/newsfirstlive-kannada/media/post_attachments/wp-content/uploads/2024/09/Thievse-1.jpg)
ಕಳ್ಳರು ಒಂದು ಬಾರಿ ಕಣ್ಣು ಹಾಕಿದರೆ ಸಾಕು ಅಲ್ಲಿದ್ದ ದುಬಾರಿ ಮತ್ತು ಬೆಲೆ ಬಾಳುವ ವಸ್ತುಗಳನ್ನು ಮಂಗ ಮಾಯಾ ಮಾಡುತ್ತಾರೆ. ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್​ ಆಗುತ್ತಾರೆ. ಆದರೆ ಶಾಸಕರೊಬ್ಬರ ಮನೆಗೆ ನುಗ್ಗಿದ ಕಳ್ಳರು ಏನು ದೋಚಿದ್ದಾರೆ ಗೊತ್ತಾ?. ಈ ಸ್ಟೋರಿ ಓದಿ.
ಶಾಸಕರೊಬ್ಬರ ಮನೆಗೆ ನುಗ್ಗಿದ ಕಳ್ಳರು ಟ್ಯಾಂಕ್​ ಮತ್ತು ನಲ್ಲಿಗಳನ್ನು ದೋಚಿರುವ ಘಟನೆಯೊಂದು ಅಚ್ಚರಿಗೆ ಕಾರಣವಾಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಘಟನೆ ಬಗ್ಗೆ ಎಫ್​ಐಆರ್​ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಸಿದ್ದಾರ್ಥನಗರ ಶೋಹರತ್​​ಗಢ ಕ್ಷೇತ್ರದ ವಿನಯ್​ ವರ್ಮಾ ಅವರ ನಿವಾಸದಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಟ್ಯಾಂಕ್​​, ನಲ್ಲಿ ಕಳ್ಳತನವಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶ್ವಾನದಳದ ಜೊತೆಗೆ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: VIDEO: ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ ಎಂದ ಕಿಚ್ಚ ಸುದೀಪ್​! ಹುಟ್ಟುಹಬ್ಬದಂದು ಹಿಂಗದ್ರಾ?
ಶಾಸಕರ ಬಟ್ಲರ್​ ಪ್ಯಾಲೇಸ್​​​​ ಕಾಲೋನಿಯ ಸರ್ಕಾರಿ ನಿವಾಸದಲ್ಲಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು ಟ್ಯಾಂಕ್​ ಮತ್ತು ನಲ್ಲಿ ಕದ್ದಿದ್ದಾರೆ. ಊಟದ ಕೋಣೆ, ಸ್ನಾನಗೃಹದ ನಲ್ಲಿಗಳನ್ನು ಕದ್ದು ಪರಾರಿಯಾಗಿದ್ದಾರೆ.
ಸದ್ಯ ಶಾಸಕರ ನಿವಾಸದ ಬಳಿ ಪೊಲೀಸ್​​ ಕಣ್ಗಾವಲು ಇರುತ್ತದೆ. ಆದರೆ ಇದನ್ನು ತಪ್ಪಿಸಿ ಕಳ್ಳರು ಹೇಗೆ ಕಳ್ಳತನ ಮಾಡಿದರು ಎಂಬ ಅನುಮಾನ ಮೂಡಿದೆ. ಸದ್ಯ ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us