್ಕೆ ಬೆಚ್ಚಿ ಬಿದ್ದ ಪೊಲೀಸರು; ಹತ್ಯೆಗೆ ಕಾರಣವೇನು?

Share :

Published May 28, 2024 at 8:54pm

Update May 28, 2024 at 8:57pm

  ಪ್ರಾಣಿಗಿಂತ ಕಟೋರವಾಗಿ, ಭಯಂಕರ ಮನಸ್ಥಿತಿಯಲ್ಲಿದ್ದ ಈ ಹಂತಕ

  ಹೆಂಡತಿ ರುಂಡವನ್ನು ಕತ್ತರಿಸಿ ಇಡೀ ದೇಹವನ್ನ ಛಿದ್ರಛಿದ್ರಗೊಳಿಸಿದ್ದ

  ಮಹಿಳೆ ದೇಹದ ಚರ್ಮ ಕಿತ್ತೆಸಿದ್ದನ್ನ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ

ತುಮಕೂರು: ಇದು ಬರೀ ಹತ್ಯೆಯಲ್ಲ. ಇದು ಘನಘೋರ ಹತ್ಯೆ. ರಣಭಯಂಕರ ಹತ್ಯೆ. ಮನುಷ್ಯತ್ವ ಇಲ್ಲದ ಅತೀ ಕ್ರೂರ ಹತ್ಯೆ. ಈ ಹತ್ಯೆಯ ಭೀಕರತೆ ನೋಡಿದ್ರೆ, ಈ ಕೊಲೆಗಾರನ ದೇಹದಲ್ಲಿ ಹರಿಯುವ ರಕ್ತದಲ್ಲಿ ಮನುಷ್ಯತ್ವ ಅನ್ನೋದೇ ಇರಲಿಲ್ಲ ಅನಿಸುತ್ತೆ. ಮಾನವನಿಗೆ ಇರಬೇಕಾದ ಕನಿಷ್ಠ ಗುಣ-ಲಕ್ಷಣಗಳು ಇವನಲ್ಲಿ ಇದ್ದೇ ಇರಲಿಲ್ವಾ ಅನಿಸಬಿಡುತ್ತೆ. ಯಾಕಂದ್ರೆ ಅಷ್ಟು ಭೀಕರವಾಗಿ ಈ ಹತ್ಯೆ ಮಾಡಿದ್ದಾನೆ.

ಪ್ರಾಣಿಗಳು ಸಹ ಹೊಟ್ಟೆ ತುಂಬಿದ ಮೇಲೆ ಆ ದೇಹನ ಅರ್ಧಕ್ಕೆ ಬಿಟ್ಟು ಹೋಗಿಬಿಡುತ್ತವೆ. ಆದರೆ ಪ್ರಾಣಿಗಿಂತ ಕಟೋರವಾಗಿ, ಭಯಂಕರ ಮನಸ್ಥಿತಿಯಲ್ಲಿದ್ದ ಈ ಹಂತಕ ರುಂಡವನ್ನ ಕತ್ತರಿಸಿ, ದೇಹವನ್ನ ಛಿದ್ರ ಛಿದ್ರಗೊಳಿಸಿದ್ದಲ್ಲದೇ ಆ ದೇಹದ ಇಡೀ ಚರ್ಮವನ್ನ ಸುಲಿದುಬಿಟ್ಟಿದ್ದಾನೆ.

ಪತ್ನಿಯ ದೇಹ ಛಿದ್ರ ಛಿದ್ರಗೊಳಿಸಿದ ಪತಿ!
ಅಂದ ಹಾಗೆ ಈ ಘಟನೆ ನಡೆದಿರೋದು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿ. ಹುಲಿಯೂರುದುರ್ಗ ಬಳಿಯ ಸುಗ್ಗನಹಳ್ಳಿ ನಿವಾಸಿ ಶಿವರಾಮ್, ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪಾಳನ್ನ ಮದುವೆಯಾಗಿದ್ದ. 8 ವರ್ಷದ ಮದುವೆ ಆಗಿದ್ದ ಈ ದಂಪತಿಗೆ 4 ವರ್ಷದ ಮಗ ಸಹ ಇದ್ದು, ಹುಲಿಯೂರುದುರ್ಗ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡ್ಕೊಂಡು ವಾಸವಿದ್ದರು. ಮರದ ಸಾಮಿಲ್ ವೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡ್ತಿದ್ದ ಶಿವರಾಮ್ ಹಾಗೂ ಪತ್ನಿ ನಡುವೆ ಆಗಾಗ ಸಣ್ಣ ಪುಟ್ಟ ವಿಚಾರಗಳಿಗೆ ಜಗಳ ನಡೀತಿತ್ತು ಎನ್ನಲಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿ ಈಗ ಹೆಂಡತಿಯ ಹೆಣ ಬೀಳಿಸಿದ್ದಾನೆ. ತಾವು ವಾಸವಿದ್ದ ಮನೆಯಲ್ಲೇ ಪತ್ನಿಯನ್ನ ಶವವಾಗಿಸಿದ್ದಾನೆ.

ಇದನ್ನೂ ಓದಿ: ಫಸ್ಟ್​ ನೈಟ್​ ದಿನವೇ ಹೆಂಡತಿ ಮುಖ ನೋಡಿ ಶಾಕ್​​​​ ಆದ ಗಂಡ.. ಡಿವೋರ್ಸ್​ಗೆ ಬೇಡಿಕೆ ಇಟ್ಟಿದ್ದೇಕೆ? 

ಸೋಮವಾರ ರಾತ್ರಿ ಗಂಡ-ಹೆಂಡತಿ ನಡುವೆ ಜಗಳ ಆಗಿದೆ ಕ್ಷುಲ್ಲಕ ಕಾರಣಕ್ಕೆ ಕಿತ್ತಾಡಿಕೊಂಡು ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವೇಳೆ ಜಗಳ ಜೋರಾಗಿ ರೊಚ್ಚಿಗೆದ್ದ ಶಿವರಾಮ್ ಹೆಂಡತಿಯ ಪ್ರಾಣ ತೆಗೆದಿದ್ದ. ಪ್ರಾಣ ತೆಗೆದಿದ್ದಾನೆ ಅಂದ್ರೆ ಯಾವುದೋ ಬಲವಾದ ಆಯುಧದಲ್ಲಿ ಹೊಡೆದು ಸುಮ್ಮನಾಗಿಲ್ಲ ಅಥವಾ ಕತ್ತು ಹಿಸುಕಿ ಕೊಂದು ಸುಮ್ಮನಾಗಿಲ್ಲ. ಹೆಂಡತಿಯ ರುಂಡ ಕತ್ತರಿಸಿದ್ದಾನೆ. ರುಂಡವನ್ನ ಕತ್ತರಿಸಿ ಶವದ ಪಕ್ಕದಲ್ಲಿಟ್ಟು ಇಡೀ ದೇಹವನ್ನ ಛಿದ್ರಛಿದ್ರಗೊಳಿಸಿದ್ದಾನೆ. ಪ್ರಾಣಿಗಳ ಚರ್ಮವನ್ನ ಹೇಗೆ ಬಿಡಿಸ್ತಾರೋ ಹಾಗೆ ಪತ್ನಿಯ ಶವದ ಮೇಲಿನ ಇಡೀ ದೇಹದ ಚರ್ಮವನ್ನ ಕಿತ್ತು ಎಸೆದು ಕ್ರೌರ್ಯ ಮೆರೆದಿದ್ದಾನೆ.

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಕೊಲೆ ಮಾಡಿದ್ನಾ? 
ಈ ಕೊಲೆಗೆ ಅಸಲಿ ಕಾರಣ ಏನು ಅನ್ನೋದು ಗೊತ್ತಾಗಿಲ್ಲ. ಆದರೆ ಅನೈತಿಕ ಸಂಬಂಧ ಶಂಕೆ ವ್ಯಕ್ತವಾಗಿದೆ. ಶಿವರಾಮ್​ಗೆ ಬೇರೆ ಹೆಂಗಸಿನ ಜೊತೆ ಅಕ್ರಮ ಸಂಬಂಧ ಇತ್ತು ಎಂದು ಹೇಳಲಾಗ್ತಿದೆ. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಆಗಾಗ ಜಗಳನೂ ಆಗ್ತಿತ್ತಂತೆ. ಸೋಮವಾರ ರಾತ್ರಿಯೂ ಇದೇ ವಿಚಾರಕ್ಕೆ ಜೋರು ಜಗಳ ಆಗಿದೆ. ಗಂಡನ ಅನೈತಿಕ ಸಂಬಂಧವನ್ನ ಪತ್ನಿ ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಶಿವರಾಮ್, ಪತ್ನಿಯನ್ನೇ ಇಲ್ಲ ಎನಿಸಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

ಸ್ಥಳೀಯರು ಹೇಳುವ ಪ್ರಕಾರ, ಗಂಡ-ಹೆಂಡತಿ ನಡುವೆ ಯಾವಾಗಲೂ ಜಗಳ ಆಗ್ತಿತ್ತಂತೆ. ಜಗಳ ಮಾಡಿದರೂ ಅವರು ಚೆನ್ನಾಗಿಯೇ ಇದ್ದರಂತೆ. ಆದರೆ ಶಿವರಾಮ್​ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ಸ್ಥಳಿಯರು, ಅವನು ಸ್ವಲ್ಪ ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದ ಅಂತಾನೂ ಹೇಳ್ತಾರೆ. ಒಂದೊಂದು ಸಮಯದಲ್ಲಿ ಒಂದೊಂಥರಾ ಮಾತಾಡ್ತಿದ್ದು, ಸೈಕೋ ರೀತಿ ವರ್ತಿಸುತ್ತಿದ್ದರ ಬಗ್ಗೆಯೂ ಜನ ಮಾತಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಮಾತ್ರೆಗಳನ್ನ ಕೂಡ ಸೇವಿಸ್ತಿದ್ದನಂತೆ. ಹಾಗಾಗಿಯೇ ಸಣ್ಣ ಮಟ್ಟದ ಜಗಳ ನಡೆದಿದ್ದರೂ, ಇಷ್ಟು ಕ್ರೂರವಾಗಿ ಕೊಂದಿರಬಹುದು ಎಂದು ಹೇಳಲಾಗ್ತಿದೆ.

ಸೋಮವಾರ ರಾತ್ರಿ ಏನಾಯ್ತು ಅನ್ನೋದರ ಬಗ್ಗೆ ಕರೆಕ್ಟ್​ ಆಗಿ ಮಾಹಿತಿ ಇಲ್ಲ. ಯಾಕಂದ್ರೆ ರಾತ್ರಿ ಗಂಡ-ಹೆಂಡತಿ ಜಗಳ ಮಾಡ್ತಿದ್ದನ್ನ ನೆರೆಹೊರೆಯವರು ಗಮನಿಸಿದ್ದಾರೆ. ಆದರೆ ರಾತ್ರಿ ಸಮಯ ಕಿತ್ತಾಡೋದು ರೆಗ್ಯುಲರ್ ಅಂತ ಸುಮ್ಮನಾಗಿದ್ದಾರೆ. ಆಮೇಲೆ ಬೆಳಗ್ಗೆದ್ದು ನೋಡಿದ್ರೆ ಕಿಚ್ಚನ್​ನಲ್ಲಿ ಪುಷ್ಪ ಭೀಕರವಾಗಿ ಶವವಾಗಿದ್ದಳು. ಅಷ್ಟೊತ್ತಿಗೆ ಪೊಲೀಸರಿಗೂ ಮಾಹಿತಿ ಹೋಗಿತ್ತು. ಘಟನೆ ಬಗ್ಗೆ ತಿಳಿದ ಪೊಲೀಸರು ಗಾಬರಿ ಗಾಬರಿಯಿಂದಲೇ ಮನೆ ಹತ್ತಾ ಓಡಿ ಬಂದಿದ್ದರು. ಮನೆ ಬಳಿ ಬಂದು ನೋಡಿದ್ರೆ ಪತ್ನಿಯ ತಲೆಯನ್ನ ಕತ್ತರಿಸಿ ಪಕ್ಕದಲ್ಲಿಟ್ಟು, ದೇಹದ ಚರ್ಮವನ್ನೆಲ್ಲಾ ಕಿತ್ತೆಸಿದ್ದನ್ನ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಹೊಟ್ಟೆ ತುಂಬಾ ಬಿರಿಯಾನಿ ತಿಂದ ಮಹಿಳೆ ದಿಢೀರ್‌ ಸಾವು; ಬರೋಬ್ಬರಿ 178 ಮಂದಿ ಆಸ್ಪತ್ರೆಗೆ ದಾಖಲು

ಪತ್ನಿಯನ್ನ ಕೊಲೆಗೈದು ಪರಾರಿಯಾಗಿದ್ದ ಶಿವರಾಮ್ ಮನೆ ಸಮೀಪವೇ ಪೊದೆಯೊಂದರಲ್ಲಿ ಅಡಗಿ ಕುಳಿತಿದ್ದನಂತೆ. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಪೊಲೀಸರು, ಆರೋಪಿ ಶಿವರಾಮ್​ನನ್ನ ಅರೆಸ್ಟ್ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಪಟ್ಟಂತೆ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪತ್ನಿಯನ್ನ ಕೊಲೆಗೈದ ಪತಿ ಶಿವರಾಮ್​ನನ್ನ ಪೊಲೀಸರು ಬಂಧಿಸಿರುವ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಹಾಗಾಗಿ ಪೊಲೀಸರ ತನಿಖೆಯಿಂದಲೇ ಪುಷ್ಪ ಕೊಲೆಗೆ ನಿಖರವಾದ ಕಾರಣ ಏನು ಅಂತ ಗೊತ್ತಾಗಬೇಕಿದೆ.. ಕಾರಣ ಏನೇ ಇರಲಿ, ಇಷ್ಟು ಕ್ರೂರವಾಗಿ ಕೊಂದಿದ್ದು ಮಾತ್ರ ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಶಿಕ್ಷೆ ಆಗಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡ್ತಿ ಕೊಲೆ ಮಾಡಿ ಚರ್ಮ ಸುಲಿದ.. ನರರಾಕ್ಷಸನ ಕೃತ್ಯಕ್ಕೆ ಬೆಚ್ಚಿ ಬಿದ್ದ ಪೊಲೀಸರು; ಹತ್ಯೆಗೆ ಕಾರಣವೇನು?

https://newsfirstlive.com/wp-content/uploads/2024/05/Tumkur-Murder.jpg

Load More