Kalki 2898 AD: ಅಬ್ಬಬ್ಬಾ! ಪ್ರಭಾಸ್​ ಕಲ್ಕಿ ಸಿನಿಮಾದ 3ನೇ ದಿನದ ಕಲೆಕ್ಷನ್​ ಎಷ್ಟು ಕೋಟಿ ಗೊತ್ತಾ?

author-image
Veena Gangani
Updated On
Kalki 2898 AD: ಅಬ್ಬಬ್ಬಾ! ಪ್ರಭಾಸ್​ ಕಲ್ಕಿ ಸಿನಿಮಾದ 3ನೇ ದಿನದ ಕಲೆಕ್ಷನ್​ ಎಷ್ಟು ಕೋಟಿ ಗೊತ್ತಾ?
Advertisment
  • ಇದೇ ಜೂನ್​ 27ರಂದು ಅದ್ಧೂರಿಯಾಗಿ ಬಿಡುಗಡೆಯಾಗಿತ್ತು ‘ಕಲ್ಕಿ 2898 ಎಡಿ’ ಸಿನಿಮಾ
  • ರಿಲೀಸ್ ಆದ ಮೊದಲ ದಿನದಿಂದ ​ಇಲ್ಲಿಯವರೆಗೆ ಥಿಯೇಟರ್​ಗಳಲ್ಲಿ ಭರ್ಜರಿ ಪ್ರದರ್ಶನ
  • 2ನೇ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿ 3ನೇ ದಿನ ಬಾಕ್ಸ್ ಆಫೀಸ್​ನಲ್ಲಿ ಕಲೆಕ್ಷನ್ ಮಾಡಿದ್ದೆಷ್ಟು..?

ಡಾರ್ಲಿಂಗ್​ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ರಂದು ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಕಲ್ಕಿ 2898 ಎಡಿ ರಿಲೀಸ್ ಆದ ಮೊದಲ ದಿನದಿಂದ ​ಈಗಿನವರೆಗೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸದ್ಯ ಕಲ್ಕಿ ಸಿನಿಮಾ ಬಿಡುಗಡೆ ಆಗಿ ಮೂರು ದಿನ ಮುಗಿದಿದ್ದು, ಮೂರನೇ ದಿನ ಸಿನಿಮಾ ಅದ್ಧೂರಿ ಕಲೆಕ್ಷನ್ ಮಾಡಿದೆ.

publive-image

ಇದನ್ನೂ ಓದಿ: ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

ವಿಶೇಷವೆಂದರೆ ಎರಡನೇ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಏರಿಸಿಕೊಂಡಿದೆ. ಅಂದಹಾಗೆ ಸಿನಿಮಾದ ಬಿಡುಗಡೆ ಆದ ಮೂರನೇ ದಿನ ಅಂದರೆ ಶನಿವಾರ ‘ಕಲ್ಕಿ 2898 ಎಡಿ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಹೌದು, ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆದ ದಿನ ಭಾರತದಲ್ಲಿ 95.30 ಕೋಟಿ ರೂಪಾಯಿ ಹಣ ಗಳಿಸಿತ್ತು. ಆ ಮೂಲಕ ಈ ಹಿಂದೆ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿ ದಾಖಲೆ ಮಾಡಿದ್ದ ಕೆಲವು ಸಿನಿಮಾಗಳ ದಾಖಲೆಯನ್ನು ಮುರಿದಿತ್ತು. ಆದರೆ ಎರಡನೇ ದಿನದ ಗಳಿಕೆಯಲ್ಲಿ ತುಸು ಇಳಿಮುಖ ಕಂಡು ಬಂದಿತ್ತು. ಅಂದರೆ ಎರಡನೇ ದಿನ ಭಾರತದಲ್ಲಿ 54 ಕೋಟಿ ಹಣವನ್ನು ಗಳಿಸಿ 200 ಕೋಟಿ ಗಳಿಕೆ ಮಾಡಿದೆ.

publive-image


">June 30, 2024


ಇದೀಗ ಮೂರನೇ ದಿನ ‘ಕಲ್ಕಿ 2898 ಎಡಿ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಎರಡನೇ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿ ಶನಿವಾರದಂದು ಭಾರತದ ಬಾಕ್ಸ್ ಆಫೀಸ್​ನಲ್ಲಿ 67.1 ಕೋಟಿ ರೂಪಾಯಿ ಹಣ ಗಳಿಸಿದೆ ಎನ್ನಲಾಗುತ್ತಿದೆ. ಎರಡನೇ ದಿನಕ್ಕೆ ಹೋಲಿಸಿದರೆ ಶನಿವಾರ ಕಲೆಕ್ಷನ್​ನಲ್ಲಿ 50% ಏರಿಕೆಯಾಗಿದೆ. ಶನಿವಾರ ವೀಕೆಂಡ್ ಆಗಿದ್ದ ಕಾರಣ ಕೆಲಕ್ಷನ್​ನಲ್ಲಿ ಏರಿಕೆಯಾಗಿದೆ. ಆ ಮೂಲಕ ‘ಕಲ್ಕಿ 2898 ಎಡಿ’ ಸಿನಿಮಾವು ಭಾರತದಲ್ಲಿ ಕೇವಲ ಮೂರು ದಿನಕ್ಕೆ 200 ಕೋಟಿ ಕಲೆಕ್ಷನ್ ಅನ್ನು ದಾಟಿದೆ. ಭಾರತದಲ್ಲಿ ಮೂರು ದಿನದಲ್ಲಿ ‘ಕಲ್ಕಿ’ ಸಿನಿಮಾ ಸುಮಾರು 225 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಜಗತ್ತಿನಾದ್ಯಂತ ಕೇವಲ ಮೂರು ದಿನಗಳಲ್ಲಿ 415 ಕೋಟಿ ಕಲೆಕ್ಷನ್​ ಆಗಿದೆ.

publive-image

ಈ ಸಿನಿಮಾದಲ್ಲಿ ನಟ ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾಣಿ ಒಟ್ಟಿಗೆ ನಟಿಸಿರುವ ‘ಕಲ್ಕಿ’ ಸಿನಿಮಾ ಪೌರಾಣಿಕ ಕತೆಯ ಜೊತೆಗೆ ಭವಿಷ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅವರ ಮಾವ ಅಶ್ವಿನ್ ದತ್ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಹಲವು ಸ್ಟಾರ್ ನಟ-ನಟಿಯರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment