ಶಾಸಕರ ಮನೆಗೆ ಕನ್ನ ಹಾಕಿದ ಖದೀಮರು
ಶ್ವಾನ ದಳದ ಜೊತೆಗೆ ಪರಿಶೀಲನೆ ನಡೆಸಿದ ಪೊಲೀಸರು
ಊಟದ ಕೋಣೆ, ಸ್ನಾನಗೃಹದ ನಲ್ಲಿಗಳನ್ನು ಕದ್ದು ಪರಾರಿ
ಕಳ್ಳರು ಒಂದು ಬಾರಿ ಕಣ್ಣು ಹಾಕಿದರೆ ಸಾಕು ಅಲ್ಲಿದ್ದ ದುಬಾರಿ ಮತ್ತು ಬೆಲೆ ಬಾಳುವ ವಸ್ತುಗಳನ್ನು ಮಂಗ ಮಾಯಾ ಮಾಡುತ್ತಾರೆ. ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್ ಆಗುತ್ತಾರೆ. ಆದರೆ ಶಾಸಕರೊಬ್ಬರ ಮನೆಗೆ ನುಗ್ಗಿದ ಕಳ್ಳರು ಏನು ದೋಚಿದ್ದಾರೆ ಗೊತ್ತಾ?. ಈ ಸ್ಟೋರಿ ಓದಿ.
ಶಾಸಕರೊಬ್ಬರ ಮನೆಗೆ ನುಗ್ಗಿದ ಕಳ್ಳರು ಟ್ಯಾಂಕ್ ಮತ್ತು ನಲ್ಲಿಗಳನ್ನು ದೋಚಿರುವ ಘಟನೆಯೊಂದು ಅಚ್ಚರಿಗೆ ಕಾರಣವಾಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಘಟನೆ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಸಿದ್ದಾರ್ಥನಗರ ಶೋಹರತ್ಗಢ ಕ್ಷೇತ್ರದ ವಿನಯ್ ವರ್ಮಾ ಅವರ ನಿವಾಸದಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಟ್ಯಾಂಕ್, ನಲ್ಲಿ ಕಳ್ಳತನವಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶ್ವಾನದಳದ ಜೊತೆಗೆ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: VIDEO: ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ ಎಂದ ಕಿಚ್ಚ ಸುದೀಪ್! ಹುಟ್ಟುಹಬ್ಬದಂದು ಹಿಂಗದ್ರಾ?
ಶಾಸಕರ ಬಟ್ಲರ್ ಪ್ಯಾಲೇಸ್ ಕಾಲೋನಿಯ ಸರ್ಕಾರಿ ನಿವಾಸದಲ್ಲಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು ಟ್ಯಾಂಕ್ ಮತ್ತು ನಲ್ಲಿ ಕದ್ದಿದ್ದಾರೆ. ಊಟದ ಕೋಣೆ, ಸ್ನಾನಗೃಹದ ನಲ್ಲಿಗಳನ್ನು ಕದ್ದು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿವೆ 3 ಕಾರುಗಳು.. ಒಂದಕ್ಕಿಂತ ಒಂದು ಅದ್ಭುತ!
ಸದ್ಯ ಶಾಸಕರ ನಿವಾಸದ ಬಳಿ ಪೊಲೀಸ್ ಕಣ್ಗಾವಲು ಇರುತ್ತದೆ. ಆದರೆ ಇದನ್ನು ತಪ್ಪಿಸಿ ಕಳ್ಳರು ಹೇಗೆ ಕಳ್ಳತನ ಮಾಡಿದರು ಎಂಬ ಅನುಮಾನ ಮೂಡಿದೆ. ಸದ್ಯ ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ