newsfirstkannada.com

ಬರಿದಾಗುತ್ತಿದೆ ಯಡಿಯೂರು ಕೆರೆ.. ಪ್ರಾಣಿ ಪಕ್ಷಿಗಳು ಕಂಗಾಲು.. ಭೀಕರ ಬರದ ಎಚ್ಚರಿಕೆಯ ಆತಂಕ..!

Share :

Published May 6, 2024 at 6:22am

    ಬಿಸಿಲಿನ ಅತಿಯಾದ ಶಾಖದಿಂದ ಬತ್ತಿ ಹೋಗ್ತಿವೆ ನಗರದ ಒಂದೊಂದೇ ಕೆರೆಗಳು

    ದಿನದಿಂದ ದಿನಕ್ಕೆ ರಾಜ್ಯದ ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ಭೀಕರ ಬಿಸಿಲು

    ಬೋಟಿಂಗ್ ಮಾಡುವ ಜಾಗದಲ್ಲಿ ವಾಕಿಂಗ್ ಮಾಡುವಷ್ಟು ನೀರಿನ ಮಟ್ಟ ಕುಸಿತ

ಬೆಂಗಳೂರು: ದಾಖಲೆಯ ತಾಪಮಾನದಿಂದ ಜರ್ಜರಿತವಾಗಿದ್ದ ಸಿಟಿ ಮಂದಿಗೆ ತಂಪೆರೆದ ವರುಣ ಮತ್ತೆ ಮರೆಯಾಗ್ಬಿಟ್ಟಿದ್ದಾನೆ. ಈ ನಡುವೆ ವರುಣನ ಅವಕೃಪೆ, ಬಿಸಿಲ ಶಾಖದಿಂದ ನಗರದ ಒಂದೊಂದೆ ಕೆರೆಗಳು ಬತ್ತಿ ಹೋಗ್ತಿವೆ. ಈ ಲಿಸ್ಟ್​ಗೆ ಇದೀಗ ಯಡಿಯೂರು ಕೆರೆ ಸೇರ್ಕೊಂಡಿದ್ದು, ಬೋಟಿಂಗ್ ಮಾಡುವ ಜಾಗದಲ್ಲಿ ವಾಕಿಂಗ್ ಮಾಡುವಷ್ಟು ನೀರಿನ ಮಟ್ಟ ಕುಸಿದಿದೆ.

ಇದನ್ನೂ ಓದಿ: ಬ್ಯೂಟಿ ಕ್ವೀನ್ ಬರ್ಬರ ಹತ್ಯೆ.. ರೆಸ್ಟೋರೆಂಟ್‌ನಲ್ಲಿ ಗುಂಡಿಕ್ಕಿ ಕೊಂದ ಹಂತಕರು; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ರಣಬಿಸಿಲು ವರುಣನ ಅವಕೃಪೆಯಿಂದ ಒಂದೊಂದೆ ಕೆರೆಗಳ ಒಡಲು ಬತ್ತಿ ಹೋಗ್ತಿವೆ. ಈ ಲಿಸ್ಟ್​ಗೆ ಇದೀಗ 1400 ವರ್ಷಗಳ ಇತಿಹಾಸ ಹೊಂದಿರುವ ಯಡಿಯೂರು ಕೆರೆ ಸೇರ್ಕೊಂಡಿದೆ. ಒಂದು ಕಾಲದಲ್ಲಿ ಬೇಸಿಗೆ, ಮಳೆಗಾಲ ಎನ್ನದೆ ಸದಾ ನೀರಿನಿಂದ ತುಂಬಿಕೊಂಡಿದ್ದ ಯಡಿಯೂರು ಕೆರೆಯಲ್ಲಿ ಇದೀಗ ನೀರಿನ ಮಟ್ಟ ಕುಸಿದಿದೆ. ಇಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಇದೆ.  ಇಲ್ಲಿ ಚರಂಡಿ ನೀರೆ ಕಾಣ್ತಿದೆ.

ಯಡಿಯೂರು ಕೆರೆ ತನ್ನದೇ ಆದ ಇತಿಹಾಸವನ್ನ ಹೊಂದಿದೆ. ಹೊಯ್ಸಳ ಆಳ್ವಿಕೆಗೆ ಒಳಪಟ್ಟಿದ್ದ ಯಡಿಯೂರಿನ ಗ್ರಾಮ ದೇವತೆ ಗಾಂಧಾಳಮ್ಮ ಪಾದುಕೆಗಳಿಗೆ ಪೂಜೆ ಸಲ್ಲಿಸುವ ಸಲುವಾಗಿ ಕ್ರಿ.ಶ 1107ರಲ್ಲಿ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲಾ ಅವರು ಇಲ್ಲಿಗೆ ಆಗಮಿಸಿ, ಕೆರೆಯಲ್ಲಿ ಮಿಂದು ದೇವರಿಗೆ ಪೂಜೆ ಸಲ್ಲಿಸಿದ್ದರು ಅನ್ನೋ ಮಾತಿದೆ. ಇದೇ ಕಾರಣಕ್ಕೆ ಇಲ್ಲಿಯ ಬೋಟಿಂಗ್​​ಗೆ  ಶಾಂತಲ ದೋಣಿ ವಿಹಾರ ಅನ್ನೋ ಹೆಸರಿಡಲಾಗಿದೆ.

ಇದೀಗ ಮಳೆ ಕೊರತೆಯಿಂದ ನೀರು ಕುಸಿತವಾಗಿದೆ. ಕೆರೆಯಲ್ಲಿ ನೀರು ಕುಸಿದಿದ್ದು, ಕೆರೆಯ ನೀರು ಕೂಡ ಬದ್ಲಾಗಿರೋದರಿಂದ ಬೋಟಿಂಗ್ ಬಂದವರು ಕೂಡ ಅಸಮಾಧಾನ ಹೊರ ಹಾಕಿದ್ದಾರೆ. ಒಟ್ಟಿನಲ್ಲಿ 1400 ವರ್ಷಗಳ ಇತಿಹಾಸ ಹೊಂದಿರುವ ಯಡಿಯೂರು ಕೆರೆ ಈ ಹಿಂದೆ ಬೇಸಿಗೆ ಕಾಲದಲ್ಲೂ ಮೈದುಂಬಿಕೊಳ್ತಿತ್ತು. ಬಟ್ ಇದೀಗ ನೀರು ಕುಸಿದಿದ್ದು, ಜನರ ಜೊತೆಗೆ ನೂರಾರು ಪಕ್ಷಿಗಳು ಕೂಡ ಸಂಕಟಪಡುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರಿದಾಗುತ್ತಿದೆ ಯಡಿಯೂರು ಕೆರೆ.. ಪ್ರಾಣಿ ಪಕ್ಷಿಗಳು ಕಂಗಾಲು.. ಭೀಕರ ಬರದ ಎಚ್ಚರಿಕೆಯ ಆತಂಕ..!

https://newsfirstlive.com/wp-content/uploads/2024/05/Yediyur-Lake-Near.jpg

Load More