ಕಬ್ಬಿಣದ ಸೇತುವೆ ಮೇಲೆ ಕಣ್ಣಿಟ್ಟಿದ್ದ ಖತರ್ನಾಕ್ ಕಳ್ಳರು
ಬರೋಬ್ಬರಿ 6 ಸಾವಿರ ಕೆ.ಜಿ ತೂಕದ ಸೇತುವೆ ಕದ್ದು ಜೂಟ್
ಕಳ್ಳರ ಜಾಲ ಭೇದಿಸಲು ಪೊಲೀಸರ ಉಪಾಯ ಏನು ಗೊತ್ತಾ?
ಮುಂಬೈ: ಕಳೆದ ತಿಂಗಳು ಬರೋಬ್ಬರಿ 6 ಸಾವಿರ ಕೆ.ಜಿ ತೂಕದ ಕಬ್ಬಿಣ ಸೇತುವೆಯನ್ನು ಕಳ್ಳರು ಕದ್ದೊಯ್ದಿದ್ದರು. ಆದರೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮಲಾಡ್ ಸಮೀಪ ಅದಾನಿ ಎಲೆಕ್ಟ್ರಿಸಿಟಿ ಎಂಬ ಕಂಪನಿ ಕೇಬಲ್ ಸಾಗಾಣಿಕೆಗಾಗಿ ತಾತ್ಕಾಲಿಕವಾಗಿ ಕಬ್ಬಿಣ ಸೇತುವೆಯನ್ನು ನಿರ್ಮಾಣ ಮಾಡಿತ್ತು. ಆದರೆ ಈ ಸೇತುವೆಯನ್ನೇ ಕಳ್ಳರು ಎಗರಿಸಿದ್ದರು.
ಕಳ್ಳರ ಕೈ ಚಳಕ
ಅಂದಹಾಗೆಯೇ ಈ ಜಾಗದಲ್ಲಿ ಖಾಯಂ ಸೇತುವೆ ನಿರ್ಮಾಣ ಮಾಡುವ ಉದ್ದೇಶದಿಂದ ತಾತ್ಕಾಲಿಕವಾಗಿ ಕಬ್ಬಿಣ ಸೇತುವೆಯನ್ನು ತೆಗೆದು ಪಕ್ಕಕ್ಕೆ ಇಡಲಾಗಿತ್ತು. ಆದರೆ ಇದನ್ನು ಗಮನಿಸಿದ ಕಳ್ಳರು ಕೈ ಚಳಕ ತೋರಿಸಿದ್ದಾರೆ.
ಕಳ್ಳರು ಸಿಕ್ಕಿದ್ರು, ಕದ್ದ ಸೇತುವೆಯೂ ಸಿಕ್ತು
ಕಳ್ಳರು ಸೇತುವೆ ಕದ್ದ ಘಟನೆ ಕಂಪನಿಗೆ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಲವು ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ಕಳ್ಳ ಸಾಗಾಣಿಕೆಗೆ ಬಳಸುತ್ತಿದ್ದ ವಾಹನ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ಈ ಮೂಲಕ ನಾಲ್ವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕದ್ದ ಸೇತುವೆಯನ್ನು ಪತ್ತೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ