/newsfirstlive-kannada/media/post_attachments/wp-content/uploads/2024/06/panipat.jpg)
ಮಹಿಳೆ ಪಿಜ್ಜಾ ತಿನ್ನುವುದನ್ನು ಗಮನಿಸಿದ ಕಳ್ಳನೊಬ್ಬ ಆಕೆಯ ಸರ ಕಸಿದು ಪರಾರಿಯಾದ ದೃಶ್ಯ ಸಮೇತ ಘಟನೆಯೊಂದು ವೈರಲ್​ ಆಗಿದೆ. ಹರಿಯಾಣದ ಪಾಣಿಪತ್​ನಲ್ಲಿ ಈ ಘಟನೆ ನಡೆದಿದೆ.
ಮಹಿಳೆ ತನ್ನ ಸ್ನೇಹಿತೆಯರೊಂದಿಗೆ ಮಳಿಗೆಯೊಂದರಲ್ಲಿ ಪಿಜ್ಜಾ ಸೇವಿಸುತ್ತಾ ಮಗ್ನರಾಗಿದ್ದಳು. ಆದರೆ ಈ ವೇಳೆ ಅಲ್ಲಿಗೆ ಬಂದ ಕಳ್ಳ ಹೆಲ್ಮೆಟ್​ ಧರಿಸಿ ಅಂಗಡಿ ಒಳಕ್ಕೆ ಬಂದಿದ್ದಾನೆ. ನಂತರ ಪಿಜ್ಜಾ ಆರ್ಡರ್​ ಮಾಡಿದ್ದಾನೆ.
ಪಿಜ್ಜಾ ಆರ್ಡರ್​ ಮಾಡಿದ ಬಳಿಕ ಆರ್ಡರ್​ಗಾಗಿ ಕಾದಂತೆ ನಟಿಸಿದ್ದಾನೆ. ಆದರೆ ಅತ್ತ ಮಹಿಳೆ ಪಿಜ್ಜಾ ತಿನ್ನುತ್ತಿದ್ದನ್ನು ಗಮನಿಸಿದ ಕಳ್ಳ ಆಕೆಯ ಕುತ್ತಿಗೆಯಲ್ಲಿದ್ದ ಚೈನ್​ ಕಸಿದು ಪರಾರಿಯಾಗಿದ್ದಾನೆ. ಈ ದೃಶ್ಯ ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
हरियाणा के पानीपत में एक रेस्टोरेंट के भीतर चेन स्नैचर का दुस्साहस देखिए। pic.twitter.com/WLuLYzycJe
— SANJAY TRIPATHI (@sanjayjourno)
हरियाणा के पानीपत में एक रेस्टोरेंट के भीतर चेन स्नैचर का दुस्साहस देखिए। pic.twitter.com/WLuLYzycJe
— SANJAY TRIPATHI (@sanjayjourno) June 8, 2024
">June 8, 2024
ಶನಿವಾರದಂದು, ಅಂದರೆ ನಿನ್ನೆ ಈ ಘಟನೆ ನಡೆದಿದೆ. ಮಧ್ಯಾಹ್ನ 3:40ರ ಸುಮಾರಿಗೆ ಕಳ್ಳ ಸರ ಎಗರಿಸಿ ಪರಾರಿಯಾಗಿದ್ದಾನೆ. ಮಾಹಿತಿ ಪ್ರಕಾರ 20 ಗ್ರಾಂ ತೂಕದ ಸರವನ್ನು ಆತ ಕಸಿದುಕೊಂಡು ಹೋಗಿದ್ದಾನೆ. ಸದ್ಯ ಈ ಕುರಿತು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us